ಮಹದಾಯಿ ಹೋರಾಟಗಾರನ ಬಂಧನ: ಪ್ರತಿಭಟನೆ

| Published : Mar 23 2024, 01:01 AM IST

ಸಾರಾಂಶ

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮಹದಾಯಿ, ಕಳಸಾ- ಬಂಡೂರಿ ಯೋಜನೆಗೆ ಆಗ್ರಹಿಸಿ 2016ರಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಿದ ರೈತ ಹೋರಾಟಗಾರನನ್ನು ಬಂಧಿಸಿರುವುದನ್ನು ಖಂಡಿಸಿ ಮಹದಾಯಿ ಕಳಸಾ- ಬಂಡೂರಿ ರೈತ ಹೋರಾಟ ಸಮಿತಿ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಇಲ್ಲಿಯ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಿದರು.

ರೈತ ಹೋರಾಟಗಾರರಿಗೆ ಯಾವುದೇ ಮಾಹಿತಿ, ನೋಟಿಸ್‌ ನೀಡದೇ ರೈಲ್ವೆ ಪೊಲೀಸರು, ರೈತ ಹೋರಾಟಗಾರ ಕುತುಬುದ್ದೀನ ಖಾಜಿ ಅವರನ್ನು ಬಂಧಿಸಿದ್ದಾರೆ. ಅದರಂತೆ ಬಿಎಸ್‌ಎನ್‌ಎಲ್‌ ಕೂಡಾ ಸುಳ್ಳು ಕೇಸ್‌ ದಾಖಲಿಸಿದೆ. ಹೀಗೆಯೇ ರೈತರ ಮೇಲೆ ಸುಳ್ಳು ಕೇಸ್‌ ದಾಖಲಿಸಿ ರೈತರನ್ನು ಅವಮಾನಿಸುವ ಕೆಲಸ ಆಗುತ್ತಿದೆ ಎಂದು ಖಂಡಿಸಿದರು.

ರೈತ ಹೋರಾಟಗಾರರ ಮೇಲೆ ಹಾಕಿದ ಪ್ರಕರಣಗಳನ್ನು ಸರ್ಕಾರ ವಜಾಗೊಳಿಸಬೇಕು. ಅಲ್ಲದೇ, ಈಗಾಗಲೇ ಬಂಧನ ಮಾಡಿರುವ ಎಲ್ಲ ರೈತ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಚುನಾವಣೆ ಪ್ರಚಾರಕ್ಕೆ ಬಂದಾಗ ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಪ್ರತಿಭಟಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮಹದಾಯಿ ಕಳಸಾ- ಬಂಡೂರಿ ರೈತ ಹೋರಾಟ ಸಮಿತಿ ಲೋಕನಾಥ ಹೆಬಸೂರ, ಆರ್‌.ಜಿ. ನಡುವಿನಮನಿ, ಶಂಕರ ಅಂಬಲಿ, ಭರಮಪ್ಪ ಕಾತರಕಿ, ಬಾಬಾಜಾನ ಮುಧೋಳ, ಸಿದ್ದು ತೇಜಿ, ಕಲ್ಲಪ್ಪ ಹೆಬ್ಬಳ್ಳಿ, ರಂಗಣ್ಣ ಮೊಕನ್ನವರ, ಜಿ.ಕೆ. ದೊಡ್ಡಮನಿ, ಆರ್‌.ಕೆ. ಕಟ್ಟಿಮನಿ ಇದ್ದರು.

ಖಾಜಿ ಕೂಡಲೆ ಬಿಡುಗಡೆಗೊಳಿಸಿಕನ್ನಡಪ್ರಭ ವಾರ್ತೆ ನವಲಗುಂದಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿಗೊಳಿಸಲು ರೈಲು ಬಂದಗೆ ಕರೆ ಕೊಟ್ಟಿದ್ದನ್ನು ನೆಪಮಾಡಿಕೊಂಡು ಗುರುವಾರ ಹೋರಾಟದಲ್ಲಿ ಭಾಗಿಯಾದ ಬಾಗಲಕೋಟೆಯ ರೈತ ಮುಖಂಡ ಕುತುಬುದ್ಧಿನ್‌ ಖಾಜಿ ಅವರನ್ನು ಹುಬ್ಬಳ್ಳಿಯ ರೈಲ್ವೆ ಪೊಲೀಸರು ಬಂಧಿಸಿರುವುದನ್ನು ಖಂಡಿಸುತ್ತೇವೆ ಎಂದು ಮಹದಾಯಿ ಹೋರಾಟಗಾರ ಸುಭಾಸಚಂದ್ರಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ರೈತ ಭವನದ ವೇದಿಕೆಯ ಮುಂಭಾಗದಲ್ಲಿ ತಹಸೀಲ್ದಾರ್‌ ಮುಖಾಂತರ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.ಖಾಜಿ ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಇಲ್ಲದೇ ಹೋದರೆ ನಮ್ಮ ಹೋರಾಟದ ರೂಪುರೇಷೆ ಉಗ್ರ ಹೋರಾಟ ಮಾಡಲಾಗುವುದು ಎಂದರು.ಈ ವೇಳೆ ಅಧ್ಯಕ್ಷ ಯಲ್ಲಪ್ಪ ದಾಡಿಭಾವಿ, ಕರಿಯಪ್ಪ ತಳವಾರ, ಫಕ್ಕೀರಗೌಡ ಬಸನಗೌಡರ, ಗೋವಿಂದರಡ್ಡಿ ಮೊರಬ, ರವಿ ತೋಟದ ಸೇರಿದಂತೆ ಅನೇಕ ರೈತರು ಭಾಗಿಯಾಗಿದ್ದರು.