ಅರೆಕಾಡು: ನ.14ರಂದು ಕೊಡವ ಸಾಂಸ್ಕೃತಿಕ ನಾಡೊರ್ಮೆ

| Published : Oct 16 2024, 12:46 AM IST

ಅರೆಕಾಡು: ನ.14ರಂದು ಕೊಡವ ಸಾಂಸ್ಕೃತಿಕ ನಾಡೊರ್ಮೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಕಾಡು ಕೊಡವ ವೆಲ್ಫೇರ್ ಐಂಡ್ ರಿಕ್ರಿಯೇಶನ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಅರೆಕಾಡು ರಿವರಾರ್ ರೆಸಾರ್ಟ್‌ನಲ್ಲಿ ನ.14ರಂದು ಕೊಡವ ಸಾಂಸ್ಕೃತಿಕ ನಾಡೊರ್ಮೆ ಆಯೋಜಿಸಲು ತೀರ್ಮಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಕಾಡು ಕೊಡವ ವೆಲ್ಫೇರ್ ಐಂಡ್ ರಿಕ್ರಿಯೇಶನ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಅರೆಕಾಡು ರಿವರಾರ್ ರೆಸಾರ್ಟ್‌ನಲ್ಲಿ ನ.14ರಂದು ಕೊಡವ ಸಾಂಸ್ಕೃತಿಕ ನಾಡೊರ್ಮೆ ಆಯೋಜಿಸಲು ತೀರ್ಮಾನಿಸಲಾಗಿದೆ.

ಈ ಬಾಪ್ತು ರಿವರಾರ್ ರೆಸಾರ್ಟ್‌ನಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ ಮಹೇಶ್ ನಾಚಯ್ಯ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಅಸೋಸಿಯೇಷನ್ ಅಧ್ಯಕ್ಷ ಕುಕ್ಕೆರ ಜಯಾ ಚಿಣ್ಣಪ್ಪ ಮುಂದಾಳತ್ವದಲ್ಲಿ ನಡೆಸಲಾಯಿತು.

ನಾಡೊರ್ಮೆಗೆ ಶಾಸಕ ಡಾ.ಮಂತರ್ ಗೌಡ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ, ವಿಧಾನ ಪರಿಷತ್ತು ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಅವರನ್ನು ಆಹ್ವಾನಿಸಲು ನಿರ್ಧರಿಸಲಾಯಿತು.

ಅರೆಕಾಡು ವಿಭಾಗದ ಹಿರಿಯ ಚೇತನರು ಹಾಗು ಆ ಭಾಗದ ಕೀರ್ತಿವೆತ್ತವರನ್ನು ಗುರುತಿಸಿ ಸನ್ಮಾನಿಸಲಾಗುವುದು. ಕೊಡವ ಸಾಂಸ್ಕೃತಿಕ ವೈಭವ ಬಿಂಬಿಸುವ ನಾಡೊರ್ಮೆಯಲ್ಲಿ ವಿಚಾರ ಮಂಡನೆ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದೆಂದು ಅಧ್ಯಕ್ಷ ಮಹೇಶ್ ನಾಚಯ್ಯ ಮಾಹಿತಿ ಇತ್ತರು.

ಅಕಾಡೆಮಿ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಗಿರಿಶ್, ಸದಸ್ಯರಾದ ಚೊಟ್ಟೆಯಂಡ ಸಂಜು ಕಾವೇರಪ್ಪ, ಪುತ್ತರಿರ ಪಪ್ಪು ತಿಮ್ಮಯ್ಯ, ನಾಯಂದಿರ ಶಿವಾಜಿ, ಮೊಳ್ಳೆಕುಟ್ಟಡ ದಿನು ಬೋಜಪ್ಪ, ಪೊನ್ನಿರ ಗಗನ್, ಅಸೋಸಿಯೇಷನ್ ಉಪಾಧ್ಯಕ್ಷ ಬಲ್ಲಚಂಡ ವಿಠಲ್ ಕಾವೇರಪ್ಪ, ಕಾರ್ಯದರ್ಶಿ ನೆಲ್ಲಮಕ್ಕಡ ಪಾವನ್, ಜಂಟಿ ಕಾರ್ಯದರ್ಶಿ ಅಡ್ವೊಕೇಟ್ ಕುಕ್ಕೆರ ಅಯ್ಯಪ್ಪ, ಜಂಟಿ ಖಜಾಂಚಿ ಬಿದ್ದಂಡ ಬೀಮಯ್ಯ, ಕಾಡುಮಂಡ ಚ್ಯಾಂಡ್ಲರ್, ಪ್ರಕಾಶ್, ಕುಕ್ಕೆರ ಗಣೇಶ್, ಕುಕ್ಕೆರ ಗಣೇಶ, ನೆಲ್ಲಮಕ್ಕಡ ಆಕಾಶ್, ಕುಕ್ಕೆರ ಕುಶ, ರೆಸಾರ್ಟ್‌ ಮಾಲೀಕ ಮುಕ್ಕಾಟಿರ ವಿನಯ್ ಹಾಗೂ ಶಿಲ್ಪ ದಂಪತಿ ಹಾಜರಿದ್ದರು.