ಮತದಾನ ಜಾಗೃತಿಗಾಗಿ ಬಾಟಲಿ ಕಲಾಕೃತಿ

| Published : Apr 26 2024, 12:51 AM IST

ಸಾರಾಂಶ

ಮತದಾನ ಜಾಗೃತಿಗಾಗಿ ವಿಶಿಷ್ಟ ರೀತಿಯಲ್ಲಿ ಕಲಾಕೃತಿ ರಚಿಸಿ ಸಾರ್ವಜನಿಕರ ವೀಕ್ಷಣೆಗೆ ಪ್ರದರ್ಶಿಸಲಾಯಿತು. ಜನರು ಮತದಾನದಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಕಲಾವಿದರಾದ ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಅವರು ಮತದಾನ ಜಾಗೃತಿಗಾಗಿ ವಿಶಿಷ್ಟ ರೀತಿಯಲ್ಲಿ ಕಲಾಕೃತಿಯೊಂದನ್ನು ರಚಿಸಿ ಸಾರ್ವಜನಿಕರ ವೀಕ್ಷಣೆಗೆ ಪ್ರದರ್ಶಿಸಿದ್ದಾರೆ.

ಸುಮಾರು 1000 ಕ್ಕೂ ಅಧಿಕ ಇಂಜಕ್ಷನ್ ಬಾಟಲಿಗಳನ್ನು ಉಪಯೋಗಿಸಿ ಈ ಕಲಾಕೃತಿಯನ್ನು ರಚಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತದಾನದಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸುವುದು ಈ ಕಲಾಕೃತಿ ರಚನೆಯ ಮುಖ್ಯ ಉದ್ದೇಶವಾಗಿದೆ ಎಂದು ಕಲಾವಿದ ಶ್ರೀನಾಥ್ ಮಣಿಪಾಲ್ ತಿಳಿಸಿದ್ದಾರೆ.

--------------------------------

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ರಕ್ತದ ಕೊರತೆ : ರಕ್ತದಾನಕ್ಕೆ ಮನವಿ

ಕನ್ನಡಪ್ರಭ ವಾರ್ತೆ ಮಣಿಪಾಲ

ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಕ್ತದಾನ ಶಿಬಿರಗಳು ನಡೆಯುತ್ತಿಲ್ಲ. ಆದ್ದರಿಂದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ರಕ್ತದ ತೀವ್ರ ಕೊರತೆ ಎದುರಾಗಿದೆ. ದಾನಿಗಳು ಮುಂದೆ ರಕ್ತದಾನ ಮಾಡಿ ರೋಗಿಗಳ ಚಿಕಿತ್ಸೆಗೆ ಸಕಾಲಿಕ ನೆರವಾಗಬೇಕು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮನವಿ ಮಾಡಿದ್ದಾರೆ.

ರಕ್ತದ ಕೊರತೆಯಿಂದ ಆಸ್ಪತ್ರೆಯಲ್ಲಿ ಕೆಲವೊಂದು ಕಾಯಿಲೆಗಳಿಗೆ ಮತ್ತು ಅಪಘಾತ ಸಂದರ್ಭದಲ್ಲಿ ತುರ್ತು ಶಸ್ತ್ರಚಿಕಿತ್ಸೆಗಳನ್ನೂ ಮುಂದೂಡುವ ಪ್ರಮೇಯ ತಲೆದೂರಿದೆ ಎಂದಿರುವ ಅವರು. ಆದ್ದರಿಂದ ಈ ಬಿಕ್ಕಟ್ಟನ್ನು ನಿವಾರಿಸಲು, ಜೀವ ಉಳಿಸಲು ಸಾರ್ವಜನಿಕರ ರಕ್ತದಾನವೊಂದೇ ಉಪಾಯ. ದಾನಿಗಳು ರಕ್ತ ನಿಧಿಯಲ್ಲಿ ಬೆಳಗ್ಗೆ ಗಂಟೆ 7 ರಿಂದ ರಾತ್ರಿ ಗಂಟೆ 7 ರವರೆಗೆ ರಕ್ತ ದಾನ ಮಾಡಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ, ರಕ್ತ ನಿಧಿ ದೂರವಾಣಿ : 0820 2923191ನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.