ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ಅ.2ರ ತಡರಾತ್ರಿ ನಗರದ ಗಣಪತಿ ವೃತ್ತದ ಗಣೇಶ ಮೂರ್ತಿಯ ಮೇಲೆ ಕಲ್ಲು ತೂರಿದ ಪ್ರಕರಣದಲ್ಲಿ ಗಾಂಧಿ ಚೌಕ್ ಠಾಣೆ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಜುಬೇರ್ ನಾಗರ್ಜಿ(25) ಬಂಧಿತನಾಗಿದ್ದು, ಘಟನೆ ಮಾರನೇ ದಿನವೇ ಓರ್ವ ಆರೋಪಿ ಸೋಹೆಲ್ ಜಮಾದಾರನನ್ನು ವಶಕ್ಕೆ ಪಡೆದಿದ್ದರು.
ಕನ್ನಡಪ್ರಭ ವಾರ್ತೆ ವಿಜಯಪುರ: ಅ.2ರ ತಡರಾತ್ರಿ ನಗರದ ಗಣಪತಿ ವೃತ್ತದ ಗಣೇಶ ಮೂರ್ತಿಯ ಮೇಲೆ ಕಲ್ಲು ತೂರಿದ ಪ್ರಕರಣದಲ್ಲಿ ಗಾಂಧಿ ಚೌಕ್ ಠಾಣೆ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಜುಬೇರ್ ನಾಗರ್ಜಿ(25) ಬಂಧಿತನಾಗಿದ್ದು, ಘಟನೆ ಮಾರನೇ ದಿನವೇ ಓರ್ವ ಆರೋಪಿ ಸೋಹೆಲ್ ಜಮಾದಾರನನ್ನು ವಶಕ್ಕೆ ಪಡೆದಿದ್ದರು. ತಪ್ಪಿಸಿಕೊಂಡಿದ್ದ ಇನ್ನೋರ್ವ ಆರೋಪಿಯನ್ನೂ ಇದೀಗ ಬಂಧಿಸಲಾಗಿದೆ. ನಗರದಲ್ಲಿ ಆಟೋ ಚಾಲಕರಾಗಿರುವ ಇಬ್ಬರೂ ಅಫ್ಜಲಪುರದ ಟಕ್ಕೆ ಕಾಲೋನಿ ನಿವಾಸಿಗಳಾಗಿದ್ದಾರೆ. ನಗರದಲ್ಲಿ ಕೋಮು ಗಲಭೆ ಸೃಷ್ಟಿಸಲೆಂದೆ ತಡರಾತ್ರಿ ಗಣಪತಿ ಚೌಕ್‌ಗೆ ಕಲ್ಲು ತೂರಿದ್ದಾರೆ ಎನ್ನಲಾಗಿದೆ.ಅ.2ರಂದು ತಡರಾತ್ರಿ ಹೋಮ್ ಗಾರ್ಡ್ ಎದುರಿನಲ್ಲೇ ಕಲ್ಲು ಎಸೆದು, ಹೋಮ್ ಗಾರ್ಡ್‌ಗೆ ಬೆದರಿಕೆ ಹಾಕಿದ್ದರು. ಮುಸ್ಲಿಂ ಯುವಕರ ಪುಂಡಾಟದ ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಹಿನ್ನಲೆಯಲ್ಲಿ ಆರೋಪಿ ಸೋಹೆಲ್ ಜಮಾದಾರ, ಪರಾರಿಗೆ ಯತ್ನಿಸಿದ್ದ ಜುಬೇರ್ ನಾಗರ್ಜಿಯನ್ನು ಪೊಲೀಸರು ಬಂಧಿಸಿದ್ದಾರೆ.