ಮಹಾಪಾದುಕೆ ಅದ್ವೈತ ರಥ ಆಗಮನ: ಅದ್ಧೂರಿ ಸ್ವಾಗತ

| Published : Mar 27 2025, 01:00 AM IST

ಮಹಾಪಾದುಕೆ ಅದ್ವೈತ ರಥ ಆಗಮನ: ಅದ್ಧೂರಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭಾನ್ಕುಳಿ ಶ್ರೀ ರಾಮಚಂದ್ರಾಪುರ ಆಯೋಜಿಸಿರುವ ಶಂಕರ ಪಂಚಮೀ ಕಾರ್ಯಕ್ರಮ ಪ್ರಯುಕ್ತ ಕೇರಳದ ಕಾಲಡಿಯಿಂದ ಆಗಮಿಸಿದ ಜಗದ್ಗುರು ಶ್ರೀ ಶಂಕರಾಚಾರ್ಯರ ಶ್ರೀ ಮಹಾಪಾದುಕೆ ಇರುವ ಅದ್ವೈತ ರಥ ಬುಧವಾರ ನಗರ ಪ್ರವೇಶಿಸಿದ್ದು, ಗಾಂಧಿ ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

- ಶಂಕರ ಪಂಚಮೀ ಕಾರ್ಯಕ್ರಮ ಪ್ರಯುಕ್ತ ಕೇರಳದ ಕಾಲಡಿಯಿಂದ ಯಾತ್ರೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭಾನ್ಕುಳಿ ಶ್ರೀ ರಾಮಚಂದ್ರಾಪುರ ಆಯೋಜಿಸಿರುವ ಶಂಕರ ಪಂಚಮೀ ಕಾರ್ಯಕ್ರಮ ಪ್ರಯುಕ್ತ ಕೇರಳದ ಕಾಲಡಿಯಿಂದ ಆಗಮಿಸಿದ ಜಗದ್ಗುರು ಶ್ರೀ ಶಂಕರಾಚಾರ್ಯರ ಶ್ರೀ ಮಹಾಪಾದುಕೆ ಇರುವ ಅದ್ವೈತ ರಥ ಬುಧವಾರ ನಗರ ಪ್ರವೇಶಿಸಿದ್ದು, ಗಾಂಧಿ ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಕೂಡಲಿ ಶೃಂಗೇರಿ ಜಗದ್ಗುರು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳು ಪಾದುಕೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಪೂಜೆ ಸಲ್ಲಿಸಿ ಬರಮಾಡಿಕೊಂಡರು. ರಥವು ಅಶೋಕ ರಸ್ತೆ ಮೂಲಕ ಜಯದೇವ ವೃತ್ತದ ಕೂಡಲಿ ಶ್ರೀ ಶಂಕರ ಮಠ ತಲುಪಿತು. ಭಕ್ತರು ಪಾದುಕೆ ದರ್ಶನ ಪಡೆದು ಪುನೀತರಾದರು.

ಈ ಸಂದರ್ಭ ವಿಶ್ವನಾಥ ಭಟ್ ಸಾರಂಗ, ಸದಾನಂದ ಹೆಗಡೆ, ಪಿ.ಮೋಹನ, ಸತೀಶ ಚಂದ್ರ, ಎ.ಎಂ.ಹೆಗಡೆ, ಎಂ.ಸಿ. ಶಶಿಕಾಂತ್, ಎನ್.ಆರ್. ನಾಗಭೂಷಣ, ಎಸ್.ಜಿ. ಹೆಗಡೆ, ಬಾಲಚಂದ್ರ ಭಟ್, ಭಾಸ್ಕರ್ ಭಟ್, ಎಂ.ಆರ್.ಹೆಗಡೆ, ಎಂ.ಜಿ.ಶ್ರೀಕಾಂತ್, ಪವನ್ ಭಟ್, ಗಣೇಶ ಭಟ್, ಅಜಯ್ ಭಟ್, ಭಕ್ತರು ಭಾಗವಹಿಸಿದ್ದರು.

- - - -26ಕೆಡಿವಿಜಿ39,40.ಜೆಪಿಜಿ:

ದಾವಣಗೆರೆಗೆ ಆಗಮಿಸಿದ ಶ್ರೀಮದ್‌ ಜಗದ್ಗುರು ಶ್ರೀ ಶಂಕರಾಚಾರ್ಯರ ಶ್ರೀ ಮಹಾಪಾದುಕೆಯ ಅದ್ವೈತ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.