ಸಾರಾಂಶ
ಕನ್ನಡಪ್ರಭ ವಾರ್ತೆ ನಾಲತವಾಡ:
ಬಿಜೆಪಿ ಪಕ್ಷವನ್ನು ಬಲಪಡಿಸಲು ಎಲ್ಲರು ನಿರಂತರ ಶ್ರಮಿಸಬೇಕು, ಈ ಮೂಲಕ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಜಿ.ಪಂ ಮಾಜಿ ಸದಸ್ಯ ಬಿಜೆಪಿ ಮುಖಂಡರಾದ ಗಂಗಾಧರ ನಾಡಗೌಡ ಹೇಳಿದರು.ಪಟ್ಟಣದ ಎಂ.ಎಸ್.ಪಾಟೀಲ ಅವರ ಫಾರ್ಮಹೌಸನಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷವನ್ನು ನಾವೆಲ್ಲರು ಸೇರಿ ಬಲಪಡಿಸಬೇಕು. ಅದಕ್ಕೆ ಎಲ್ಲಾ ಕಾರ್ಯಕರ್ತರು ಪ್ರತಿ ಮನೆ ಮನೆಗೆ ತರಳಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸದಸ್ಯತ್ವವನ್ನು ಮಾಡಿಸಲು ಶ್ರಮಿಸಬೇಕು. ನಾವು ನಮ್ಮ ಭಾಗದಲ್ಲಿ ಎಷ್ಟು ಹೆಚ್ಚೆಚ್ಚು ಸದಸ್ಯತ್ವನ್ನು ಮಾಡುತ್ತೇವೆಯೋ ಅಷ್ಟು ನಮ್ಮ ಪಕ್ಷಕ್ಕೆ ಲಾಭವಾಗುತ್ತದೆ. ಮುಂದೇ ನಮ್ಮ ಪಕ್ಷ ಎಲ್ಲಾ ಚುನಾವಣೆಯಲ್ಲಿ ಗೆಲವು ಸಾಧಿಸುತ್ತದೆ. ನಾವೆಲ್ಲರು ಸೇರಿ ಪಕ್ಷವನ್ನು ಬಲಪಡಿಸುವ ಮೂಲಕ ಮುಂದಿನ ಚುನಾವಣೆಗಳ ಗೆಲುವಿಗೆ ಕಾರಣವಾಗಬೇಕು ಎಂದು ಹೇಳಿದರು.ಬಿಜೆಪಿ ಹಿರಿಯ ಮುಖಂಡ ಎಂ.ಎಸ್.ಪಾಟೀಲ ಮಾತನಾಡಿ, ನಾಲತವಾಡ ಪಟ್ಟಣ ಹಾಗೂ ಸುತ್ತ ಮುತ್ತಲಿನ ಗ್ರಾಮ ಬಿಜೆಪಿ ಪಕ್ಷದ ತವರು ಮನೆಯಾಗಿದೆ. ಈ ಪ್ರದೇಶದಲ್ಲಿ ಅತಿಹೆಚ್ಚು ಜನರು ನಮ್ಮ ಪಕ್ಷಕ್ಕೆ ಸೇರಿದ್ದಾರೆ, ಇನ್ನು ಹೆಚ್ಚಿನ ಸದಸ್ಯತ್ವವನ್ನು ನಾವೆಲ್ಲರು ಸೇರಿ ಮಾಡಬೇಕಾಗಿದೆ. ಕಳೆದ 2024ರ ಸದಸ್ಯತ್ವ ಅಭಿಯಾನ ಕೈಗೊಂಡಿರುವ ಕಾರಣ ಎಲ್ಲಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸದಸ್ಯತ್ವ ಮಾಡಿಸುವುದರ ಮೂಲಕ ನಮ್ಮ ಪಕ್ಷವನ್ನು ಇನ್ನಷ್ಟು ಬಲಿಷ್ಟಗೊಳಿಸಬೇಕಾಗಿದೆ ಎಂದು ಕರೆ ನೀಡಿದರು.ಜಿ.ಪಂ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ, ಎಂ.ಬಿ.ಅಂಗಡಿ, ತಾಲೂಕಾ ಸದಸ್ಯತ್ವ ಅಭಿಯಾನ ಸಂಚಾಲಕ ಮದನಸ್ವಾಮಿ ಹಿರೇಮಠ, ಮಾತನಾಡಿದರು. ಸಂಗಮೇಶ ಮೇಟಿ ನೀರೂಪಿಸಿ ವಂದಿಸಿದರು. ಪ್ರಧಾನಿಗೆ ವಿಶೇಷ ಪೂಜೆ
ಮಂಗಳವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿ ಮುಖಂಡರು ವೀರೇಶ್ವರ ಮಹಾಮನೆಯಲ್ಲಿ ಬೆಳಗ್ಗೆ 10 ಗಂಟೆಗೆ ಧೀರ್ಘಾಯುಷ್ಯ ಪ್ರಾಪ್ತಿಗಾಗಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡುವ ಮುಖಾಂತರ ಪ್ರಧಾನಿ ಮೋದಿಗೆ ಜನ್ಮ ದಿನದ ಶುಭಾಶಯಗಳನ್ನು ಕೋರಿದರು.ಈ ವೇಳೆ ತಾಲೂಕಾ ಮಂಡಳ ಅಧ್ಯಕ್ಷ ಜಗದೀಶ ಪಂಪಣ್ಣವರ, ಶ್ರೀಶೈಲ ದೊಡಮನಿ, ಮಂಡಳ ಕಾರ್ಯದರ್ಶಿ ಸಂಜು ಬಾಗೇವಾಡಿ, ಬಿಜೆಪಿ ಮುಖಂಡರಾದ ಗಿರೀಶಗೌಡ ಪಾಟೀಲ, ಚಂದ್ರಶೇಖರ ಗಂಗನಗೌಡರ, ಖಾಜಾಹುಸೇನ ಎತ್ತಿನಮನಿ, ಬಸಣ್ಣ ವಡಗೇರಿ, ಪವಡುಬಸ್ಸು ದೇಶಮುಖ, ಬಸವರಾಜ ತಿರಮುಖಿ, ಚನ್ನಪ್ಪಗೌಡ ಹಂನಗೌಡರ, ವೀರೇಶ ರಕ್ಕಸಗಿ, ಸಂಗಣ್ಣ ಹಾವರಗಿ, ಸಂಗಣ್ಣ ಕುಳಗೇರಿ, ಶರಣಪ್ಪ ಗಂಗನಗೌಡರ, ಮಹಾಂತಯ್ಯ ಮನದಾಳಮಠ, ಅಮರೇಶ ಹಟ್ಟಿ ಹಾಗೂ ಇನ್ನಿತರರು ಇದ್ದರು.