ಸಾರಾಂಶ
ಆಷಾಢ ಮಾಸದಲ್ಲಿ ಶುಕ್ರವಾರ ಅಜ್ಜಿಹಬ್ಬ ಆಚರಿಸಿ ಹೋಳಿಗೆ ಎಡೆಕೊಡುವುದು ದಾವಣಗೆರೆಯಲ್ಲಿರುವ ಸಂಪ್ರದಾಯ. ಆಷಾಢ ತಿಂಗಳಲ್ಲಿ ಬರುವ ನಾಲ್ಕು ಶುಕ್ರವಾರಗಳು ಮುಗಿದ ಬಳಿಕ ಅಜ್ಜಿ ಹಬ್ಬ ಮಾಡಲಾಗುತ್ತದೆ. ನಗರದ ನಿಟುವಳ್ಳಿ ಸೇರಿದಂತೆ ವಿವಿಧೆಡೆ ಅಮ್ಮನವರ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶುಕ್ರವಾರ ಅಜ್ಜಿಹಬ್ಬವನ್ನು ಜನರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ದಾವಣಗೆರೆ: ಆಷಾಢ ಮಾಸದಲ್ಲಿ ಶುಕ್ರವಾರ ಅಜ್ಜಿಹಬ್ಬ ಆಚರಿಸಿ ಹೋಳಿಗೆ ಎಡೆಕೊಡುವುದು ದಾವಣಗೆರೆಯಲ್ಲಿರುವ ಸಂಪ್ರದಾಯ. ಅದರಂತೆ ಆಷಾಢ ತಿಂಗಳಲ್ಲಿ ಬರುವ ನಾಲ್ಕು ಶುಕ್ರವಾರಗಳು ಮುಗಿದ ಬಳಿಕ ಅಜ್ಜಿ ಹಬ್ಬ ಮಾಡಲಾಗುತ್ತದೆ.
ಸಣ್ಣ ಮಕ್ಕಳ ಮೈಮೇಲೆ ಗುಳ್ಳೆಗಳು ಆಗುವುದು, ಜ್ವರ ಬರುವುದು ಅಥವಾ ಅಮ್ಮ ಬಂದಿದ್ದರೆ ಅವುಗಳನ್ನು ದೂರ ಮಾಡು ಎಂದು ದೇವಿಯನ್ನು ಶ್ರದ್ಧಾ-ಭಕ್ತಿಯಿಂದ ಪೂಜಿಸಿ ಹೋಳಿಗೆ ನೈವೇದ್ಯ ಅರ್ಪಿಸುವುದು ಅಜ್ಜಿ ಹಬ್ಬದ ಹಿಂದಿನ ವಿಶೇಷ. ನಗರದ ನಿಟುವಳ್ಳಿ ಸೇರಿದಂತೆ ವಿವಿಧೆಡೆ ಅಮ್ಮನವರ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶುಕ್ರವಾರ ಅಜ್ಜಿಹಬ್ಬವನ್ನು ಜನರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.ನಿಟುವಳ್ಳಿಯ ಶೀ ದುರ್ಗಾಂಬಿಕಾ ದೇವಸ್ಥಾನ ಆವರಣದಲ್ಲಿಯೇ ದೇವಿ ಮೂರ್ತಿ ಪ್ರತಿಷ್ಠಾಪಿಸಿ, ಮಣ್ಣಿನ ಕುಡಿಕೆಯಲ್ಲಿ ಬೇವಿನ ಸೊಪ್ಪು ಇಟ್ಟು ಪೂಜೆ ಸಲ್ಲಿಸಿದ ನಂತರ ಅದನ್ನು ದೇವಸ್ಥಾನದ ಪಾದಗಟ್ಟೆಗೆ ತರಲಾಯಿತು. ಸಂಜೆ 4 ಗಂಟೆ ಆಗುತ್ತಿದ್ದಂತೆಯೆ ತಾಯಂದಿರು ಮಕ್ಕಳೊಂದಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದರು.
ಸಿಹಿ ಪದಾರ್ಥ ನೈವೇದ್ಯೆ ಮಾಡಲು ಬಾಳೆ ಎಲೆಯಲ್ಲಿ ತರಲಾಗಿತ್ತು. ಎಡೆ ನೀಡಿ ಬಂದವರು ಅಮ್ಮನವರಿಗೆ ಪ್ರದಕ್ಷಣೆ ಹಾಕಿ ಧನ್ಯತಾಭಾವ ತಾಳಿದರು. ಭಕ್ತರು ಕುಟುಂಬದ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.- - - -26ಕೆಡಿವಿಜಿ44, 45ಃ: