ಸಾರಾಂಶ
ಕುಣಿಗಲ್ ತಾಲೂಕಿನ ಮ್ಯಾಗನ ಪಾಳ್ಯ ಗ್ರಾಮದ ಅರೋಪದಲ್ಲಿ ಸಲ್ಮಾನ್ ಶೇಖ್ (23) ಮಹಿಳೆಗೆ ವಂಚಿಸಿದ ಆರೋಪಿ.
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಬಾಳು ಕೊಡುವುದಾಗಿ ನಂಬಿಸಿದ್ದಲ್ಲದೆ ಪತಿಯಿಂದ ದೂರ ಮಾಡಿ ವಿವಾಹಿತ ಮಹಿಳೆಗೆ ಮದುವೆ ಆಗೋದಾಗಿ ಹೇಳಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ನೆಲಮಂಗಲ ಮೂಲದ ಆಲಿಯಾ ಬಾನು (ಹೆಸರು ಬದಲಿಸಿದೆ) (25) ವಂಚನೆಗೊಳಗಾದ ವಿವಾಹಿತ ಮಹಿಳೆಯಾಗಿದ್ದು, ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಮ್ಯಾಗನ ಪಾಳ್ಯ ಗ್ರಾಮದ ಅರೋಪದಲ್ಲಿ ಸಲ್ಮಾನ್ ಶೇಖ್ (23) ಮಹಿಳೆಗೆ ವಂಚಿಸಿದ ಆರೋಪಿ.ಮೊದಲ ಪತಿ ಜಹೀರುದ್ದೀನ್ ಕಿರುಕುಳಕ್ಕೆ ಬೇಸತ್ತ ಪತ್ನಿ ಆಲಿಯಾ ಬಾನು, ತನ್ನ ಪತಿಯನ್ನು ಬಿಟ್ಟು ತನ್ನ ತಂದೆ ಮನೆಗೆ ತೆರಳುತ್ತಿದ್ದರು. ಈ ವಿಷಯ ತಿಳಿದ ಸಲ್ಮಾನ್ ಶೇಖ್ ಆಕೆಯನ್ನು ಮನವೊಲಿಸಿ ಮದುವೆಯಾಗೋದಾಗಿ ನಂಬಿಸಿ ತನ್ನ ಜೊತೆ ಮೈಸೂರು, ಹೊಸೂರು ಓಡಾಡಿಸಿ ಕೊನೆಗೆ ಆಂದ್ರಪ್ರದೇಶದ ಹಿಂದೂಪುರದಲ್ಲಿ ಬಾಡಿಗೆ ಮನೆ ಪಡೆದು 25 ದಿನಗಳ ಕಾಲ ಒಟ್ಟಿಗಿದ್ದಾರೆ. ಇದೇ ಸಂದರ್ಭದಲ್ಲಿ ಮಹಿಳೆ ಬಾನು ಇಚ್ಛೆಗೆ ವಿರುದ್ಧವಾಗಿ ಬೇಡವೆಂದರೂ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಕೆಲ ದಿನಗಳ ಬಳಿಕ ತನ್ನ ತಂದೆಯ ಮನೆಗೆ ಬಿಟ್ಟು ಹೋಗಿದ್ದಾನೆ.
ನಂತರ ಈ ಮಧ್ಯೆ ಮಹಿಳೆಗೆ ಈಗ 2 ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದ್ದು, ಬಾನು ಗರ್ಭಿಣಿಯಾದ ವಿಚಾರ ತಿಳಿದೊಡನೆ ಸಲ್ಮಾನ್ ಶೇಖ್ ಆಕೆಯ ಪೋನ್ ಕರೆಗೂ ಸಿಗದೇ ಎಸ್ಕೇಪ್ ಆಗಿದ್ದಾನೆ. ಬಳಿಕ ಮಹಿಳೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ ಆಧಾರದ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪೊಲೀಸ್ ವಿಚಾರಣೆ ವೇಳೆ ಎಲ್ಲಾ ವಿಚಾರಗಳನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿ ಸಲ್ಮಾನ್ ಶೇಖ್ ನನ್ನು ಜೈಲಿಗಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದಾರೆ.ಪೋಟೋ 1 : ಆರೋಪಿ ಸಲ್ಮಾನ್ ಶೇಖ್ಪೋಟೋ 2 : ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