ಸಾರಾಂಶ
ಅರಣ್ಯ ಇಲಾಖೆಯವರು 18. 40 ಎಕರೆ ಊರುಡುವೆ ಒತ್ತುವರಿ ಜಾಗವನ್ನು ತೆರವುಗೊಳಿಸಿರುವ ಘಟನೆ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಅರಣ್ಯ ಇಲಾಖೆಯವರು 18. 40 ಎಕರೆ ಊರುಡುವೆ ಒತ್ತುವರಿ ಜಾಗವನ್ನು ತೆರವುಗೊಳಿಸಿರುವ ಘಟನೆ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಸರ್ವೆ ನಂ.1/10ರಲ್ಲಿ 18.40 ಎಕರೆ ಊರುಡುವೆ ಜಾಗವನ್ನು ವಸುಪ್ರದ ಪ್ಲಾಂಟೇಷನ್ ಅವರು ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿಕೊಂಡಿದ್ದರು. ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಒತ್ತುವರಿಯನ್ನು ಪತ್ತೆಹಚ್ಚಿದ್ದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗು ವಿಚಾರಣಾಧಿಕಾರಿಯವರು ಒತ್ತುವರಿದಾರರ ವಿಚಾರಣೆ ನಡೆಸಿದ್ದರು. ವಿಚಾರಣೆ ಸಂದರ್ಭ ಒತ್ತುವರಿದಾರರು, ಆ ಜಾಗವನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಒಪ್ಪಿಗೆ ಸೂಚಿಸಿದ ನಂತರ 29.11.2024 ರಂದು ಒತ್ತುವರಿ ತೆರವಿಗೆ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿಗಳು ಆದೇಶ ಹೊರಡಿಸಿದ್ದರು.ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಹಾಗು ಎಸಿಎಫ್ ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್ ಮತ್ತು ಸಿಬ್ಬಂದಿ ಈಚೆಗೆ ಒತ್ತುವರಿಯನ್ನು ಜಾಗವನ್ನು ತೆರವುಗೊಳಿಸಿ, ಜಾನುವಾರು ಕಂದಕ ನಿರ್ಮಿಸಿ ಅರಣ್ಯ ಇಲಾಖೆಯ ಸುಪರ್ದಿಗೆ ಪಡೆದುಕೊಂಡಿದ್ದಾರೆ. ಶಾಂತಳ್ಳಿ ಡಿಆರ್‌ಎಫ್‌ಒ ಸತೀಶ್, ಅರಣ್ಯ ರಕ್ಷಕರಾದ ವಿಶ್ವಕರಿಮಲ್ಲಪ್ಪನವರ್, ವೀಕ್ಷಕ ಸುಂದರ, ಲಖಿತ್ ಇದ್ದರು.