ಸಾರಾಂಶ
ಹೊನ್ನಾಳಿಯ ದೊಡ್ಡಿ ರಸ್ತೆಯಲ್ಲಿ ಡಿ.30ರಂದು ಮನೆ ಬೀಗ ಮುರಿದು, ಸುಮಾರು ₹8.46 ಲಕ್ಷ ಮೌಲ್ಯದ ನಗದು ಮತ್ತು ಚಿನ್ನಾಭರಣ ದೋಚಿದ್ದ ಕಳ್ಳರು ವಿಜಯನಗರ ಜಿಲ್ಲೆ ಹೊಸಪೇಟೆ ನಗರದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿಯ ದೊಡ್ಡಿ ರಸ್ತೆಯಲ್ಲಿ ಡಿ.30ರಂದು ಮನೆ ಬೀಗ ಮುರಿದು, ಸುಮಾರು ₹8.46 ಲಕ್ಷ ಮೌಲ್ಯದ ನಗದು ಮತ್ತು ಚಿನ್ನಾಭರಣ ದೋಚಿದ್ದ ಕಳ್ಳರು ವಿಜಯನಗರ ಜಿಲ್ಲೆ ಹೊಸಪೇಟೆ ನಗರದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಮಹಮದ್ ರಫೀಕ್ (31), ಮಹೇಶ್ (32), ಎಸ್.ಕೆ.ಶಕ್ಷಾವಲಿ (23) ಬಂಧಿತ ಆರೋಪಿಗಳು. ಈ ಆರೋಪಿತರು ಹರಿಹರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 1 ಬೈಕ್ ಕಳವು ಪ್ರಕರಣ ಸೇರಿದಂತೆ ಒಟ್ಟು 3 ಪಕ್ರರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.
ಮನೆಯಲ್ಲಿ ಕಳವು ನಡೆದಿದ್ದ ಬಗ್ಗೆ ಮಾಲೀಕರಾದ ಮಂಜುಳಾ ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಂಧಿತರಿಂದ ₹.8717 ನಗದು, ಅಂದಾಜು ₹5.70ಲಕ್ಷ ಮೌಲ್ಯದ 106.9 ಗ್ರಾಂ ಚಿನ್ನಾಭರಣಗಳು, ಬೈಕ್ ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಹೊನ್ನಾಳಿ ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ಎಚ್. ಮಾಹಿತಿ ನೀಡಿದ್ದಾರೆ.