ಸಾರಾಂಶ
ನಾಡಿನ ಇತಿಹಾಸದಲ್ಲಿ ಹಿಂದುಳಿದ ವರ್ಗದವರನ್ನು ಮುಖ್ಯವಾಹನಿಗೆ ತರಲು ತಮ್ಮ ಬದುಕನ್ನು ಮೂಡಿಪಾಗಿಸಿದ್ದವರು ಅರಸು. ಇವರ ವಿಚಾರಧಾರೆ ದೀನ ದಲಿತರ ಬಾಳದೀವಿಗೆ ಆಗಿದೆ. ಭಾರತ ದೇಶದ ಇತಿಹಾಸದಲ್ಲಿಯೇ ಉಳುವವನಗೆ ಭೂಮಿ ಕಾಯ್ದೆ ಜಾರಿ ತಂದು ಕ್ರಾಂತಿಕಾರಿ ಬದಲಾವಣೆ ಮುಂದಾದದರು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಅರಸು ಕೆಳಸ್ತರ ಸಮುದಾಯದ ಜನರ ನಾಡಿ ಮಿಡಿತ ಅರಿತು ಅವರ ಬದುಕಿಗೆ ಧ್ವನಿಯಾಗಿದ್ದರು ಎಂದು ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.ಪಟ್ಟಣದಲ್ಲಿ ಸ್ಪಂದನಾ ಫೌಂಡೇಷನ್, ಕನ್ನಡ ಕಲಾಸಂಘ, ಬೆಂಗಳೂರು ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ದೇವರಾಜ ಅರಸು ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಡಿನ ಇತಿಹಾಸದಲ್ಲಿ ಹಿಂದುಳಿದ ವರ್ಗದವರನ್ನು ಮುಖ್ಯವಾಹನಿಗೆ ತರಲು ತಮ್ಮ ಬದುಕನ್ನು ಮೂಡಿಪಾಗಿಸಿದ್ದವರು ಅರಸು. ಇವರ ವಿಚಾರಧಾರೆ ದೀನ ದಲಿತರ ಬಾಳದೀವಿಗೆ ಆಗಿದೆ. ಭಾರತ ದೇಶದ ಇತಿಹಾಸದಲ್ಲಿಯೇ ಉಳುವವನಗೆ ಭೂಮಿ ಕಾಯ್ದೆ ಜಾರಿ ತಂದು ಕ್ರಾಂತಿಕಾರಿ ಬದಲಾವಣೆ ಮುಂದಾದದರು ಎಂದರು.ಕೆಳ ಸ್ತರ ಜನರ ಏಳ್ಗೆಗಾಗಿ ಶ್ರಮಿಸಿದರು. ಪ್ರಾಮಾಣಿಕ ನೇರ ನಡೆ, ದಿಟ್ಟ ನಿರ್ಧಾರ ಹಿಂದಿನ ಆಡಳಿತ ನಡೆಸುವವರಿಗೆ ಮಾದರಿಯಾಗಬೇಕಿದೆ. ಕಳಂಕ ರಹಿತ ರಾಜಕಾರಣಿಯಾಗಿದ್ದ ಇವರ ವಿಚಾರಧಾರೆ ಅಜಾರಮರವಾಗಿದೆ. ನಗರ ಪ್ರದೇಶದ ಮಕ್ಕಳಿಗೆ ಮೀಸಲಾಗಿದ್ದ ಉನ್ನತ ಶಿಕ್ಷಣ, ಉದ್ಯೋಗವನ್ನುಗ್ರಾಮೀಣ ಪ್ರದೇಶದ ಹಿಂದುಳಿದ ವರ್ಗದ ಮಕ್ಕಳಿಗಾಗಿ ದೊರಕಿಸಲು ಉಚಿತವಾಗಿ ಹಿಂದುಳಿದ ವರ್ಗಗಳ ವಸತಿ ನಿಲಯ, ಶಿಕ್ಷಣ ಸ್ಥಾಪಿಸಿದರು ಎಂದು ನೆನೆದರು.
ಸಮಾಜದಲ್ಲಿನ ಅಸಮಾನತೆ ತೊಲಗಿಸಲು ಅನಿಷ್ಟ ಪದ್ಧತಿಗಳಾದ ಜೀತಪದ್ಧತಿ, ಮೌಢ್ಯ, ಮಲಹೊರುವ ಪದ್ಧತಿಯನ್ನು ನಿಷೇಧಿಸಿ ಸರ್ವರಿಗೂ ಸಮಪಾಲು, ಸಮಬಾಳು ದೊರಕಿಸುವರೂವಾರಿಯಾದರು. ಕರ್ನಾಟಕದ ಏಕೀಕರಣಕ್ಕಾಗಿ ಮೈಸೂರು ರಾಜ್ಯವನ್ನು ಎಂದು ಮರುನಾಮಕರಣ ಮಾಡಿ ವಿಶ್ವಕ್ಕೆ ಮಾದರಿ ರಾಜ್ಯವಾಗಿಸಲು ಶ್ರಮಿಸಿದರು ಎಂದರು.ಆದರ್ಶ ಸುಗಮ ಸಂಗೀತ ಅಕಾಡೆಮಿಯಿಂದ ವಿವಿಧ ಗೀತೆಗಳನ್ನು ಹಾಡಿದರು. ಅರಸು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಮಕ್ಕಳಿಗೆ ಲೇಖನಿ ಸಾಮಗ್ರಿ ವಿತರಿಸಲಾಯಿತು. ಈ ವೇಳೆ ತ್ರಿವೇಣಿ, ಕವಿತಾ ಉಪಸ್ಥಿತರಿದ್ದರು.