ಅಯೋಧ್ಯಾ ಬಾಲರಾಮನ ಶಿಲ್ಪಿ ಅರುಣ್‌ ಯೋಗಿರಾಜ್‌ ಆಗಮನ

| Published : Jan 25 2024, 02:02 AM IST

ಸಾರಾಂಶ

ದೇವನಹಳ್ಳಿ: ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿರುವ ಬಾಲರಾಮನ ಕೆತ್ತಿರುವ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಬುಧವಾರ ರಾತ್ರಿ 9.20ಕ್ಕೆ ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ನಿಂದ ಹೊರ ಬಂದ ಸಂದರ್ಭದಲ್ಲಿ ಸಹಸ್ರಾರು ಅಭಿಮಾನಿಗಳು ಅವರನ್ನು ಕಾಣಲು ಕಾತುರದಿಂದ ಕಾಯುತ್ತಿದ್ದು, ಅದ್ಧೂರಿ ಸ್ವಾಗತ ಕೋರಲು ಕಾದು ನಿಂತಿದ್ದರು.

ಅಯೋಧ್ಯೆಯಿಂದ ನೇರವಾಗಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್‌ ಇಂಡಿಯ ವಿಮಾನದಲ್ಲಿ ರಾತ್ರಿ 8.20ಕ್ಕೆ ಲ್ಯಾಂಡ್‌ ಆದರೂ ಟರ್ಮಿನಲ್‌ನಿಂದ ಹೊರಬರಲು 9.20 ಆಗಿತ್ತು. ಅಭಿಮಾನಿಗಳನ್ನು ಕಂಡ ಅರುಣ್‌ ಅವರು ಪೊಲೀಸರ ಬೆಂಗಾವಲಿನೊಂದಿಗೆ ಬೆಂಗಳೂರಿನತ್ತ ಹೊರಟರೆನ್ನಲಾಗಿದೆ.

ಅರುಣ್‌ ಯೋಗಿರಾಜ್‌ ಅವರನ್ನು ಸ್ವಾಗತಿಸಲು ಮುಖಂಡರಾದ ನಂದೀಶ್‌ ರೆಡ್ಡಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ನಾರಾಯಣ್‌, ಮಾಜಿ ಶಾಸಕ ಜಿ ಚಂದ್ರಣ್ಣ, ಹೆಚ್‌. ಎಂ.ರವಿಕುಮಾರ್‌, ಅಂಬರೀಶ್‌ಗೌಡ, ಸುನಿಲ್‌, ಸುರೇಶ್‌ ಆಚಾರ್‌ ಹಾಗು ಎಸ್‌.ರಮೇಶ್‌ಕುಮಾರ್ ಹಾಗು ಮುಖಂಡರು ಹಾಜರಿದ್ದರು.