ಸಾರಾಂಶ
ಮೂಲ್ಕಿ ಸೀಮೆಯ ಪರಂಪರೆಯಂತೆ ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಹಾಗೂ ಅರಮನೆ ವೆಲ್ಫೇರ್ ಟ್ರಸ್ಟ್‌ನ ಗೌತಮ್ ಜೈನ್ ಅಶ್ವಕ್ಕೆ ವಿಶೇಷ ಪೂಜೆ ಸಲ್ಲಿಸಿ ಸ್ವಾಗತಿಸಿದರು.
ಮೂಲ್ಕಿ: ಮೂಲ್ಕಿ ಸಮೀಪದ ಪಡುಪಣಂಬೂರುನಲ್ಲಿರುವ ಮೂಲ್ಕಿ ಸೀಮೆಯ ಅರಮನೆಯಲ್ಲಿ ರಾಜಸ್ಥಾನ ತಳಿಯ ಕುದುರೆ ಆಗಮಿಸಿದ್ದು ಅರಮನೆಯ ಅಂದವನ್ನು ಹೆಚ್ಚಿಸಿದೆ.
ರಾಜಸ್ಥಾನದಿಂದ ಆರು ವರ್ಷ ಪ್ರಾಯದ ಮಾರವಾರಿ ಬ್ರಿಡ್ ತಳಿಯ ಅಶ್ವದ ಆಗಮನವಾಗಿದೆ. ಮೂಲ್ಕಿ ಸೀಮೆಯ ಪರಂಪರೆಯಂತೆ ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಹಾಗೂ ಅರಮನೆ ವೆಲ್ಫೇರ್ ಟ್ರಸ್ಟ್‌ನ ಗೌತಮ್ ಜೈನ್ ಅಶ್ವಕ್ಕೆ ವಿಶೇಷ ಪೂಜೆ ಸಲ್ಲಿಸಿ ಸ್ವಾಗತಿಸಿದ್ದು ಕುದುರೆಗೆ ಶಾಂಭವಿ ಎಂದು ಹೆಸರಿಟ್ಟಿದ್ದಾರೆ.ಕುದುರೆಯನ್ನು ಹೆಚ್ಚಿನ ತರಬೇತಿಗಾಗಿ ಕದ್ರಿಯ ಹಾರ್ಸ್ ಅಕಾಡೆಮಿಗೆ ಕಳುಹಿಸಲಾಗಿದೆ. ಗೌತಮ್ ಜೈನ್ ಮಾತನಾಡಿ, ಕುದುರೆಗೆ 10 ದಿನದ ತರಬೇತಿಗಾಗಿ ಕದ್ರಿಗೆ ಕಳುಹಿಸಲಾಗಿದ್ದು ಕುದುರೆ ರೈಡಿಂಗ್ ಬಗ್ಗೆ ತರಬೇತಿ ಪಡೆಯುತ್ತಿದ್ದೇನೆ. ಮೈಸೂರಿನ ಅರಸರು ಮೂಲ್ಕಿ ಅರಮನೆಗೆ ಭೇಟಿ ನೀಡಿದ ಬಳಿಕ ಮೂಲ್ಕಿ ಅರಮನೆ ಹೆಚ್ಚು ಪ್ರಸಿದ್ಧಿಯನ್ನು ಪಡೆಯುತ್ತಿದೆ. ಮೂಲ್ಕಿ ಅರಮನೆಯನ್ನು ಪ್ರವಾಸಿ ತಾಣವನ್ನಾಗಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.