ನಾಳೆ ಸಂಕರ್ಷಣ ನೃತ್ಯಾಲಯದ ಆಶ್ರಿತಾ ಎನ್. ರಂಗಪ್ರವೇಶ

| Published : Aug 10 2024, 01:31 AM IST

ಸಾರಾಂಶ

ಹರಿಹರ ನಗರದ ಸಂಕರ್ಷಣ ನೃತ್ಯಾಲಯದ ಆಶ್ರಿತಾ ಎನ್. ರಂಗಪ್ರವೇಶ ಕಾರ್ಯಕ್ರಮ ಆ.೧೧ರಂದು ಆಯೋಜನೆ ಮಾಡಲಾಗಿದೆ. ಪ್ರತಿಭಾವಂತೆ ಆಶ್ರಿತಾ ನಗರದ ಪ್ರಸಿದ್ಧ ಅಡುಗೆ ಗುತ್ತಿಗೆದಾರ ನಾಗರಾಜ್ ಮತ್ತು ಅನಿತಾ ದಂಪತಿ ಪುತ್ರಿಯಾಗಿದ್ದಾರೆ ಎಂದು ಸಂಕರ್ಷಣ ನೃತ್ಯಾಲಯದ ಅಧ್ಯಕ್ಷೆ, ನೃತ್ಯಗುರು ವಿದುಷಿ ರಾಧಾ ಭಾಸ್ಕರ್ ಹರಿಹರದಲ್ಲಿ ಹೇಳಿದ್ದಾರೆ.

- ಸೆಂಟ್ ಮೇರಿಸ್ ಬಸಲಿಕಾ ಆವರಣದ ಮರಿಯಾ ಸದನದಲ್ಲಿ ಆಯೋಜನೆ: ವಿದುಷಿ ರಾಧಾ ಭಾಸ್ಕರ್‌ - - - ಕನ್ನಡಪ್ರಭ ವಾರ್ತೆ ಹರಿಹರ

ನಗರದ ಸಂಕರ್ಷಣ ನೃತ್ಯಾಲಯದ ಆಶ್ರಿತಾ ಎನ್. ರಂಗಪ್ರವೇಶ ಕಾರ್ಯಕ್ರಮ ಆ.೧೧ರಂದು ಆಯೋಜನೆ ಮಾಡಲಾಗಿದೆ. ಪ್ರತಿಭಾವಂತೆ ಆಶ್ರಿತಾ ನಗರದ ಪ್ರಸಿದ್ಧ ಅಡುಗೆ ಗುತ್ತಿಗೆದಾರ ನಾಗರಾಜ್ ಮತ್ತು ಅನಿತಾ ದಂಪತಿ ಪುತ್ರಿಯಾಗಿದ್ದಾರೆ ಎಂದು ಸಂಕರ್ಷಣ ನೃತ್ಯಾಲಯದ ಅಧ್ಯಕ್ಷೆ, ನೃತ್ಯಗುರು ವಿದುಷಿ ರಾಧಾ ಭಾಸ್ಕರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸ್ಥೆಯಲ್ಲಿ ೧2 ವರ್ಷಗಳಿಂದ ಮಾರ್ಗದರ್ಶನ ಪಡೆದ ಆಶ್ರಿತಾ, ನಗರದ ಸೆಂಟ್ ಮೇರಿಸ್ ಬಸಲಿಕಾ ಆವರಣದ ಮರಿಯಾ ಸದನದಲ್ಲಿ ರಂಗಪ್ರವೇಶ ನಡೆಸಲಿದ್ದಾರೆ. ಆ.೧೧ರಂದು ಸಂಜೆ ೫ ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿಯ ಕರ್ನಾಟಕ ಕಲಾ ಶ್ರೀ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಗುರುಮಾತೆ ಸುಜಾತ ರಾಜಗೋಪಾಲ್, ಎಂ.ಕೆ.ಇ.ಟಿ. ಶಾಲೆಯ ರಿಜಿಸ್ಟ್ರಾರ್ ಡಾ. ವಿ.ಟಿ. ಅಚ್ಯುತ್, ಆರ್‌.ಎಸ್.ಎಸ್. ನಾಯಕರಾದ ಡಾ. ಆರ್.ಆರ್. ಖಮಿತ್ಖರ್, ನಿವೃತ್ತ ಶಿಕ್ಷಕಿ ನಾಗಮಣಿ ಶಾಸ್ತ್ರಿ, ದೊಡ್ಡಬಾತಿಯ ತಪೋವನ ಸಮೂಹ ಸಂಸ್ಥೆ ಅಧ್ಯಕ್ಷ ಡಾ. ವಿ.ಎಂ. ಶಶಿಕುಮಾರ್ ಮೆರ‍್ವಾಡೆ ಮತ್ತು ಹಲವರು ಭಾಗವಹಿಸಲಿದ್ದಾರೆ ಎಂದರು.

