ರಾಮನಗರ: ನಗರದ ಅರ್ಕಾವತಿ ಬಡಾವಣೆಯಲ್ಲಿನ ಉದ್ಯಾನವನ ನಿರ್ವಹಣೆ ಹೊಣೆಯನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮತ್ತು ಆಯುಕ್ತ ಡಾ.ಜಯಣ್ಣರವರು ಸ್ವಾಭಿಮಾನಿ ಸೇವಾ ಸಮಿತಿಗೆ ಶುಕ್ರವಾರ ಹಸ್ತಾಂತರಿಸಿದರು.
ಉದ್ಯಾನವನದಲ್ಲಿ ನಡೆದ ಸಮಾರಂಭದಲ್ಲಿ ಸಮಿತಿ ಅಧ್ಯಕ್ಷ ಗವಿಯಪ್ಪ ಮತ್ತು ಪದಾಧಿಕಾರಿಗಳಿಗೆ ಉದ್ಯಾನವನ ನಿರ್ವಹಣೆ ಹೊಣೆ ಹಸ್ತಾಂತರಿಸಿ ಮಾತನಾಡಿದ ಕೆ.ಶೇಷಾದ್ರಿ, ನಗರದಲ್ಲಿ ನಿರ್ಮಾಣಗೊಂಡಿರುವಬಹುತೇಕ ಅನಧಿಕೃತ ಬಡಾವಣೆಗಳು ರಸ್ತೆ, ಚರಂಡಿ, ಉದ್ಯಾನವನ ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಅಲ್ಲದೆ, ನಗರದಲ್ಲಿ ಶೇಕಡ 52ರಷ್ಟು ಭಾಗದಲ್ಲಿ ಯುಜಿಡಿ ಸಂಪರ್ಕವೇ ಇಲ್ಲ ಎಂದರು.
ನಗರದ ಎಲ್ಲಾ ಭಾಗಕ್ಕೂ ಯುಜಿಡಿ ಸಂಪರ್ಕ ಕಲ್ಪಿಸಲು ಸುಮಾರು 200 ಕೋಟಿ ಬೇಕಾಗುತ್ತದೆ. ನಾನು ಅಧ್ಯಕ್ಷನಾದಾಗಿನಿಂದಲೂ ನಮ್ಮ ಜಿಲ್ಲೆಯವರೇ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡುತ್ತಲೇ ಬಂದಿದ್ದೇನೆ. ಅವರು ಅನುದಾನ ನೀಡುವುದಾಗಿ ಭರವಸೆ ನೀಡುತ್ತಲೇ ಬಂದಿದ್ದಾರೆ. ಅವರು ಮುಖ್ಯಮಂತ್ರಿಯಾದರೆ ಯುಜಿಡಿ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಅನುದಾನ ಬರುತ್ತದೆ. ಅಲ್ಲಿವರೆಗೆ ಕಾಯಬೇಕಿದೆ ಎಂದು ಹೇಳಿದರು.ನಗರಸಭೆಗೆ ಬಂದಿದ್ದ ಎನ್ ಜಿಟಿಯ 33 ಕೋಟಿ ಅನುದಾನದಲ್ಲಿ ವಾರ್ಡ್-1 ಮತ್ತು 2ರಲ್ಲಿ ಯುಜಿಡಿಗೆ ಯೋಜನೆ ರೂಪಿಸಲಾಗಿದೆ. ಅನುದಾನ ಆಧರಿಸಿ ಮುಂದೆಯೂ ಹಂತ ಹಂತವಾಗಿ ವಿಸ್ತರಿಸಲಾಗುವುದು. ಈ ಮೊದಲು
ನಗರಸಭೆಯಲ್ಲಿ ಸುಮಾರು 6 ಕೋಟಿ ತೆರಿಗೆ ಸಂಗ್ರಹವಾಗುತ್ತಿತ್ತು. ನಾನು ಅಧ್ಯಕ್ಷನಾದ ಬಳಿಕ ಅದನ್ನು 10 ಕೋಟಿ ರು.ಗೆ ಏರಿಕೆಯಾಗಿದೆ. ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡೇ ಮಾದರಿ ನಗರ ನಿರ್ಮಾಣಕ್ಕೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದೇವೆ ಎಂದು ಕೆ.ಶೇಷಾದ್ರಿ ತಿಳಿಸಿದರು.
