ತರೀಕೆರೆ: ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಪಟ್ಟಣದ ಅರುಣೋದಯ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದು, 9 ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಚಿಕ್ಕಮಗಳೂರು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ತರೀಕೆರೆ: ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಪಟ್ಟಣದ ಅರುಣೋದಯ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದು, 9 ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಚಿಕ್ಕಮಗಳೂರು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ವಿಭಾಗದ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಮೋನಿಷಾ ಕೆ. ಪ್ರಥಮ, ಜಾನಪದ ಗೀತೆಯಲ್ಲಿ ರೋಹನ್ ಆರ್. ಪ್ರಥಮ, ಭರತನಾಟ್ಯದಲ್ಲಿ ಟಿ.ಎಲ್.ಕವನಾ ಸಿಂದಗಿ ಪ್ರಥಮ, ಪ್ರಬಂಧ ಸ್ಪರ್ಧೆಯಲ್ಲಿ ಮೈತ್ರಿ ಡಿ. ಪ್ರಥಮ, ಚರ್ಚಾ ಸ್ಪರ್ಧೆಯಲ್ಲಿ ಪ್ರಾರ್ಥನಾ ಎಂ. ಪ್ರಥಮ, ಕವನವಾಚನದಲ್ಲಿ ದಿಶಾ ಟಿ.ಜಿ. ಪ್ರಥಮ, ಕಿರಿಯ ಪ್ರಾಥಮಿಕ ವಿಭಾಗದ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಅವಾನ್ ಅಹ್ಮದ್ ಪ್ರಥಮ, ಕ್ಲೇ ಮಾಡಲಿಂಗ್ ನಲ್ಲಿ ಗೋಕುಲ್ ಕೆ. ಪ್ರಥಮ, ಕಥೆ ಹೇಳುವುದರಲ್ಲಿ ನಯನಾ ಡಿ.ಗೌಡ ದ್ವಿತೀಯ, ಇಂಗ್ಲಿಷ್ ಕಂಠಪಾಠದಲ್ಲಿ ವೈಷ್ಣವಿ ಸಿ.ದ್ವಿತೀಯ, ಚಿತ್ರಕಲೆಯಲ್ಲಿ ಯಶವಂತ್ ಕುಮಾರ್ ಟಿ.ಪಿ. ತೃತೀಯ, ಹಿರಿಯ ಪ್ರಾಥಮಿಕ ವಿಭಾಗದ ಇಂಗ್ಲಿಷ್ ಕಂಠಪಾಠದಲ್ಲಿ ಯುಕ್ತಿ ಟಿ.ಜಿ. ಪ್ರಥಮ, ಚಿತ್ರಕಲೆಯಲ್ಲಿ ತನ್ಯಾ ಟಿ.ಡಿ. ದ್ವಿತೀಯ ಹಾಗೂ ಭಕ್ತಿಗೀತೆಯಲ್ಲಿ ಕನಿಷಾ ಕೆ.ಪಿ. ತೃತೀಯ ಸ್ಥಾನ ಪಡೆದಿರುತ್ತಾರೆ. ಬಹುಮಾನ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ಎಲ್ಲಾ ಶಿಕ್ಷಕರಿಗೆ, ಅರುಣೋದಯ ಸಂಸ್ಥೆ ಕಾರ್ಯದರ್ಶಿ ಡಾ.ಜಿ.ಎಚ್.ಶ್ರೀ ಹರ್ಷ, ಶಾಲೆಯ ಸಂಯೋಜಕರಾದ ಗೀತ ಹರ್ಷ ಹಾಗೂ ಮುಖ್ಯ ಶಿಕ್ಷಕರಾದ ಗೌರಮ್ಮ ಅಭಿನಂದಿಸಿದರು ಹಾಗೂ ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಶುಭಕೋರಿದರು.--

3ಕೆಟಿಆರ್.ಕೆ.ಚ10ಃ ತರೀಕೆರೆಯಲ್ಲಿ ಅರುಣೋದಯ ಶಾಲೆಯಿಂದ 9 ಸ್ಪರ್ಧೆಗಳಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು.