ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆ ಸಂಯೋಜಿತ ತುಮಕೂರು ಜಿಲ್ಲಾ ಸಮಿತಿಯ ವತಿಯಿಂದ ಆಶಾ ಕಾರ್ಯಕರ್ತರ ಜಿಲ್ಲಾ ಮಟ್ಟದ ಪ್ರತಿಭಟನೆ ನಡೆಯಿತು. ತುಮಕೂರು ನಗರದ ಟೌನ್ ಹಾಲ್ ವೃತ್ತದಿಂದ ಎಂಜಿ ರೋಡ್ ಮೂಲಕ ಡಿಸಿ ಕಚೇರಿಯವರೆಗೆ ಮೆರವಣಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಆಶಾ ಸಂಘದ ಜಿಲ್ಲಾ ಗೌರವ ಅಧ್ಯಕ್ಷರಾದ ಮಂಜುಳಾ ಮಾತನಾಡಿ ಕಳೆದ ಜನವರಿ 7ರಿಂದ 10 ನೇ ತಾರೀಖಿನವರೆಗೆ ಆರು ತಿಂಗಳ ಹಿಂದೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಜರುಗಿದ ರಾಜ್ಯದ ಆಶಾ ಕಾರ್ಯಕರ್ತೆಯರ ಬೃಹತ್ ಅನಿರ್ದಿಷ್ಟ ಹೋರಾಟದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಒಟ್ಟಾರೆ ಪ್ರೋತ್ಸಾಹಧನ ಸೇರಿ 10 ಸಾವಿರ ನಿಗದಿ ಮಾಡಲಾಗುವುದೆಂದು ಘೋಷಿಸಿದ್ದರು. ಹಾಗೂ ಬಜೆಟ್ ನಲ್ಲಿ ಸ್ಕೀಲ್ ವರ್ಕರ್ ಗಳಿಗೆ 1 ಸಾವಿರ ಹೆಚ್ಚಿಸಲಾಗುವುದೆಂದು ಸಹ ಹೇಳಿದ್ದರು ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ಈಗಾಗಲೇ 1 ಸಾವಿರ ಘೋಷಣೆಯಾಗಿದ್ದು, ಆಶಾ ಕಾರ್ಯಕರ್ತೆಯರಿಗೆ ಇನ್ನೂ ಘೋಷಣೆಯಾಗದಿರುವುದು ಆಶಾ ಕಾರ್ಯಕರ್ತೆಯರನ್ನು ಆಕ್ರೋಶಗೊಳಿಸಿದೆ ಮತ್ತು 1 ಸಾವಿರ ರು.ಘೋಷಣೆ ಮಾಡಿದ್ದನ್ನು ಜಾರಿಗೊಳಿಸದೆ ಅನ್ಯಾಯ ಮಾಡಿದೆ ಮತ್ತು ತಾರತಮ್ಯವೆಸಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಆಶಾ ಸಂಘದ ಜಿಲ್ಲಾ ಅಧ್ಯಕ್ಷರಾದ ಎಂ.ಆರ್. ನಿರ್ಮಲ ಮಾತನಾಡಿ ಬೆಂಗಳೂರಿನಲ್ಲಿ ನಡೆದ ನಾಲ್ಕು ದಿನಗಳ ಹೋರಾಟದ ನಂತರ ಮುಖ್ಯಮಂತ್ರಿಗಳು ಪ್ರೋತ್ಸಾಹ ಧನ ಸೇರಿ 10 ಸಾವಿರ ಕೊಡುತ್ತೇವೆ ಎಂದು ಘೋಷಿಸಿದರು. ಅವರ ಮಾತಿಗೆ ಗೌರವಕೊಟ್ಟು ಹೋರಾಟ ಕೈಬಿಟ್ಟೆವು ಆದರೆ ಆರು ತಿಂಗಳು ಕಳೆದಿದೆ ಈಬಗ್ಗೆ ಯಾವುದೇ ಕ್ರಮ ಇಲ್ಲ ಎಂದು ಸರ್ಕಾರ ಕ್ರವನ್ನು ಖಂಡಿಸಿದರು.ಜಿಲ್ಲಾ ಕಾರ್ಯದರ್ಶಿ ರೇಖಾ ಜಿಲ್ಲಾ ಸಲಹೆಗಾರರ ಕಲ್ಯಾಣಿ ಮಾತನಾಡಿದರು ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಎಂ ಆರ್ ನಿರ್ಮಲ, ಜಿಲ್ಲಾ ಕಾರ್ಯದರ್ಶಿ ರೇಖಾ, ಜಿಲ್ಲಾ ಉಪಾಧ್ಯಕ್ಷರಾದ ಮೀನಾಕ್ಷ್ಮಿ, ಲತಾ, ಯಶೋದಮ್ಮ, ಶಾರದಮ್ಮ, ಸುನಂದ, ದಯಾಮಣಿ, ಲಲಿತಾ, ಪುಷ್ಪಲತಾ, ಜಯಲಕ್ಷ್ಮಿ, ಗಾಯಿತ್ರಿ, ಶಾಂತಮ್ಮ, ಗಿರಿಜ, ಸರಸ್ವತಿ ಶೈಲಜಾ ಸೇರಿದಂತೆ ಎಲ್ಲಾ ತಾಲೂಕು ಮುಖಂಡರು, ಜಿಲ್ಲಾ ನಾಯಕರು ಹೋರಾಟದ ನೇತೃತ್ವ ವಹಿಸಿದ್ದರು.