ಸಾರಾಂಶ
ಹೊನ್ನಾವರ: ಹೊನ್ನಾವರ ಅರಣ್ಯ ವಿಭಾಗದ, ಹೊನ್ನಾವರ ಅರಣ್ಯ ವಲಯದ ವ್ಯಾಪ್ತಿಯ ಗುಂಡಬಾಳ ಅರಣ್ಯದಲ್ಲಿ ಸಾಗವಾನಿ ಮರಗಳನ್ನು ಕಡಿದು ಸಾಗಿಸಿದ ಆರೋಪಿಗಳನ್ನು ಗುರುವಾರ ನಸುಕಿನ ಜಾವ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ತಾಲೂಕಿನ ಗುಂಡಬಾಳ ಚರ್ಚಕೇರಿಯ ಆರ್ಚಿ ಕೊಸ್ತಾನ್ ಫರ್ನಾಂಡಿಸ್, ಮುಟ್ಟಾ ಹಾಡಗೇರಿಯ ಶಿವಾನಂದ ವೆಂಕಟ್ರಮಣ ನಾಯ್ಕ, ಗುಂಡಬಾಳದ ನಾಗರಾಜ ಮಂಜುನಾಥ ಆಚಾರಿ, ಗುಂಡಬಾಳದ ಗಜಾನನ ಮಂಜುನಾಥ ಆಚಾರಿ ಆರೋಪಿಗಳಾಗಿದ್ದಾರೆ.ಇವರ ಮನೆಗಳ ಮೇಲೆ ಹಠಾತ್ ದಾಳಿ ಮಾಡಿದಾಗ ಮನೆಯಲ್ಲಿ ಸಾಗವಾನಿ, ಹಲಸು, ಕಿಂದಳ, ಭರಣಗಿ, ಹೆಬ್ಬಲಸು ಹಾಗೂ ಹೊಳೆಮತ್ತಿ ಜಾತಿಯ ನಗಗಳನ್ನು ಭಾರಿ ಪ್ರಮಾಣದಲ್ಲಿ ದಾಸ್ತಾನು ಇಟ್ಟುಕೊಂಡಿರುವುದು ಕಂಡುಬಂದಿದೆ.
ಮಾಲನ್ನು ಜಪ್ತಿ ಮಾಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ ಸಿ.ಕೆ. ಅವರ ಮಾರ್ಗದರ್ಶನದಲ್ಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್, ವಲಯ ಅರಣ್ಯ ಅಧಿಕಾರಿಗಳು ಹಾಗೂ ವಲಯದ ಎಲ್ಲ ಉಪ ವಲಯ ಅರಣ್ಯ ಅಧಿಕಾರಿಗಳು, ಗಸ್ತು ಅರಣ್ಯ ಪಾಲಕರು ಹಾಗೂ ಇತರ ಅರಣ್ಯ ಸಿಬ್ಬಂದಿ ಇದ್ದರು.ಯಲ್ಲಾಪುರದಲ್ಲಿ ಸರಣಿ ಅಪಘಾತ: ೮ ಜನರಿಗೆ ಗಾಯಯಲ್ಲಾಪುರ: ಪಟ್ಟಣದ ನ್ಯೂ ಮಲಬಾರ್ ಹೋಟೆಲ್ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೆ. ೫ರಂದು ರಾತ್ರಿ ೯.೨೦ರ ಸುಮಾರಿಗೆ ಸಂಭವಿಸಿದ ಸರಣಿ ಅಪಘಾತದಲ್ಲಿ ಒಟ್ಟು ೮ ಜನ ಗಾಯಗೊಂಡಿದ್ದಾರೆ.ಹುಬ್ಬಳ್ಳಿ ನಿವಾಸಿ, ಲಾರಿ ಚಾಲಕ ಶಿವಾಜಿ ರಾಮಚಂದ್ರ ತಂಗಡಗಿ(೪೧) ಲಾರಿಯನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿ, ಎದುರಿನಿಂದ ಬರುತ್ತಿದ್ದ ಕಂಟೇನರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಿಂದಾಗಿ, ಲಾರಿ ಸ್ವಲ್ಪ ಮುಂದೆ ಹೋಗಿ ಅದೇ ದಾರಿಯಲ್ಲಿ ಬರುತ್ತಿದ್ದ ಸ್ಲೀಪರ್ ಕೋಚ್ ಬಸ್ಸಿಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಲಾರಿ ಚಾಲಕ ಸೇರಿದಂತೆ ೭ ಜನರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಗೊಂಡವರಲ್ಲಿ ನಟೇಶ ವೆಂಕಟೇಶ ಮೂಡಲಹಿಪ್ಪೆ(೨೯), ಆಯುಬ್ ಖಾನ್ ಅಮಿರ್ ಖಾನ್(೪೫), ಸಲೀಂ ಖಾದರ್(೩೬), ಆಶಾಲತಾ ಸುಂದರ ಶೆಟ್ಟಿ(೪೨), ಲಕ್ಷ್ಮೀ ಕೃಷ್ಣ ಪೂಜಾರಿ(೭೬), ಟೆಲ್ಮಾ ಎಂ. ದಯಾನಂದ ಡಿಸೋಜಾ(೫೩), ಜಯಲಕ್ಷ್ಮೀ ಆನಂದ ಪೂಜಾರಿ(೫೪) ಸೇರಿದ್ದಾರೆ. ಗಾಯಾಳುಗಳನ್ನು ತಕ್ಷಣ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.ಘಟನೆಯ ಕುರಿತು ಪಿಎಸ್ಐ ಸಿದ್ದಪ್ಪ ಗುಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.