ರಂಗಪ್ರವೇಶ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಂಗೀತ ಕೌಸ್ತುಭ ಪ್ರಶಸ್ತಿ ಪುರಸ್ಕೃತೆ ವಿದುಷಿ ವಿಭಾಶ್ರೀ ಸಿಂಹ ಗಾಯನ ಮಾಡುವರು. ಶಿಷ್ಟಾಚಾರದಂತೆ ನಟುವಾಂಗವನ್ನು ಗುರು ಹಾಗೂ ವಿದುಷಿ ರಾಧಾ ಭಾಸ್ಕರ್ ನಡೆಸುವರು. ಮೃದಂಗವನ್ನು ಮೈಸೂರಿನ ಪಿ.ಎಸ್. ಶ್ರೀಧರ್, ಕೊಳಲು ವಾದನವನ್ನು ಮೈಸೂರಿನ ಸಮೃದ್ಧ ಶ್ರೀನಿವಾಸ್ ಹಾಗೂ ಪಿಟೀಲು ವಾದನವನ್ನು ಬೆಂಗಳೂರಿನ ಎಚ್.ಎಸ್. ಕೇಶವಪ್ರಸಾದ್ ನುಡಿಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ವಿ.ಮಂಜರಿ ಹೊಂಬಾಳೆ ನಿರೂಪಣೆ ನಡೆಸಿಕೊಡುವರು ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಕರ್ಷಣ ನೃತ್ಯಾಲಯದ ಪ್ರಧಾನ ಕಾರ್ಯದರ್ಶಿ ಎಸ್.ಡಿ.ರಜನಿ, ನೃತ್ಯಪಟು ಆಶ್ರಿತಾ ಉಪಸ್ಥಿತರಿದ್ದರು.

- - -

ಬಾಕ್ಸ್‌ * 12 ವರ್ಷಗಳಿಂದ ನೃತ್ಯಾಭ್ಯಾಸ ಆಶ್ರಿತಾ ಸಂಸ್ಥೆಯಲ್ಲಿ ೧೨ ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ನೃತ್ಯದ ೬ ವರ್ಷಗಳ ಪಯಣದಲ್ಲಿ ಜೂನಿಯರ್, ನಂತರದ ೬ ವರ್ಷಗಳಲ್ಲಿ ಸೀನಿಯರ್ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸಿದ್ದಾರೆ. ಕರ್ನಾಟಕ ಸರ್ಕಾರ ನಡೆಸುವ ಜೂನಿಯರ್ ಮತ್ತು ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ವಿದ್ವತ್ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದಾರೆ. ಇಷ್ಟೆಲ್ಲಾ ತರಬೇತಿ ಪಡೆದಿರುವ ಆಶ್ರಿತಾ ಆಗಸ್ಟ್ ೧೧ರಂದು ರಂಗ ಪ್ರವೇಶಕ್ಕೆ ಸಜ್ಜಾಗಿದ್ದು, ಕಲಾಭಿಮಾನಿಗಳು ಪಾಲ್ಗೊಳ್ಳಲು ಮನವಿ ಮಾಡಿದರು.

- - - -8ಎಚ್‌ಆರ್‌ಆರ್‌3:

ಹರಿಹರ ಸಂಕರ್ಷಣ ನೃತ್ಯಾಲಯದ ಆಶ್ರಿತಾ ಎನ್. ರಂಗಪ್ರವೇಶ ಕಾರ್ಯಕ್ರಮ ಕುರಿತು ವಿದುಷಿ ರಾಧಾ ಭಾಸ್ಕರ್ ಮಾಹಿತಿ ನೀಡಿದರು.