ಸಾರಾಂಶ
ಲೋಕೋಪಯೋಗಿ ಇಲಾಖೆಯ ವತಿಯಿಂದ 1 ಕೋಟಿ 50 ಲಕ್ಷ ರು. ವೆಚ್ಚದಲ್ಲಿ ಕಡೂರು ಗಡಿಯಿಂದ ಕರಡಿಹಳ್ಳಿ ಬೋವಿ ಕಾಲೋನಿ ಮಾರ್ಗ ಕಲ್ಲುಸಾದರಹಳ್ಳಿವರಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಕರಡಿಹಳ್ಳಿ ಬೋವಿ ಕಾಲೋನಿ ಗ್ರಾಮದಲ್ಲಿ ಭೂಮಿಪೂಜೆ ನೆರವೇರಿಸಿದರು. ನಾನು ಶಾಸಕನಾದ ಮೇಲೆ ಗ್ರಾಮಗಳಿಗೆ ರಸ್ತೆ, ಕುಡಿಯುವ ನೀರು, ಸಮುದಾಯ ಭವನ, ಶಾಲೆ ಹಾಗೂ ದೇವಸ್ಥಾನ ನಿರ್ಮಿಸಿಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಕೆರೆಗಳಿಗೆ ನೀರು ಹರಿಸುವುದಾಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಲೋಕೋಪಯೋಗಿ ಇಲಾಖೆಯ ವತಿಯಿಂದ 1 ಕೋಟಿ 50 ಲಕ್ಷ ರು. ವೆಚ್ಚದಲ್ಲಿ ಕಡೂರು ಗಡಿಯಿಂದ ಕರಡಿಹಳ್ಳಿ ಬೋವಿ ಕಾಲೋನಿ ಮಾರ್ಗ ಕಲ್ಲುಸಾದರಹಳ್ಳಿವರಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಕರಡಿಹಳ್ಳಿ ಬೋವಿ ಕಾಲೋನಿ ಗ್ರಾಮದಲ್ಲಿ ಭೂಮಿಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಪ.ಜಾತಿ, ಪ.ಪಂಗಡಗಳ ಜನರು ವಾಸಿಸುತ್ತಿರುವ ಗ್ರಾಮಗಳ ಅಭಿವೃದ್ಧಿ ಮಾಡುವ ಧ್ಯೇಯೋದ್ದೇಶ ಹೊಂದಿದ್ದು, ಅವರುಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನಾನು ಶಾಸಕನಾದ ಮೇಲೆ ಸದರಿ ಗ್ರಾಮಗಳಿಗೆ ರಸ್ತೆ, ಕುಡಿಯುವ ನೀರು, ಸಮುದಾಯ ಭವನ, ಶಾಲೆ ಹಾಗೂ ದೇವಸ್ಥಾನ ನಿರ್ಮಿಸಿಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಕೆರೆಗಳಿಗೆ ನೀರು ಹರಿಸುವುದಾಗಿ ಹೇಳಿದರು.
ಮಾಜಿ ಜಿ.ಪಂ ಸದಸ್ಯ ಗೊಲ್ಲರಹಳ್ಳಿ ಹನುಮಪ್ಪ ಮಾತನಾಡಿ, ಕ್ಷೇತ್ರದ ಶಾಸಕರಾಗಿ ಶಿವಲಿಂಗೇಗೌಡರು ನಮಗೆ ದೊರೆತನಂತರ ಕಳೆದ ೧೬ ವರ್ಷಗಳಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳು ಸಮಾರೋಪದಲ್ಲಿ ಆಗಿರುವುದರಿಂದ ಶಿವಲಿಂಗೇಗೌಡರು ಪಕ್ಷ ಮೀರಿದ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವುದಲ್ಲದೆ ಮಾದರಿ ರಾಜಕಾರಣಿಯಾಗಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮುಖಂಡರಾದ ಮಾಜಿ ಎಪಿಎಂಸಿ ಅಧ್ಯಕ್ಷ ಕಲ್ಲೇಶಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಕೊಟ್ರೇಶ್, ಶಿವಣ್ಣ, ಯತೀಶ, ಸದಸ್ಯರಾದ ಪದ್ಮನಾಭ, ರಂಗನಾಥ, ಗ್ರಾಮಸ್ಥಾರಾದ ತಿಮ್ಮಪ್ಪ, ರಾಮಾಬೋವಿ, ಎಇಇ ಮುನಿರಾಜು, ಗುತ್ತಿಗೆದಾರ ವೆಂಕಟೇಗೌಡ ಹಾಗೂ ಗ್ರಾಮಸ್ಥರು ಹಾಜರಿದ್ದರು.