ಸಾರಾಂಶ
ಕನಕಪುರದ ಅರಳಾಳು ಗ್ರಾಮದಲ್ಲಿ ಪದೇಪದೇ ವಿದ್ಯುತ್ ಕಡಿತದಿಂದ ಬೇಸತ್ತ ಗ್ರಾಮಸ್ಥರು ಸೋಮವಾರ ಕುರುಪೇಟೆಯ ಬೆಸ್ಕಾಂ ಕಚೇರಿ ಮುಂದೆ ಧರಣಿ ನಡೆಸಿದರು.
-ಗ್ರಾಮಸ್ಥರಿಂದ ಕುರುಪೇಟೆಯ ಬೆಸ್ಕಾಂ ಕಚೇರಿ ಮುಂದೆ ಧರಣಿ
ಕನ್ನಡಪ್ರಭ ವಾರ್ತೆ ಕನಕಪುರಅರಳಾಳು ಗ್ರಾಮದಲ್ಲಿ ಪದೇಪದೇ ವಿದ್ಯುತ್ ಕಡಿತದಿಂದ ಬೇಸತ್ತ ಗ್ರಾಮಸ್ಥರು ಸೋಮವಾರ ಕುರುಪೇಟೆಯ ಬೆಸ್ಕಾಂ ಕಚೇರಿ ಮುಂದೆ ಧರಣಿ ನಡೆಸಿದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಎ.ಬಿ.ನಾಗೇಂದ್ರ ಮಾತನಾಡಿ, ಕಳೆದ ಎರಡು ತಿಂಗಳಿಂದ ಯಾವುದೇ ಮುನ್ನೆಚ್ಚರಿಕೆ ನೀಡದೆ ವಿದ್ಯುತ್ ಕಡಿತ ಮಾಡುತ್ತಿದ್ದು ಅರಳಾಳು ಗ್ರಾಮಸ್ಥರು, ಸಿಲ್ಕ್ ಫ್ಯಾಕ್ಟರಿ ಮಾಲೀಕರು ಹಾಗೂ ಕಾರ್ಮಿಕರು ಕುಡಿಯುವ ನೀರಿಗೂ ಅಲೆದಾಡುವಂತಾಗಿದೆ. ಸಂಬಂಧಿಸಿದ ಬೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಿಲ್ಲ. ವಿದ್ಯುತ್ ಕಡಿತದಿಂದಾಗಿ ಇದನ್ನೇ ನಂಬಿರುವ ಫ್ಯಾಕ್ಟರಿ ಮಾಲೀಕರು, ಕಾರ್ಮಿಕರು, ಗ್ರಾಮಸ್ಥರು ಬೀದಿಗಿಳಿದು ಹೋರಾಟ ಮಾಡಬೇಕಿದೆ. ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ನಿರಂತರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ಗ್ರಾಮದ ಮುಖಂಡ ಜಗದೀಶ್ ಮಾತನಾಡಿ, ಬೆಸ್ಕಾಂ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಕಂಡೂ ಕಾಣದಂತೆ ಜಾನಕುರುಡುತನ ಪಾಲಿಸುತ್ತಿದ್ದಾರೆ. ಅಧಿಕಾರಿಗಳು ನಿರ್ಲಕ್ಷ ಭಾವನೆ ತೊರೆದು ಸಮಸ್ಯೆ ಬಗೆಹರಿಸಿದಿದ್ದಲ್ಲಿ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು. ಧರಣಿಯಲ್ಲಿ ಗ್ರಾಮ ಮುಖಂಡರಾದ ಬಸವರಾಜು, ಮಂಜು, ರಾಜೇಶ್, ಸುರೇಶ್ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.