ಕಲೆ ಶ್ರೀಮಂತಗೊಳಿಸಿದ ನೃತ್ಯನಿಕೇತನ: ಡಿ.ನಾಗಪ್ಪ

| Published : Feb 26 2024, 01:39 AM IST

ಸಾರಾಂಶ

ಇಂದು ಬಯಲುಸೀಮೆ ಚಳ್ಳಕೆರೆಯಲ್ಲಿ ಮಕ್ಕಳಿಗೆ ನೃತ್ಯ, ಸಂಗೀತ ಕಲೆ ಉಳಿದಿದೆಯಾದರೆ ಅದಕ್ಕೆ ನೃತ್ಯನಿಕೇತನವೇ ಪ್ರಮುಖ ಕಾರಣ ಎಂದು ಹೊಂಗಿರಣ ಇಂಟರ್‌ ನ್ಯಾಷನಲ್ ಸಂಸ್ಥೆಯ ಗೌರವಾಧ್ಯಕ್ಷ ಡಿ.ನಾಗಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಬಯಲುಸೀಮೆ ಚಳ್ಳಕೆರೆಯಲ್ಲಿ ಭರತನಾಟ್ಯ, ಸಂಗೀತ ಕಲೆಯನ್ನು ಕಳೆದ ಸುಮಾರು ೩೫ ವರ್ಷಗಳಿಂದ ಈ ಭಾಗದ ಮಕ್ಕಳಿಗೆ ಕಲಿಸುವ ಮೂಲಕ ಭರತನಾಟ್ಯದ ಕಲೆಯ ಶ್ರೀಮಂತಿಕೆಯನ್ನು ನೃತ್ಯನಿಕೇತನ ನಾಟ್ಯ ಸಂಗೀತ ಶಾಲೆ ಶಾಶ್ವತವಾಗಿ ಉಳಿಸುವ ಮೂಲಕ ಕಲೆ ನಮ್ಮ ಬದುಕಿನ ಜೀವಾಳ ಎಂಬುವುದನ್ನು ನಿರೂಪಿಸಿದೆ ಎಂದು ಹೊಂಗಿರಣ ಇಂಟರ್‌ ನ್ಯಾಷನಲ್ ಸಂಸ್ಥೆಯ ಗೌರವಾಧ್ಯಕ್ಷ ಡಿ.ನಾಗಪ್ಪ ತಿಳಿಸಿದರು.

ಅವರು, ನೃತ್ಯನಿಕೇತನ ಶಾಸ್ತ್ರೀಯ ನೃತ್ಯ ಸಂಗೀತ ಶಾಲೆಯ ಬಡಾವಣೆಗಳಲ್ಲಿ ಭರತನಾಟ್ಯ ಕಾರ್ಯಕ್ರಮದ ಎರಡನೇ ಅವತರಣಿಗೆ ಚಾಲನೆ ನೀಡಿ ಮಾತನಾಡಿದರು. ಹೊಂಗಿರಣ ವಿದ್ಯಾಸಂಸ್ಥೆಯ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಇಂದು ಈ ಭಾಗದ ಮಕ್ಕಳಿಗೆ ನೃತ್ಯ, ಸಂಗೀತ ಕಲೆ ಉಳಿದಿದೆಯಾದರೆ ಅದಕ್ಕೆ ನೃತ್ಯನಿಕೇತನವೇ ಪ್ರಮುಖ ಕಾರಣವೆಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಚಾಲಕ ಯು.ಎಸ್.ವಿಷ್ಣುಮೂರ್ತಿರಾವ್, ಭರತನಾಟ್ಯ ಮತ್ತು ಸಂಗೀತ ಕಲೆಯನ್ನು ಮಕ್ಕಳಿಗೆ ಶಾಸ್ತ್ರೀಯವಾಗಿ ಕಲಿಸಿಕೊಡುವ ಕೆಲಸ ಸುಲಭಸಾಧ್ಯವಲ್ಲ. ಆದರೂ ೩೫ ವರ್ಷಗಳ ಕಾಲ ನಿರಂತರಪರಿ ಶ್ರಮದಿಂದ ನೃತ್ಯನಿಕೇತನ ಹೆಮ್ಮೆಯ ಮರವಾಗಿ ಬೆಳೆದಿದೆ. ಪ್ರಾಚಾರ್ಯೆ ಸುಧಾಮೂರ್ತಿಯವರ ಆತ್ಮ ವಿಶ್ವಾಸ ಕಾರಣವಾಗಿದ್ದು, ಮುಂದಿನ ದಿನಗಳಲ್ಲೂ ಈ ಕಲೆಯನ್ನು ಉಳಿಸಿ ಬೆಳೆಸುವ ಸಂಕಲ್ಪ ನಮ್ಮದಾಗಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ರಾಜೇಶ್‌ಗುಪ್ತ ಮಾತನಾಡಿ, ಕಳೆದ ಸುಮಾರು ೩೫ ವರ್ಷಗಳಿಂದ ನೃತ್ಯನಿಕೇತನ ನೃತ್ಯ ಮತ್ತು ಸಂಗೀತ ಶಾಲೆಯ ಪ್ರಗತಿಯನ್ನು ಹತ್ತಿರದಿಂದ ವೀಕ್ಷಿಸಿ ದ್ದೇನೆ. ಕೇವಲ ನಗರ ಪ್ರದೇಶದಲ್ಲಿಯಷ್ಟೇಯಲ್ಲ, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ನೃತ್ಯ, ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ನೃತ್ಯ ನಿಕೇತನ ಈ ಭಾಗದ ಹೆಮ್ಮೆಪಡುವಂತಹ ನಾಟ್ಯ ಸಂಗೀತ ಶಾಲೆಯಾಗಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಟಿ.ದಯಾನಂದ, ಡಿ.ಶಿವಪ್ರಸಾದ್, ಆಡಳಿತಾಧಿಕಾರಿ ಮಾಧವಕುಮಾರ್, ಶಿಕ್ಷಕ ಶಿವಪ್ರಸಾದ್, ಶೋಭಾ, ಎಂ.ಎನ್.ಮೃತ್ಯುಂಜಯ ಮುಂತಾದವರು ಉಪಸ್ಥಿತರಿದ್ದರು.