ಪುತ್ತೂರು: ರಾಜ್ಯ ಸರ್ಕಾರವು ಮಾನ್ಯತೆ ಇರುವ ಕೋರ್ಸ್ ಗಳನ್ನು ಮಾತ್ರ ಉಳಿಸಿಕೊಂಡು, ಉಪಯೋಗವಿಲ್ಲದ ಕೋರ್ಸ್ ಗಳನ್ನು ರದ್ದು ಮಾಡಲಿದೆ. ಇದರಿಂದಾಗಿ ಮಾನ್ಯತೆ ಇಲ್ಲದ ಕೆಲವೊಂದು ಕೋರ್ಸ್ ಗಳು ರದ್ದು ಆಗಲಿದೆ. ಈ ಬಗ್ಗೆ ಪೋಷಕರು ಗಮನ ಹರಿಸಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.ಶಾಲಾ ಶಿಕ್ಷಣ ಇಲಾಖೆ, ದ.ಕ. ಜಿಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಸಹಯೋಗದಲ್ಲಿ ಮೇ ೧೬ರಂದು ಕೊಂಬೆಟ್ಟು ಬಂಟರ ಭವನದಲ್ಲಿ ನಡೆದ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ ಪಡೆದ ಶಾಲೆಗಳು, ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ನಿವೃತ್ತ ಮುಖ್ಯ ಶಿಕ್ಷಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.ವಾಣಿಜ್ಯ ಕಟ್ಟಡದ ಕೊಠಡಿಯಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭವಾಗುತ್ತದೆ. ಅಲ್ಲಿ ಮಕ್ಕಳು ಏನನ್ನೂ ಕಲಿಯಲು ಸಾಧ್ಯವಿಲ್ಲ. ಸಂಸ್ಥೆಯವರು ಹಣ ಮಾಡಬಹುದು. ಆದರೆ ಸಮಾಜ ಎತ್ತ ಸಾಗಲಿದೆ. ಅಲ್ಲಿ ಕಲಿತರೆ ಮಕ್ಕಳು ಉತ್ತಮ ಪ್ರಜೆಗಳಾಗಲು ಸಾಧ್ಯವಿದೆಯಾ. ಇದಕ್ಕಾಗಿ ಸರಕಾರದ ಹಂತದಲ್ಲಿ ಚರ್ಚೆಯಾಗಿದ್ದು, ಮಾನ್ಯತೆಯಿಲ್ಲದ ಕೋರ್ಸ್ ಗಳ ಬಗ್ಗೆ ಸರಕಾರವೇ ಕ್ರಮ ಕೈಗೊಳ್ಳಲಿದೆ ಎಂದರು. ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಶೇ. ೧೦೦ ಫಲಿತಾಂಶ ಪಡೆಯುವಲ್ಲಿ ಎಲ್ಲ ಶಾಲೆಗಳಲ್ಲೂ ಪ್ರಯತ್ನಗಳು ನಡೆಯತ್ತಿವೆ. ಇದರಲ್ಲಿ ಮಕ್ಕಳು, ಪೋಷಕರ ಸಹಕಾರವು ಅವಶ್ಯಕ ಎಂದರು.ಸನ್ಮಾನ, ಅಭಿನಂದನೆ:ನಿವೃತ್ತ ಮುಖ್ಯ ಶಿಕ್ಷಕರಾದ ಜಯಲಕ್ಷ್ಮೀ ಎ., ಜಯರಾಮ ಶೆಟ್ಟಿ, ನಳಿನಿ ಕೆ., ಶ್ರೀಧರ ಭಟ್, ರಮೇಶ್ ಮಯ್ಯ, ಶ್ರೀಪತಿ ಭಟ್, ಮೀರಾ ರೋಡ್ರಿಗಸ್ ಅವರನ್ನು ಸನ್ಮಾನಿಸಲಾಯಿತು.

೨೦೨೫-೨೬ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಸರ್ಕಾರಿ ಪ್ರೌಢಶಾಲೆಯ ಶಿಲ್ಪ ವಿಧಾತ್ರಿ, ಭಾನುಪ್ರಿಯ, ಸಪ್ನಾ, ಅನುದಾನಿತ ಶಾಲೆಯ ಯಶ್ವಿತಾ, ದೃತಿ, ಆದಿತ ಭಟ್, ದೀಪಕ್‌ ಪಿ.ಎಸ್., ಅನುದಾನ ರಹಿತ ಶಾಲೆಯ ಆದ್ಯ, ಅನನ್ಯ, ಅಪೇಕ್ಷಾ ಎನ್., ಪ್ರೀತಿ ಪ್ರಭು ಶಾವ್ಯ ಯು.ರೈ, ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಾದ ಅಭಿನವ ಕೃಷ್ಣ, ಕೆ.ಪ್ರಥ್ವಿ, ಸಪ್ನಾಎಸ್., ಶ್ರೀರಕ್ಷಾ ಹಾಗೂ ಶೇ. ೧೦೦ ಫಲಿತಾಂಶ ದಾಖಲಿಸಿದ ಎಲ್ಲ ಶಾಲೆಗಳ ಮುಖ್ಯಸ್ಥರನ್ನು ಅಭಿನಂದಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸಿ. ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಎಸ್ಸೆಸ್ಸೆಲ್ಸಿ ನೋಡೆಲ್ ಅಧಿಕಾರಿ ಹರಿಪ್ರಸಾದ್, ಕಡಬ ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲ ಅಭಿನಂದನೆ ಸಲ್ಲಿಸಿದರು. ಪುತ್ತೂರು ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ., ಪ್ರೌಢಶಾಲೆ ಮುಖ್ಯಶಿಕ್ಷಕರ ಸಂಘದ ಕಾರ್ಯದರ್ಶಿ ಜಯಲಕ್ಷ್ಮೀ ಉಪಸ್ಥಿತರಿದ್ದರು.ಸಂಘದ ಅಧ್ಯಕ್ಷ ವಸಂತ ಮೂಲ್ಯ ಸ್ವಾಗತಿಸಿ, ಉಪಾಧ್ಯಕ್ಷ ಮೋನಪ್ಪ ವಂದಿಸಿದರು. ಕೆಯ್ಯೂರು ಕೆಪಿಎಸ್ ನ ಸಹಶಿಕ್ಷಕ ವಿನೋದ್ ಕುಮಾರ್ ನಿರೂಪಿಸಿದರು.