ಆರ್ಯ ವಿಜ್ಞಾನ ಪದವಿಪೂರ್ವ ಕಾಲೇಜು ಆರಂಭ

| Published : Mar 20 2024, 01:20 AM IST

ಸಾರಾಂಶ

ಶಿವಮೊಗ್ಗದ ಎಲ್‌ಬಿಎಸ್‌ ನಗರದ 2ನೇ ತಿರುವಿನಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳೊಂದಿಗೆ ನಿರ್ಮಿಸಿರುವ ಆರ್ಯ ವಿಜ್ಞಾನ ಪದವಿಪೂರ್ವ ಕಾಲೇಜು ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಪ್ರಾರಂಭವಾಗಲಿದೆ. ಸುಸಜ್ಜಿತ ಕಟ್ಟಡದಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಮತ್ತು ಗ್ರಂಥಾಲಯದ ವ್ಯವಸ್ಥೆ ಇದೆ ಎಂದು ಕಾಲೇಜಿನ ಕಾರ್ಯದರ್ಶಿ ಎನ್.ರಮೇಶ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಎಲ್‌ಬಿಎಸ್‌ ನಗರದ 2ನೇ ತಿರುವಿನಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳೊಂದಿಗೆ ನಿರ್ಮಿಸಿರುವ ಆರ್ಯ ವಿಜ್ಞಾನ ಪದವಿಪೂರ್ವ ಕಾಲೇಜು ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಪ್ರಾರಂಭವಾಗಲಿದೆ ಎಂದು ಕಾಲೇಜಿನ ಕಾರ್ಯದರ್ಶಿ ಎನ್.ರಮೇಶ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ದೃಷ್ಠಿಯನ್ನು ಇಟ್ಟುಕೊಂಡು, ಉದಯೋನ್ಮುಖ ವಿದ್ಯಾರ್ಥಿಗಳಿಗೆ ಅವಕಾಶ ನೀಡುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರಂಭವಾಗಲಿದೆ. ಎಲ್.ಬಿ.ಎಸ್. ನಗರದ ಪ್ರಧಾನ ಸ್ಥಳದಲ್ಲಿ ಶಿವಮೊಗ್ಗ ನಗರದ ಮಧ್ಯಭಾಗದಲ್ಲಿ ಸ್ವಂತ ಸುಸಜ್ಜಿತ ಕಟ್ಟಡದಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಮತ್ತು ಗ್ರಂಥಾಲಯದ ವ್ಯವಸ್ಥೆ ಈ ಕಾಲೇಜಿನಲ್ಲಿದೆ ಎಂದರು.

ಬಹು ಮುಖ್ಯವಾಗಿ ನುರಿತ ಅನುಭವಿ ಮತ್ತು ವೃತ್ತಿಪರ ಉಪನ್ಯಾಸಕರು ವಿವಿಧ ರಾಜ್ಯಗಳ ಕಾಲೇಜುಗಳಲ್ಲಿ 25ಕ್ಕೂ ಹೆಚ್ಚು ವರ್ಷ ಬೋಧನೆ ಮಾಡಿದ ಅನುಭವವಿರುವ ಶಿಕ್ಷಕರು ಬೋಧಕರಾಗಿದ್ದಾರೆ. ಪಿಯು ವಿದ್ಯಾರ್ಥಿಗಳಿಗೆ ಕೇವಲ ಪಠ್ಯವಲ್ಲದೇ ತಮ್ಮ ಜೀವನದ ಬಹುಮುಖ್ಯವಾಗಿ ಎದುರಿಸುವ ಪರೀಕ್ಷೆಗಳಾದ ಕೆಸಿಇಟಿ ನೀಟ್ ಮತ್ತು ಜೆಇಇ ಹಾಗೂ ಐಐಟಿ ಪರೀಕ್ಷೆಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ರಾಂಶುಪಾಲ ನವೀನ್‌ಕುಮಾರ್ ಮಾತನಾಡಿ, ಉತ್ತಮ ಕಾಲೇಜು ಶಿಕ್ಷಣಕ್ಕಾಗಿ ಶಿವಮೊಗ್ಗದ ಮಕ್ಕಳು ಬೆಂಗಳೂರು, ಧಾರವಾಡ, ಮಂಗಳೂರು, ಹೈದರಾಬಾದ್ ಮುಂತಾದ ಕಡೆ ಹೋಗಬೇಕಿತ್ತು. ಆದರೆ ಈಗ ಅದರ ಅವಶ್ಯಕತೆ ಇಲ್ಲ. ಶಿವಮೊಗ್ಗದಲ್ಲಿಯೇ ಈ ಎಲ್ಲ ಸೌಲಭ್ಯಗಳು ಸಿಗಲಿವೆ. ಹೆಚ್ಚಿನ ಮಾಹಿತಿಗೆ ಮೊ: 9448123344 , 08182- 251408 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪನ್ಯಾಸಕ ಟಿ.ಎಸ್.ಆಚಾರ್ಯ, ಗಣೇಶ್, ಡಾ.ರಾಧಾಕೃಷ್ಣ, ಸಿ.ಕಣ್ಣನ್ ಇದ್ದರು.

- - - (-ಸಾಂದರ್ಭಿಕ ಚಿತ್ರ)