ಸಾರಾಂಶ
ಅರಸೀಕೆರೆ ತಾಲೂಕಿನ ಎಲ್ಲಾ ಸರ್ಕಾರಿ ಪ್ರಯೋಗ ಶಾಲೆಗಳಲ್ಲಿ ಏಕರೂಪ ದಾಖಲಾತಿ ಮಾಡಿಸಿ ಪ್ರಯೋಗ ಶಾಲಾ ಫಲಿತಾಂಶ ನಮೂದಿಸುತ್ತಿರುವುದು ಪ್ರಗತಿಯ ಹಾದಿ ಎಂದು ತಾಲೂಕು ಅರೋಗ್ಯಾಧಿಕಾರಿ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿಗಳ ಸಂಘವನ್ನು ತಾಲೂಕು ಆರೋಗ್ಯಾಧಿಕಾರಿ ಡಾ. ತಿಮ್ಮರಾಜು ಶ್ಲಾಘಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಎಲ್ಲಾ ಸರ್ಕಾರಿ ಪ್ರಯೋಗ ಶಾಲೆಗಳಲ್ಲಿ ಏಕರೂಪ ದಾಖಲಾತಿ ಮಾಡಿಸಿ ಪ್ರಯೋಗ ಶಾಲಾ ಫಲಿತಾಂಶ ನಮೂದಿಸುತ್ತಿರುವುದು ಪ್ರಗತಿಯ ಹಾದಿ ಎಂದು ತಾಲೂಕು ಅರೋಗ್ಯಾಧಿಕಾರಿ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿಗಳ ಸಂಘವನ್ನು ತಾಲೂಕು ಆರೋಗ್ಯಾಧಿಕಾರಿ ಡಾ. ತಿಮ್ಮರಾಜು ಶ್ಲಾಘಿಸಿದರು.ತಾಲೂಕು ಅರೋಗ್ಯಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಏಕರೂಪ ರಿಜಿಸ್ಟರ್, ದಿನದರ್ಶಿಕೆ ಚಾರ್ಟ್ ಹಾಗೂ ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.ಜೆಸಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸುರೇಶ್ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರಯೋಗಾಲಯ ವರದಿ ಅತ್ಯಮೂಲ್ಯ ಹಾಗೂ ಮಹತ್ತರ ಪಾತ್ರ ವಹಿಸುತ್ತವೆ. ಬಹುಭಾಗ ಚಿಕಿತ್ಸೆ ಲ್ಯಾಬ್ ವರದಿಯನ್ನು ಅವಲಂಬಿಸಿದೆ. ಪ್ರಯೋಗಾಲಯಗಳ ಸ್ವಚ್ಛತೆ ಹಾಗೂ ತಂತ್ರಜ್ಞರ ಅರೋಗ್ಯದ ಜವಾಬ್ದಾರಿ ಬಗ್ಗೆ ತಿಳಿಸಿದರು.
ನೌಕರರ ಸಂಘದ ಖಜಾಂಚಿ ಎಚ್‌ಸಿ ಪ್ರಭು, ಕೊರೋನಾ ಸಂದರ್ಭದಲ್ಲಿ ಲ್ಯಾಬ್ ಟೆಕ್ ಗಳು ಸಮಾಜಕ್ಕೆ ನೀಡಿದ ಕೊಡುಗೆ ಹಾಗೂ ಕಾಳಜಿಯನ್ನು ನೆನಪಿಸಿಕೊಟ್ಟರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್, ಲ್ಯಾಬ್ ಟೆಕ್ ಸಂಘದ ಕಾಳಜಿ ಹಾಗೂ ಇಲಾಖೆಯಲ್ಲಿ ಅವರು ನಿರ್ವಹಿಸುತ್ತಿರುವ ಕಾರ್ಯ ಮಹತ್ತರವಾದುದು. ಮುಖ್ಯವಾಹಿನಿಗೆ ಬಾರದೆ ಜನಸೇವೆ ಗೈಯುತ್ತಿರುವುದು ತೆರೆ ಮರೆಯ ನಾಯಕರಂತೆ ಎಂದರು.
ಪ್ರಯೋಗಾಲಯ ತಂತ್ರಜ್ಞರ ಸಂಘದ ಜಿಲ್ಲಾ ಅಧ್ಯಕ್ಷ ಹಾಗೂ ಕಾರ್ಯಕ್ರಮದ ರುವಾರಿ ಬಿ.ಪರಮೇಶ್, ನೌಕರರ ಸಂಘದ ಗೌರವ ಅಧ್ಯಕ್ಷ ಶೇಖರಪ್ಪ. ಹಿರಿಯ ತಂತ್ರಜ್ಞ ರಾಘವ್, ಕಮಲಾಕ್ಷಿ, ಭಾಗೀರಥಿ, ರಾಜಮ್ಮ ಉಪಸ್ಥಿತರಿದ್ದರು.ತಾಲೂಕು ಅರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಯೋಗಾಲಯ ತಂತ್ರಜ್ಞರನ್ನು ಅಭಿನಂಧಿಸಲಾಯಿತು.