ಕೆ.ಆರ್‌. ಕ್ಷೇತ್ರ ವ್ಯಾಪ್ತಿಯಲ್ಲಿ ಬಸ್ ತಂಗುದಾಣಗಳ ಉದ್ಘಾಟನೆ

| Published : Jul 15 2024, 01:52 AM IST

ಕೆ.ಆರ್‌. ಕ್ಷೇತ್ರ ವ್ಯಾಪ್ತಿಯಲ್ಲಿ ಬಸ್ ತಂಗುದಾಣಗಳ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ತಂಗುದಾಣಗಳು ಸಾರ್ವಜನಿಕರು, ಪ್ರಯಾಣಿಕರು ಅನುಕೂಲ ಪಡೆದುಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ನೂತನ ಬಸ್ ತಂಗುದಾಣಗಳನ್ನು ಶಾಸಕ ಟಿ.ಎಸ್. ಶ್ರೀವತ್ಸ ಭಾನುವಾರ ಉದ್ಘಾಟಿಸಿದರು.

ಕೆ.ಆರ್ ಕ್ಷೇತ್ರದಲ್ಲಿ ಸುಮಾರು 1.25 ಕೋಟಿ ರೂ. ವೆಚ್ಚದಲ್ಲಿ 10 ಬಸ್ ತಂಗುದಾಣಗಳನ್ನು ನಿರ್ಮಿಸಲಾಗಿದ್ದು, ಮೊದಲ ಹಂತದಲ್ಲಿ ಜೆ.ಎಲ್.ಬಿ. ರಸ್ತೆ, ಸಿದ್ದಪ್ಪ ವೃತ್ತ, ಹಾರ್ಡಿಂಗ್ ವೃತ್ತ, ಶಾಂತಿ ಸಾಗರ್ ಮುಂತಾದ ಕಡೆ ಸಾಂಪ್ರದಾಯಿಕ ಶಾಸಕರು ಉದ್ಘಾಟಿಸಿದರು.

ಈ ವೇಳೆ ಶ್ರೀವತ್ಸ ಮಾತನಾಡಿ, ತಂಗುದಾಣಗಳು ಸಾರ್ವಜನಿಕರು, ಪ್ರಯಾಣಿಕರು ಅನುಕೂಲ ಪಡೆದುಕೊಳ್ಳಬೇಕು. ಬಸ್ಸು ತಂಗುದಾಣದ ಸುತ್ತಮುತ್ತಲು ಸ್ವಚ್ಛತೆಯನ್ನು ಕಾಪಾಡಿಕೊಡಬೇಕು. ಇದಕ್ಕೆ ಸಮರ್ಪಕವಾಗಿ ವಿದ್ಯುತ್ ಸಂಪರ್ಕ ಇರಬೇಕು ಮತ್ತು ಭಿತ್ತಿ ಪತ್ರ ಅಂಟಿಸಿ ಸಾರ್ವಜನಿಕರಿಗೆ ಕಿರಿ ಕಿರಿ ಉಂಟುಮಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಬಸ್ ತಂಗುದಾಣದಲ್ಲಿ ಕೆಎಸ್ಆರ್ ಟಿಸಿ ವತಿಯಿಂದ ದಿನನಿತ್ಯ ಓಡಾಡುವ ಬಸ್ಸುಗಳ ವೇಳಾಪಟ್ಟಿಯನ್ನು ಅಳವಡಿಸಿಕೊಳ್ಳಬೇಕು ಹಾಗೂ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇದರ ನಿರ್ವಹಣೆ ಸರಿಯಾಗಿ ನಡೆಯಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮಾಜಿ ಮೇಯರ್ ಶಿವಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯರಾದ ಸೌಮ್ಯ ಉಮೇಶ್, ರಮೇಶ್, ಮುಖಂಡರಾದ ಜೋಗಿ ಮಂಜು, ಉಮೇಶ್, ರಾಕೇಶ್ ಗೌಡ, ಜೋಗಪ್ಪ, ಕೃಷ್ಣನಾಯಕ, ಶರತ್ ಭಂಡಾರಿ, ಕಿಶೋರ್, ವಿಜಯ್ ನಾಯಕ್, ನಂದೀಶ್ ನಾಯಕ್, ಅರುಣ್, ಪ್ರದೀಪ್, ಜಯರಾಮ್, ಅನ್ನಪೂರ್ಣಮ್ಮ, ಕೀರ್ತಿ, ಲಿಖೀತ್ ಗೌಡ, ಮಂಜುನಾಥ್ ಮೊದಲಾದಲರು ಇದ್ದರು.