ಆಲ್ ಇಂಡಿಯಾ ಜೈನ ಯೂತ್ ಫೆಡರೇಶನ್ ಮತ್ತು ಮಹಾವೀರ ಲಿಂಬ್ ಸೆಂಟರ್ ಕಳೆದ 25 ವರ್ಷಗಳಿಂದ ಕರ್ನಾಟಕ, ಗೋವಾ , ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ , ತಮಿಳುನಾಡು , ಕೇರಳದಲ್ಲಿ 58,000ಕ್ಕಿಂತ ಅಧಿಕ ಜನರಿಗೆ 300 ಕ್ಕಿಂತ ಹೆಚ್ಚು ಶಿಬಿರಗಳ ಮೂಲಕ ಕೃತಕ ಕಾಲು ಜೋಡಿಸುವ ಮಹಾನ್ ಸೇವಾ ಕಾರ್ಯ ಮಾಡಿದೆ.

ಹುಬ್ಬಳ್ಳಿ:

ಇಲ್ಲಿನ ಆಲ್ ಇಂಡಿಯಾ ಜೈನ್‌ ಯೂತ್ ಫೆಡರೇಷನ್, ಮಹಾವೀರ ಲಿಂಬ್ ಸೆಂಟರ್, ರಾಜಕುಮಾರ ಆರ್ಯ ಫೌಂಡೇಶನ್, ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ನಗರದ ಕೆಎಂಸಿಆರ್‌ಐ ಆಸ್ಪತ್ರೆಯ ಆವರಣದಲ್ಲಿರುವ ಮಹಾವೀರ ಲಿಂಬ್ ಸೆಂಟರ್‌ನಲ್ಲಿ 20ಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೃತಕ ಕಾಲು ಜೋಡಣಾ ಶಿಬಿರ ಯಶಸ್ವಿಯಾಗಿ ನೆರವೇರಿತು.

ಪತಂಜಲಿ ಯೋಗ ಸಮಿತಿಯ ಕರ್ನಾಟಕದ ವರಿಷ್ಠ ರಾಜ್ಯ ಪ್ರಭಾರಿ, ಯೋಗ ಗುರು ಮತ್ತು ರಾಜಕುಮಾರ ಆರ್ಯ ಫೌಂಡೇಶನ್ ಸಂಸ್ಥಾಪಕ ಭವರಲಾಲ್ ಆರ್ಯ ಮಾತನಾಡಿ, ಆಲ್ ಇಂಡಿಯಾ ಜೈನ ಯೂತ್ ಫೆಡರೇಶನ್ ಮತ್ತು ಮಹಾವೀರ ಲಿಂಬ್ ಸೆಂಟರ್ ಕಳೆದ 25 ವರ್ಷಗಳಿಂದ ಕರ್ನಾಟಕ, ಗೋವಾ , ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ , ತಮಿಳುನಾಡು , ಕೇರಳದಲ್ಲಿ 58,000ಕ್ಕಿಂತ ಅಧಿಕ ಜನರಿಗೆ 300 ಕ್ಕಿಂತ ಹೆಚ್ಚು ಶಿಬಿರಗಳ ಮೂಲಕ ಕೃತಕ ಕಾಲು ಜೋಡಿಸುವ ಮಹಾನ್ ಸೇವಾ ಕಾರ್ಯ ಮಾಡಿದೆ ಎಂದರು

ಮಹಾವೀರ ಲಿಂಬ್ ಸೆಂಟರ್ ಅಧ್ಯಕ್ಷ ಮಹೇಂದ್ರ ಸಿಂಘಿ ಮಾತನಾಡಿ, ಕೃತಕ ಕೈ ಕಾಲಿನ ಅವಶ್ಯಕತೆ ಇರುವ ಯಾರೇ ಇರಲಿ ಅವರು ಮಹಾವೀರ ಲಿಂಬ್ ಸೆಂಟರ್‌ಗೆ ಸಂಪರ್ಕಿಸಬಹುದು. ನಾವು ಅವರಿಗೆ ಉಚಿತವಾಗಿ ಕೃತಕ ಕೈ ಕಾಲು ಜೋಡಿಸಿ ಕೊಟ್ಟು, ಅವರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಸಹಕರಿಸುತ್ತೇವೆ ಎಂದು ಹೇಳಿದರು.

ಈ ವೇಳೆ ಮಹಾವೀರ ಲಿಂಬ್ ಸೆಂಟರ್ ಆಡಳಿತ ಮಂಡಳಿಯ ಗೌತಮ ಗೊಲೆಚಾ, ಮಾನವ ಸಂಘವಿ, ಮಹಾವೀರ ಕುಂದೂರ, ಬೀರಬಲ್ ಬಿಷ್ನೋಯಿ, ಸುನಿಲ್ ಭೂರತ್, ಸುಭಾಷ್ ಡಂಕ್, ಉದಾರಾಮ ಪ್ರಜಾಪತ, ವೆಲರಾಮ ಗಾಚಿ, ಮುಖ್ಯ ಟೆಕ್ನಿಷಿಯನ್ ಎಂ.ಎಚ್. ನಾಯ್ಕರ, ಕೆ . ಸುದರ್ಶನ್, ಅಕ್ಷಯ, ಬಸವರಾಜ, ವಿಜಯ, ವಿನಾಯಕ, 20ಕ್ಕೂ ಹೆಚ್ಚು ಫಲಾನುಭವಿಗಳು ಮತ್ತು ಅವರ ಕುಟುಂಬಸ್ಥರು, ಮಹಾವೀರ ಲಿಂಬ್ ಸೆಂಟರ್ ಸೇವಾ ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು.