ಸಂಗೀತ ಕಲೆಯನ್ನು ಪೋಷಿಷಿ ಬೆಳೆಸಬೇಕು: ಶಾಸಕ ಎ.ಮಂಜು

| Published : Apr 28 2024, 01:22 AM IST

ಸಂಗೀತ ಕಲೆಯನ್ನು ಪೋಷಿಷಿ ಬೆಳೆಸಬೇಕು: ಶಾಸಕ ಎ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಸಂಗೀತದ ಕಂಪು ನಾಡಿನಲ್ಲೆಡೆ ಪಸರಿಸುವಂತಾಗಬೇಕು. ಸಂಗೀತ ಕಲೆಯನ್ನು ಪೋಷಿಸಿ ಬೆಳಸಬೇಕಾಗಿದೆ. ಈ ಆಸೆ ಈಡೆರಬೇಕಾದರೆ ಸರ್ಕಾರ ಹೆಚ್ಚು ಒತ್ತು ನೀಡುವಂತೆ ಮಾಜಿ ಸಚಿವ ಹಾಗೂ ಶಾಸಕ ಎ.ಮಂಜು ಒತ್ತಾಯಿಸಿದರು. ರಾಮನಾಥಪುರದಲ್ಲಿ ಶ್ರೀರಾಮ ನವಮಿ ಪ್ರಯುಕ್ತ ಕೊನೆಯ ದಿನದ ವೇಣುವಾದನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೇಣುವಾದನ ಕಾರ್ಯಕ್ರಮ

ರಾಮನಾಥಪುರ: ಸಂಗೀತದ ಕಂಪು ನಾಡಿನಲ್ಲೆಡೆ ಪಸರಿಸುವಂತಾಗಬೇಕು. ಸಂಗೀತ ಕಲೆಯನ್ನು ಪೋಷಿಸಿ ಬೆಳಸಬೇಕಾಗಿದೆ. ಈ ಆಸೆ ಈಡೆರಬೇಕಾದರೆ ಸರ್ಕಾರ ಹೆಚ್ಚು ಒತ್ತು ನೀಡುವಂತೆ ಮಾಜಿ ಸಚಿವ ಹಾಗೂ ಶಾಸಕ ಎ.ಮಂಜು ಒತ್ತಾಯಿಸಿದರು.

ರಾಮನಾಥಪುರ ಶ್ರೀರಾಮ ಸೇವಾ ಸಮಿತಿ ವತಿಯಂದ ಇಲ್ಲಿಯ ಶ್ರೀ ಪಟ್ಟಾಭಿರಾಮ ದೇವಾಲಯದಲ್ಲಿ ಶ್ರೀರಾಮ ನವಮಿ ಪ್ರಯುಕ್ತ ಕೊನೆಯ ದಿನದ ವೇಣುವಾದನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿದ ನಂತರ ಮಾತನಾಡಿ, ‘ರಾಮನಾಥಪುರದ ಶ್ರೀ ಪಟ್ಟಾಭಿರಾಮ ದೇವಾಲಯದಲ್ಲಿ ಸುಮಾರು ಶತಮಾನದಿಂದ ಇಂತಹ ಸಂಗೀತ, ಧಾರ್ಮಿಕ ಕಾರ್ಯಕ್ರಮಗಳು, ಪೂಜಾಕೈಂಕರ್ಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿಕೊಂಡು ಬರುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

‘ಪ್ರತಿವರ್ಷವೂ 10 ದಿವಸಗಳಲ್ಲಿ ನಮಗೆ ಒಂದು ದಿವಸ ಮಹಾಪೂಜೆ ಸಂಗೀತ ಕಾರ್ಯಕ್ರಮ ಹಾಗೂ ದಾಸೋಹದ ವ್ಯವಸ್ಥೆ ಮಾಡಲು ಅನುವು ಮಾಡಿಕೊಟ್ಟಿದ್ದು ಇದರಿಂದ ನಮಗೂ ಸಂತೋಷವಾಗಿದೆ. ಇಂತಹ ಸಂಗೀತ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಉಲ್ಲಾಸ, ಸಂತೋಷ ನೀಡುತ್ತದೆ. 10 ದಿನ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಂಗೀತ ವಿದ್ವಾಂಸರನ್ನು ಕರೆಸಿ ಇಂತಹ ಸಂಗೀತೋತ್ಸವ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಸಿದರು.

ಶಾಸಕ ಎ. ಮಂಜು ಅವರ ಧರ್ಮಪತ್ನಿ ತಾರಾಮಂಜು, ಸಮಿತಿಯ ಕಾರ್ಯದರ್ಶಿ ಆರ್.ಆರ್.ಶ್ರೀನಿವಾಸ್, ಆರ್.ಎಸ್.ನರಸಿಂಹಮೂರ್ತಿ, ಆರ್.ಕೆ. ಶ್ರೀನಿವಾಸ್ ಅಯ್ಯಂಗಾರ್, ಶ್ರೀನಿಧಿ, ವಿ.ಆರ್.ಎಸ್. ತಿರುಲಚಾರ್, ಸುಂದರಾಜ್, ರಾಸು. ನಾಗರಾಜು, ಕಸ್ತೂರಿರಂಗನ್, ನಿವೃತ್ತ ಶಿಕ್ಷಕ ಸೋಮಶೇಖರ್, ಆರ್.ಜೆ.ರಾಘವಚಾರ್, ಎಂ.ಎಸ್.ಕೃಷ್ಣಯ್ಯಂಗಾರ್, ಆರ್.ಎನ್. ಜನಾರ್ದನ ಅಯ್ಯಂಗಾರ್, ರಾಸು ಮೂರ್ತಿ ಕೌಶಿಕರಾಮ, ಎಂ.ಸಂಪತ್ ಕುಮಾರ್, ಆರ್. ಶ್ರೀನಿವಾಸ್, ವಿ.ಲಕ್ಷ್ಮೀಕಾಶಿ, ಗ್ರಾಮ ಪಂಚಾಯತಿ ಸದಸ್ಯರಾದ ಮೋಹನ್‌, ಸಿದ್ದಯ್ಯ, ಪ್ರವೀಣ್ ಇದ್ದರು.

ದೇವಾಲಯದ ಮುಖ್ಯ ಅರ್ಚಕ ಶ್ರೀನಿವಾಸ್ ಪೂಜಾ ಕೈಂಕರ್ಯ ನಡೆಸಿಕೊಟ್ಟರು.

ರಾಮನಾಥಪುರ ಸಂಗೀತೋತ್ಸವದ ಕಾರ್ಯಕ್ರಮದಲ್ಲಿ ಶ್ರೀರಾಮ ಸಮಿತಿಯವರು ಶಾಸಕ ಎ.ಮಂಜು ಹಾಗೂ ಪತ್ನಿ ತಾರಾಮಂಜು ಅವರನ್ನು ಗೌರವಿಸಿದರು.