ಸಾರಾಂಶ
ಕನಕಪುರ: ನಿರ್ಜನ ಪ್ರದೇಶದಲ್ಲಿ ದನ ಮೇಯಿಸುತ್ತಿದ್ದ ಮಹಿಳೆಯನ್ನು ಟಾರ್ಗೆಟ್ ಮಾಡಿ ಹಾಡಹಗಲೇ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ನಾಲ್ವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನಕಪುರ: ನಿರ್ಜನ ಪ್ರದೇಶದಲ್ಲಿ ದನ ಮೇಯಿಸುತ್ತಿದ್ದ ಮಹಿಳೆಯನ್ನು ಟಾರ್ಗೆಟ್ ಮಾಡಿ ಹಾಡಹಗಲೇ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ನಾಲ್ವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಕಸಬಾ ಹೋಬಳಿಯ ವಿರೂಪಸಂದ್ರದ ಧನಂಜಯ ಅಲಿಯಾಸ್ ಮಂಜ(25), ಲಕ್ಷ್ಮೀಪುರದ ಬಸವ (35), ಮೈಸೂರಿನ ನಾಡನಹಳ್ಳಿ ಮನೋಜ(24) ,ಯರಗನಹಳ್ಳಿ ನಿವಾಸಿ ಪ್ರದೀಪ್(24) ಬಂಧಿತರು.ಲಕ್ಷ್ಮೀಪುರದ ಬಸವ ವಿರೂಪಸಂದ್ರದ ಧನಂಜಯನ ಬಳಿ ಹಣ ಸಾಲ ಕೇಳಿದ್ದ. ಆಗ ಧನಂಜಯ, ದನ ಮೇಯಿಸಲು ಬರುವ ಮಹಿಳೆ ಬಳಿ ಮಾಂಗಲ್ಯ ಸರ ಕಳವು ಮಾಡಲು ಪ್ಲಾನ್ ಕೊಟ್ಟಿದ್ದ. ಕೂಡಲೇ ಬಸವ, ಮೈಸೂರಿನ ಮನೋಜ್, ಪ್ರದೀಪ್ ಜೊತೆ ಸೇರಿ ಹೊಂಚು ಹಾಕಿ, ಮಹಿಳೆಯನ್ನು ಸುತ್ತುವರಿದ ಕೈಕಾಲು ಬಾಯಿ ಮುಚ್ಚಿ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದರು. ಆಕೆ ಬಿಗಿಯಾಗಿ ಹಿಡಿದಿದ್ದರಿಂದ ಅರ್ಧ ಸರ ಮಾತ್ರ ಕಿತ್ತುಕೊಂಡು ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳು ಮೈಸೂರಿನಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಆರೋಪಿ ಬಸವನ ಮೇಲೆ ಬೆಂಗಳೂರಿನ ಬಸವನಗುಡಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮಾಂಗಲ್ಯ ಸರ ಕರಗಿಸಿರುವ ಗಟ್ಟಿ ಚಿನ್ನ, ಎರಡು ಗುಂಡು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಕ್ಕೆ ಪಡೆದು ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))