ಬಿ.ಜೆ.ಕೆರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಅಶೋಕ ರೆಡ್ಡಿ

| Published : Aug 01 2025, 12:30 AM IST

ಸಾರಾಂಶ

ತಾಲೂಕಿನ ಬಿ.ಜಿ.ಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಶೋಕ ರೆಡ್ಡಿ, ಉಪಾಧ್ಯಕ್ಷರಾಗಿ ಎಚ್.ಆರ್.ತಿರುಮಲೇಶ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೊಳಕಾಲ್ಮುರು: ತಾಲೂಕಿನ ಬಿ.ಜಿ.ಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಶೋಕ ರೆಡ್ಡಿ, ಉಪಾಧ್ಯಕ್ಷರಾಗಿ ಎಚ್.ಆರ್.ತಿರುಮಲೇಶ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

11 ನಿರ್ದೇಶಕರ ಬಲದ ಸಂಘದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ ರೆಡ್ಡಿ, ತಿರುಮಲೇಶ ಹೊರತುಪಡಿಸಿ ಬೇರೆಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ಘೋಷಿಸಲಾಯಿತು. ಚುನಾವಣಾಧಿಕಾರಿಯಾಗಿ ಟಿ.ಹೇಮಣ್ಣ ಕರ್ತವ್ಯ ನಿರ್ವಹಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಓಬನಾಯಕ, ರಹಮತ್‌ಹುಲ್ಲಾ, ಶಮಂತ ಕುಮಾರ್, ಬಿ.ಸಂಜೀವಪ್ಪ, ಬಿ.ರವೀಂದ್ರ, ಬಿ.ಆರ್.ಗೋಪಿ, ವೇದಾವತಿ , ಚಂದ್ರಮ್ಮ, ಲಕ್ಷಮ್ಮ, ಕಾರ್ಯದರ್ಶಿ ಕೀರ್ತಿಕುಮಾರ್, ವಿಎಸ್‌ಎಸ್‌ಎನ್ ಅಧ್ಯಕ್ಷ ಜಿ.ಮಂಜುನಾಥ, ಸದಸ್ಯರಾದ ತಿಮ್ಮಾರೆಡ್ಡಿ, ಆತಾವುಲ್ಲಾ ಮುಖಂಡರಾದ ಎಂ.ಪಿ.ನಾಗರಾಜ, ಬಿ.ಟಿ.ನಾಗಭೂಷಣ, ಅಜ್ಜಪ್ಪ ಇದ್ದರು.