ಕನ್ನಡಪ್ರಭ ವಾರ್ತೆ ಐಗಳಿ ದೂರದರ್ಶನ, ಮೊಬೈಲ್‌ ಬಂದ ಮೇಲೆ ಕಲಾವಿದರ ಬದುಕು ಕುಂಠಿತಗೊಂಡಿದೆ. ಕಲಾವಿದರು ತಮ್ಮ ಕಲೆಯನ್ನು ಜನರಿಗೆ ತೋರಿಸುತ್ತಿದ್ದು, ಇನ್ನಾದರೂ ಸರ್ಕಾರ ಕಲಾವಿದರಿಗೆ ಸಹಾಯ ಹಾಗೂ ಮಾಸಾಶನ ನೀಡಬೇಕು ಎಂದು ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಹೇಳಿದರು.

ಕನ್ನಡಪ್ರಭ ವಾರ್ತೆ ಐಗಳಿ

ದೂರದರ್ಶನ, ಮೊಬೈಲ್‌ ಬಂದ ಮೇಲೆ ಕಲಾವಿದರ ಬದುಕು ಕುಂಠಿತಗೊಂಡಿದೆ. ಕಲಾವಿದರು ತಮ್ಮ ಕಲೆಯನ್ನು ಜನರಿಗೆ ತೋರಿಸುತ್ತಿದ್ದು, ಇನ್ನಾದರೂ ಸರ್ಕಾರ ಕಲಾವಿದರಿಗೆ ಸಹಾಯ ಹಾಗೂ ಮಾಸಾಶನ ನೀಡಬೇಕು ಎಂದು ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಹೇಳಿದರು.

ಸ್ಥಳೀಯ ಹಜರತ್ ಜಲಾಲಸಾಹೇಬ ದೇವರ ಜಾತ್ರೆಯ ನಿಮಿತ್ತ ನಡೆದ ಸಂಗೀತ ಹಾಗೂ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನಲ್ಲಿ ಉರುಸ್‌ ನೋಡಲು ಐಗಳಿಗೆ ಬರಬೇಕು. ಮೊಹರಂ ನೋಡಲು ಕೋಹಳ್ಳಿಗೆ ಬರಬೇಕು. ಕಾರಣ ಭಾವೈಕ್ಯತೆಯಿಂದ ಆಚರಿಸುವ ಹಬ್ಬಜಾತ್ರೆಯಾಗಿದೆ. ಜಲಾಲಸಾಹೇಬ ದೇವರಿಗೆ ಪ್ರತಿ ಗುರುವಾರ ಎಲ್ಲ ಧರ್ಮದವರು ಬರುತ್ತಾರೆ. ಭಕ್ತಿ ಇಟ್ಟಿರುವ ಭಕ್ತರಿಗೆ ದೇವರು ಏನು ಕಡಿಮೆ ಮಾಡಿಲ್ಲ ಎಂದರು.ತಾಲೂಕಿನ ಧುರೀಣ ಸದಾಶಿವ ಬುಟಾಳೆ ಮಾತನಾಡಿ, ಐಗಳಿ ಗ್ರಾಮಸ್ಥರು ಸಮಾನ ಮನಸ್ಕರರಿದ್ದಾರೆ. ಈ ಗ್ರಾಮದಲ್ಲಿ ಕಡಿಮೆ ನೀರಾವರಿಯಲ್ಲಿ ದ್ರಾಕ್ಷಿ ಹಾಗೂ ರೇಷ್ಮೆ ಬೆಳೆಯುತ್ತಿದ್ದಾರೆ. ಅದರಲ್ಲಿ 40 ಎಕರೆ ದ್ರಾಕ್ಷಿ ಬೆಳೆದ ರೈತ ಮೈನುದ್ದೀನ್‌ ಡೊಂಗರಗಾಂವಗೆ ಪ್ರಶಸ್ತಿಗಳು ಲಭಿಸಿವೆ ಎಂದು ತಿಳಿಸಿದರು.ಈ ವೇಳೆ ಹಿರಿಯರಾದ ಸಿ.ಎಸ್.ನೇಮಗೌಡ, ಆರ್.ಆರ್.ತೆಲಸಂಗ, ಸಿದ್ದಪ್ಪ ಬಳ್ಳೊಳ್ಳಿ, ಅಪ್ಪಾಸಾಬ ಪಾಟೀಲ, ಕೃಷ್ಣಾ ಸಕ್ಕರೆ ಆಡಳಿತ ಮಂಡಳಿ ಸದಸ್ಯ ಪ್ರಲ್ಹಾದ ಪಾಟೀಲ, ಜಗದೀಶ ತೆಲಸಂಗ, ಬಸವರಾಜ ಬಿರದಾರ, ದುಂಡಪ್ಪ ದೊಡಮನಿ, ಸುರೇಶ ಬಿಜ್ಜರಗಿ, ಭಾರತ ಬ್ಯಾಂಕ್‌ ಅಧ್ಯಕ್ಷ ನೂರಅಹ್ಮದ ಡೊಂಗರಗಾಂವ, ಭರತೇಶ ಬೆಳಗಲಿ, ಭೀಮು ಮಾಳಿ ಇದ್ದರು. ಬಂದೇನಮಾಜ ಮುಜಾವರ ಸ್ವಾಗತಿಸಿದರು. ಸದಾನಂದ ಮಾಡಿಗ್ಯಾಳ ನಿರೂಪಿಸಿ, ವಂದಿಸಿದರು.