ಆಯುಕ್ತ ಡಾ.ಜಯಣ್ಣ ಮಾತನಾಡಿ, ಉದ್ಯಾನ ನಿರ್ವಹಣೆಗೆ ಸ್ವಯಂ ಪ್ರೇರಣೆಯಿಂದ ಸ್ವಾಭಿಮಾನಿ ಸೇವಾ ಸಮಿತಿ ಮುಂದೆ ಬಂದಿರುವುದು ಶ್ಲಾಘನೀಯ. ಒಳ್ಳೆಯ ಸಾಂಪ್ರದಾಯಕ್ಕೆ ಸಾಕ್ಷಿಯಾಗಿದ್ದೀರಿ. ನಗರದಲ್ಲಿ ಖಾಸಗಿ ನಿರ್ವಹಣೆಗೆ ವಹಿಸಿರುವ ಎರಡನೇ ಉದ್ಯಾನ ಇದಾಗಿದೆ. ಈಗಾಗಲೇ ಕುವೆಂಪು ಉದ್ಯಾನವನ್ನು ಸ್ಥಳೀಯರಿಗೆ ವಹಿಸಲಾಗಿದೆ. ಇದು ಪ್ರೇರಣದಾಯಕ ಕೆಲಸ ಎಂದರು.
ಸಮಿತಿ ಅಧ್ಯಕ್ಷ ಎಸ್. ಗವಿಯಪ್ಪ ಮಾತನಾಡಿ, ನಗರಸಭೆಯು ಸಮಿತಿ ಮೇಲೆ ನಂಬಿಕೆ ಇಟ್ಟು ಉದ್ಯಾನ ನಿರ್ವಹಣೆಯ ಜವಾಬ್ದಾರಿ ಕೊಟ್ಟಿದೆ. ಉದ್ಯಾನವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ ನಂಬಿಕೆ ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು.ನಗರಸಭೆ ಸದಸ್ಯ ಕೆ. ರಮೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ, ಮುಖಂಡರಾದ ಆನಂದ್, ಆರ್. ನಾಗರಾಜು, ಚಂದ್ರು ಮಾತನಾಡಿದರು.
ನಗರಸಭಾ ಸದಸ್ಯೆ ಜಯಲಕ್ಷ್ಮಮ್ಮ, ಡಾ.ನಯಾಜ್ ಅಹಮದ್, ಚಿಕ್ಕೇನಹಳ್ಳಿ ನಾಗರಾಜ್, ಸಮಿತಿ ಸಂಸ್ಥಾಪಕ ಅಧ್ಯಕ್ಷ ಸಿ. ಸಿದ್ದರಾಜು, ಉಪಾಧ್ಯಕ್ಷ ಪುಟ್ಟಸ್ವಾಮಿ, ಖಜಾಂಚಿ ಶಿವಣ್ಣ, ಸದಸ್ಯರಾದ ಕೆಂಗಲ್ ವಿನಯಕುಮಾರ್,ಬಸವರಾಜು, ಮರಿಸ್ವಾಮಿ, ಆರ್. ನಾಗರಾಜು, ಲಕ್ಷ್ಮಿ ಕುಮಾರ್, ನಾಗವೀರಯ್ಯ, ಶಿವಲಿಂಗಯ್ಯ, ರಾಮು, ವೆಂಕಟೇಶ್, ಹೋಬಯ್ಯ, ಸುರೇಂದ್ರಕುಮಾರ್, ಜವರಯ್ಯ, ಗಂಗಾಧರ್, ಪುರುಷೋತ್ತಮ್, ಜೈಪ್ರಕಾಶ್, ಮಿಲಿಟರಿ ವೆಂಕಟೇಶ್, ಸಿದ್ದಪ್ಪಾಜಿ ಮತ್ತಿತರರು ಉಪಸ್ಥಿತರಿದ್ದರು.
ಕೋಟ್ ............ಸ್ವಾಭಿಮಾನಿ ಸೇವಾ ಸಮಿತಿಯವರು ಉದ್ಯಾನವನ ನಿರ್ವಹಣೆಗೆ ಮುಂದೆ ಬಂದಿರುವುದು ಮಾದರಿ ನಡೆ. ಸಾರ್ವಜನಿಕ ಸ್ವತ್ತನ್ನು ರಕ್ಷಿಸಿ ನಿರ್ವಹಿಸುವ ಪ್ರಜ್ಞೆಯು ಜನರಲ್ಲಿ ಬಂದಾಗ ಮಾತ್ರ ಬದಲಾವಣೆ ಸಾಧ್ಯ. ಆ ನಿಟ್ಟಿನಲ್ಲಿ ನಾಗರಿಕರು ನಗರಸಭೆಗೆ ಸಹಕರಿಸಬೇಕು. ಸ್ವಚ್ಛ ರಾಮನಗರ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು.
-ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ16ಕೆಆರ್ ಎಂಎನ್ 3.ಜೆಪಿಜಿ
ರಾಮನಗರದ ಅರ್ಕಾವತಿ ಬಡಾವಣೆಯಲ್ಲಿನ ಉದ್ಯಾನವನ ನಿರ್ವಹಣೆ ಹೊಣೆಯನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮತ್ತು ಆಯುಕ್ತ ಡಾ.ಜಯಣ್ಣರವರು ಸ್ವಾಭಿಮಾನಿ ಸೇವಾ ಸಮಿತಿಗೆ ಹಸ್ತಾಂತರಿಸಿದರು.