ಕನ್ನಡಪ್ರಭ ವಾರ್ತೆ ಭಟ್ಕಳ

ತಾಲೂಕಿನ ಶಕ್ತಿಕ್ಷೇತ್ರಗಳಲ್ಲೊಂದಾದ ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅಷ್ಠಬಂಧ ಹಾಗೂ ಬ್ರಹ್ಮಕಲಶೋತ್ಸವ ಏ.5ರಿಂದ 9ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ಬ್ರಹ್ಮಕಲಶೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ಏ. 5ರಿಂದ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದೆ. ಸಂಜೆ 7ರಿಂದ 8ರವರೆಗೆ ಶಾಲಾ ಮಕ್ಕಳಿಂದ ಮನರಂಜನೆ ಮತ್ತು ನೃತ್ಯ ಕಾರ್ಯಕ್ರಮ, ರಾತ್ರಿ 8ರಿಂದ ಸಣಬಾವಿಯ ರಾಮಾಂಜನೇಯ ಭಜನೆ ಮಂಡಳದವರಿಂದ ಕುಣಿತ ಭಜನೆ, ರಾತ್ರಿ 9 ಗಂಟೆಗೆ ಉಮೇಶ ಮುಂಡಳ್ಳಿ ಅವರಿಂದ ಭಾವ ಗಾನ ಸುಗಮ ಸಂಗೀತ ನಡೆಯಲಿದೆ. ಏ. 6ರಂದು ಬೆಳಗ್ಗೆ 10.15ಕ್ಕೆ ಶ್ರೀ ದುರ್ಗಾಪರಮೇಶ್ವರಿ ದೇವಿಯ ಮಹೋತ್ಸವ ಸಹಸ್ರ ಬ್ರಹ್ಮಕಲಶಾಭಿಷೇಕ, ಶತಚಂಡಿಯಾಗ ಆರಂಭ ನಡೆಯಲಿದೆ.11.30ರಿಂದ 12.30ರ ವರೆಗೆ ಮಂಗಳೂರಿನ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಮಹಾಪೂಜೆಯ ನಂತರ ಅನ್ನಸಂತರ್ಪಣೆ, ಸಂಜೆ ನಿರೀಕ್ಷಾ ಪೂಜೆ, ಅಷ್ಟಾವಧಾನ ಸೇವೆ, ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮ, ಮಠದಹಿತ್ಲು ನಾಗಚೌಡೇಶ್ವರಿ ಮಹಿಳಾ ಭಜನಾ ಮಂಡಳಿಯವರಿಂದ ಕುಣಿತ ಭಜನೆ, ರಾತ್ರಿ ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. 7ರಂದು ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, ಭಜನೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಮಂಡಲ ರಚನೆ, ಸಹಸ್ರ ಬ್ರಹ್ಮ ಕಲಶ ಸ್ಥಾಪನೆ, ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮ, ಕಾನಮದ್ಲು ದುರ್ಗಾಪರಮೇಶ್ವರಿ ಭಜನಾ ತಂಡದವರಿಂದ ಕುಣಿತ ಭಜನೆ, ರಾತ್ರಿ 9 ಗಂಟೆಯಿಂದ ಬಂಟ್ವಾಳದ ಪದಯಾನ ತಂಡದವರಿಂದ ನೃತ್ಯಾರ್ಪಣಂ ಭರತ ನಾಟ್ಯ ಕಾರ್ಯಕ್ರಮ ನಡೆಯಲಿದೆ. 8ರಂದು ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ನಂತರ ಅನ್ನಸಂತರ್ಪಣೆ, ಸಂಜೆ ಗಣೇಶ ಪೂಜೆ, ಮಂಡಲ ರಚನೆ ಶತಚಂಡಿ ಹೋಮಾಂಗ ಕಲಶ ಸ್ಥಾಪನೆ, ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಲಿದೆ. ಏಪ್ರಿಲ್ 9ರಂದು ಶತಚಂಡಿ ಹೋಮ, ಪೂರ್ಣಾಹುತಿ, ಮಹಾಪೂಜೆ, ಭಜನೆ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಸಮಾರೋಪ ಕಾರ್ಯಕ್ರಮ, ಶಾಲಾ ಮಕ್ಕಳಿಂದ ಮನರಂಜನೆ, ನೃತ್ಯ ಕಾರ್ಯಕ್ರಮ, ರಾತ್ರಿ ಬೆಳಕೆ ಮಹಾಸತಿ ಭಜನೆ ಮಂಡಳಿಯಿಂದ ಕುಣಿತ ಭಜನಾ ಕಾರ್ಯಕ್ರಮ, ರಾತ್ರಿ 9ರಿಂದ ಪುತ್ತೂರು ಜಗದೀಶ ಆಚಾರ್ಯ ಅವರ ತಂಡದಿಂದ ಸಂಗೀತ ಗಾನ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಬಿ. ಬೊಮ್ಮಾಯಿ ಹಾಗೂ ಪದಾಧಿಕಾರಿಗಳು, ಸದಸ್ಯರು ಕೋರಿದ್ದಾರೆ.