Ashokrao Mallabadi demands interim crop insurance relief for farmers

ಕನ್ನಡಪ್ರಭ ವಾರ್ತೆ ಯಾದಗಿರಿ

ಪ್ರಸಕ್ತ, 2026-2027ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟ ಬರಗಾಲ ಆವರಿಸಿ, ಬಿತ್ತಿದ ಬೆಳೆಗಳು ಬೆಳವಣಿಗೆ ಕುಂಠಿತಗೊಂಡು, ಇಳುವರಿಯಲ್ಲಿ ಗಣನೀಯ ಪ್ರಮಾಣದ ಕುಸಿತ ಉಂಟಾಗಿರುವುದರಿಂದ, ಆರ್ಥಿಕ ನಷ್ಟ ತಗ್ಗಿಸುವಲ್ಲಿ ಹಾಗೂ ಸಕಾಲದಲ್ಲಿ ಪರಿಹಾರ ಜರುಗಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ಜಿಲ್ಲೆಯ 50 ಸಾವಿರ ರೈತರು ಬೆಳೆ ವಿಮೆ ಮಾಡಿಸಿದ್ದು, ರೈತರಿಗೆ ಮಧ್ಯಂತರ ಪರಿಹಾರ ಘೋಷೆಣೆ ಮಾಡಬೇಕು ಎಂದು ಕೃಷ್ಣಾ ಅಚ್ಚುಕಟ್ಟು ಭೂಮಿ ಉಳಿಸಿ ಹೋರಾಟ ಸಮಿತಿಯ ಕಾರ್ಯದರ್ಶಿ, ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪುರಸ್ಕೃತ ರೈತರಾದ ಅಶೋಕರಾವ್‌ ಮಲ್ಲಾಬಾದಿ ಆಗ್ರಹಿಸಿದ್ದಾರೆ.

ಜಿಲ್ಲೆಯಾದ್ಯಂತ ಮಳೆ ಕೂರತೆಯಿಂದ ಕೃಷಿ ಚಟುವಟಿಕೆಗಳು ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ಸರ್ಕಾರವು ಜಿಲ್ಲೆಯ ಎಲ್ಲ ತಾಲೂಕಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದೆ. ಪ್ರಮುಖ ಬೆಳೆಗಳಾದ ಹತ್ತಿ, ತೂಗರಿ, ಹೆಸರು, ಸೋಯಾ, ಮೆಣಿಸಿನಕಾಯಿ ಬೆಳೆಗಳು ಮಳೆ ಕೂರತೆಯಿಂದ ಉಂಟಾದ ಹಾನಿ ಹಾಗೂ ಬೆಳೆಗಳು ಪ್ರಸ್ತುತ ಸ್ಥಿತಿಗತಿಗಳನ್ನು ಪರಿಗಣಿಸಿ, ಬೆಳೆವಿಮೆ ಯೋಜನೆಯಡಿ ರೈತರಿಗೆ ಪರಿಹಾರ ಕಲ್ಪಿಸಲು ಮಧ್ಯಂತರ ಬೆಳೆವಿಮೆ ಪ್ರಸ್ತಾವನೆ ಸಲ್ಲಿಸಿ ಬೆಳೆ ವಿಮೆ ಕಂಪನಿಯಿಂದ ಹಾಗೂ ಸರ್ಕಾರದ ಅನುಮೋದನೆ ದೂರಕಿಸಬೇಕು ಎಂದು ಅಶೋಕರಾವ್‌, ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಮಾಡಿಸಿದ್ದು ಬೆಳೆ ನಷ್ಟ ಅನುಭವಿಸಿದ ರೈತರಿಗೆ ಗಣನೀಯ ಪ್ರಮಾಣದಲ್ಲಿ ಆರ್ಥಿಕ ನೆರವು ದೂರೆತಲ್ಲಿ ರೈತರ ಪರಸ್ಥಿತಿ ಸುಧಾರಣೆ ಯಾಗುವುದರಲ್ಲಿ ಸಂಶಯವಿಲ್ಲ ಎಂದು ಕೋರಿದ್ದಾರೆ.

ಪೋಟೊ: 27ವೈಡಿಆರ್12 ಅಶೋಕರಾವ್‌ ಮಲ್ಲಾಬಾದಿ, ಕೃಷ್ಣಾ ಅಚ್ಚುಕಟ್ಟು ಭೂಮಿ ಉಳಿಸಿ ಹೋರಾಟ ಸಮಿತಿಯ ಕಾರ್ಯದರ್ಶಿ, ಶಹಾಪುರ.