ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸಭೆಯನ್ನು ಆಸ್ಪತ್ರೆಯ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷ ಶಾಸಕ ಡಾ. ಮಂತರ್ ಗೌಡ ಅಧ್ಯಕ್ಷತೆಯಲ್ಲಿ ನೆಡೆಸಲಾಯಿತು.
ಸೋಮವಾರಪೇಟೆ: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸಭೆಯನ್ನು ಆಸ್ಪತ್ರೆಯ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷ ಶಾಸಕ ಡಾ. ಮಂತರ್ ಗೌಡ ಅಧ್ಯಕ್ಷತೆಯಲ್ಲಿ ನೆಡೆಸಲಾಯಿತು. ಸಭೆಯಲ್ಲಿ ವಿವಿಧ ಸಮಸ್ಯೆಗಳ ಕುರಿತು ಸದಸ್ಯರಿಂದ ಶಾಸಕರು ಮಾಹಿತಿ ಪಡೆದರು. ಸಮಿತಿ ಸದಸ್ಯ ರವೀಶ್ ಮಾತನಾಡಿ, ಆಸ್ಪತ್ರೆಯಲ್ಲಿ ಸುಮಾರು ಹದಿನಾಲ್ಕು ಜನ ವೈದ್ಯರು ಇದ್ದು. ಕೆಲವೊಮ್ಮೆ ಆಸ್ಪತ್ರೆಯಲ್ಲಿ ವೈದ್ಯರೇ ಇರುವುದಿಲ್ಲ, ಆಡಳಿತ ವೈದ್ಯಾಧಿಕಾರಿಗಳಿಗೆ, ಜಿಲ್ಲಾ ವೈದ್ಯಾಧಿಕಾರಿಗಳಿಗೆ ಹೇಳಿ ವೈದ್ಯರ ಸೇವೆಗಾಗಿ ದುಂಬಾಲು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕರಿಗೆ ತಿಳಿಸಿದರು. ಕೂಡಲೇ ಪ್ರತಿಕ್ರಿಯಿಸಿದ ಶಾಸಕರು ವೈದ್ಯರ ನಿಯೋಜನೆ ಮತ್ತು ಹಾಜರಾತಿ ಪರೀಕ್ಷಿಸಿ ಎಲ್ಲಾ ವೈದ್ಯರುಗಳೂ ಸಹ ಜನರ ಸೇವೆಗೆ ಸಿದ್ಧರಿರಬೇಕು ಹಾಗೆ ಕರ್ತವ್ಯಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕೆಂದು ಖಡಕ್ ಸೂಚನೆ ನೀಡಿದರು.
ಸೇವೆಯಲ್ಲಿರುವ ವೈದ್ಯರು ಸಮಯಪಾಲನೆ ಮಾಡಬೇಕೆಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ನೂತನ ವಾಶಿಂಗ್ ಮಶೀನ್, ಡೈಯರ್ ಮಿಶೀನ್ ಅತ್ಯಾಧುನಿಕ ಎಕ್ಸರೇ ಯಂತ್ರ ಸೇರಿದಂತೆ ಸಿಬ್ಬಂದಿಗಳ ವೇತನ ವಿಳಂಬ ಆಗುತ್ತಿರುವ ಬಗ್ಗೆ ಸುದೀರ್ಘ ಮೂರು ತಾಸುಗಳ ಚರ್ಚೆ ನೆಡೆಸಿದ ಶಾಸಕರು ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿ ಪರಿಹಾರ ಮಾರ್ಗಗಳ ಕುರಿತು ಸಭೆಯಲ್ಲಿ ಹಾಜರಿದ್ದ ಜಿಲ್ಲಾ ವೈದ್ಯಾಧಿಕಾರಿ ಡಾಕ್ಟರ್ ಸತೀಶ್ ಗೆ ಸೂಚನೆ ನೀಡಿದರು.ಸಭೆಯಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಝಮಿರ್ ಅಹ್ಮದ್, ಸಮಿತಿ ಸದಸ್ಯರುಗಳಾದ ರಮೇಶ್, ಮಹೇಶ್ ಹಣಕೋಡು, ಸೈಮನ್, ಮಂಜುಳಾ ಹರೀಶ್, ವೈದ್ಯರುಗಳು ಇದ್ದರು.