ಕೆ.ಆರ್. ನಗರದಲ್ಲಿ ಮೈಸೂರಿನ ಜೆಡಿಎಸ್ ಮುಖಂಡರಿಂದ ಮತಯಾಚನೆ

| Published : Apr 23 2024, 12:47 AM IST / Updated: Apr 23 2024, 12:27 PM IST

ಕೆ.ಆರ್. ನಗರದಲ್ಲಿ ಮೈಸೂರಿನ ಜೆಡಿಎಸ್ ಮುಖಂಡರಿಂದ ಮತಯಾಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಎಚ್.ಡಿ. ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ಜಯಗಳಿಸಿದರೆ ಆನಂತರ ಕೇಂದ್ರ ಸಂಪುಟದಲ್ಲಿ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ರು. ಅನುದಾನ ತರುವ ಸಾಮರ್ಥ್ಯ ಪಡೆಯಲಿದ್ದಾರೆ ಹಾಗಾಗಿ ಇದನ್ನು ಅರಿತು ಎಲ್ಲರೂ ಅವರಿಗೆ ಮತ ನೀಡಬೇಕೆಂದು

 ಮೈಸೂರು :  ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಆರ್. ನಗರದ ವಾರ್ಡ್ ನಂಬರ್ 5ರಲ್ಲಿ ಎನ್.ಡಿ.ಎ ಅಭ್ಯರ್ಥಿಯಾದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪರವಾಗಿ ಮೈಸೂರಿನ ಜೆಡಿಎಸ್, ಬಿಜೆಪಿಯ ಮುಖಂಡರು ಮತಯಾಚಿಸಿದರು.

ಈ ವೇಳೆ ಮುಖಂಡ ಸೋಮು ಮಾತನಾಡಿ, ಎಚ್.ಡಿ. ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ಜಯಗಳಿಸಿದರೆ ಆನಂತರ ಕೇಂದ್ರ ಸಂಪುಟದಲ್ಲಿ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ರು. ಅನುದಾನ ತರುವ ಸಾಮರ್ಥ್ಯ ಪಡೆಯಲಿದ್ದಾರೆ ಹಾಗಾಗಿ ಇದನ್ನು ಅರಿತು ಎಲ್ಲರೂ ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು.

ಒಕ್ಕಲಿಗರ ಸಂಘದ ನಿರ್ದೇಶಕ ಎ. ರವಿ ಮಾತನಾಡಿ, ಎಚ್.ಡಿ. ಕುಮಾರಸ್ವಾಮಿ ಅವರು ಉತ್ತಮ ಜನಪರ ಕೆಲಸ ಮಾಡಿರುವುದರಿಂದ ಎಲ್ಲರೂ ಅವರನ್ನು ಗೆಲ್ಲಿಸಬೇಕೆಂದು ಕೋರಿದರು. ಮೈಸೂರಿನ ಹಲವಾರು ಜೆಡಿಎಸ್ ಮುಖಂಡರು, ಸ್ಥಳೀಯ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.