ಲೋಕ ಕಲ್ಯಾಣಾರ್ಥವಾಗಿ ನಗರದಲ್ಲಿ ಅಷ್ಟ ಲಕ್ಷ ದ್ರವ್ಯ ಶ್ರೀ ಶಕ್ತಿ ಮಹಾಗಣಪತಿ ಹೋಮ
ಕನ್ನಡಪ್ರಭ ವಾರ್ತೆ ತುಮಕೂರು ಲೋಕ ಕಲ್ಯಾಣಾರ್ಥವಾಗಿ ನಗರದಲ್ಲಿ ಅಷ್ಟ ಲಕ್ಷ ದ್ರವ್ಯ ಶ್ರೀ ಶಕ್ತಿ ಮಹಾಗಣಪತಿ ಹೋಮ ಶ್ರದ್ದಾಭಕ್ತಿಯಿಂದ ನಡೆಯುತ್ತಿದೆ. ನಗರದ ಸೋಮೇಶ್ವರ ಪುರಂನ 3ನೇ ಕ್ರಾಸ್ ನಲ್ಲಿರುವ ಗಾಣದಾಳ್ ಆಸ್ಪತ್ರೆ ಪಕ್ಕದ ಬೃಹತ್ ಜಾಗದಲ್ಲಿ ಪ್ರಧಾನ ಪುರೋಹಿತ್ ಕೆ.ವಿ. ರಮೇಶ್ ಶರ್ಮರವರ ನೇತೃತ್ವದಲ್ಲಿ ಟಿ.ಎನ್.ಲೋಕೇಶ್ ಮತ್ತು ಎಲ್.ಜಯಂತ್ ಸೇರಿದಂತೆ 15 ಆಗಮಿಕರು ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಮಂತ್ರ ಪಠಣದೊಂದಿಗೆ ಸಾಮೂಹಿಕವಾಗಿ ಹೋಮಾದಿಗಳನ್ನು ನೇರವೇರಿಸಿದರು.
ನಾಲ್ಕು ದಿನಗಳ ಕಾಲ ನಡೆಯುವ ಹೋಮಾದಿಗಳಿಗೆ 1 ಲಕ್ಷ ಮೋದಕ, 1 ಲಕ್ಷ ಬಾಳೆಹಣ್ಣು, 1 ಲಕ್ಷ ಕಬ್ಬು, 1 ಲಕ್ಷ ಮಧುಪರ್ಕ, 1 ಲಕ್ಷ ಗರಿಕೆ, 1 ಲಕ್ಷ ಪಂಚಕಜ್ಜಾಯ, 1 ಲಕ್ಷ ಆಜ್ಯ, 1 ಲಕ್ಷ ಚರು ಅನ್ನ ಇವುಗಳನ್ನು ಬಳಸಲಾಗುತ್ತಿದ್ದು, ಮಂಗಳವಾರ ರಾತ್ರಿ ಅಂಗಾರಕ ಸಂಕಷ್ಟ ಚತುರ್ಥಿ ಪ್ರಯುಕ್ತ ಅಷ್ಟ ಲಕ್ಷ ದ್ರವ್ಯ ಶ್ರೀ ಶಕ್ತಿ ಮಹಾಗಣಪತಿ ಹೋಮದ ಅಂಗವಾಗಿ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಮಹಾ ಪೂರ್ಣಾಹುತಿಯನ್ನು ನೇರವೇರಿಸಲಾಗುವುದು ಎಂದು ಹೊಳವನಹಳ್ಳಿಯ ಪ್ರಧಾನ ಆಗಮಿಕರಾದ ಕೆ.ವಿ.ರಮೇಶ್ ಶರ್ಮ ತಿಳಿಸಿದ್ದಾರೆ.ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಅವರು ಕೋರಿದ್ದಾರೆ. ಮಂಗಳವಾರ ರಾತ್ರಿ ಹೋಮಾದಿಗಳು ಮುಗಿದ ನಂತರ ಬುಧವಾರದಂದು ದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಧಾರ್ಮಿಕ ಕಾರ್ಯದಲ್ಲಿ ಶ್ರೀನಿವಾಸ್, ಸುಹಾಸ್, ಪಾರ್ಥಸಾರತಿ, ನಿಖಿಲ್, ನಾಗರಾಜು, ಅನುದೀಪ್ ಇವರುಗಳು ಆಗಮಿಕರಾಗಿ ಪಾಲ್ಗೊಂಡು ಹೋಮಾದಿಗಳನ್ನು ನೆರವೇರಿಸಿದರು.