ರಾಮನಾಥಪುರದ ಕಾವೇರಿ ನದಿ ಅಶ್ವಥ್‌ ಕಟ್ಟೆ ಗೋಗರ್ಭ ಕುಮಾರಧಾರ, ಹತ್ತಿರ ಮುಂತಾದ ಕಡೆಗಳಲ್ಲಿ ಊಟದ ಎಲೆ ಮತ್ತು ಇನ್ನಿತರ ತ್ಯಾಜ್ಯ ವಸ್ತುಗಳನ್ನು ನದಿಯ ದಂಡೆಯಲ್ಲಿ ಹಾಕುತ್ತಿದ್ದಾರೆ. ಗ್ರಾಮೀಣ ಪ್ರದೇಶದಿಂದ ದೇವರು ತಂದವರು ಭಕ್ತರು ಬಾಳೆಕಂದು ಮಾವಿನ ಸೊಪ್ಪು, ಬಟ್ಟೆ ಮುಂತಾದ ತ್ಯಾಜ್ಯಗಳನ್ನು ನದಿಯಲ್ಲಿ ಬಿಸಾಕಿರುವುದನ್ನು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷ ಸಿದ್ದರಾಜು ದೂರಿದರು. ಈ ಸಂದರ್ಭದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷರಾದ ಎಂ.ಎನ್. ಕುಮಾರಸ್ವಾಮಿ, ಸಂಘಟನಾ ಕಾರ್ಯದರ್ಶಿ ಪಿ.ಎನ್.ಟಿ. ಶಿವಪ್ಪ, ಸದಸ್ಯರಾದ ರಂಗಸ್ವಾಮಿ, ಯೋಗೇಶ್ ಮುಂತಾದವರು ಸ್ವಚ್ಛ ಮಾಡಿದರು.

ರಾಮನಾಥಪುರ: ಇಲ್ಲಿಯ ಕಾವೇರಿ ನದಿ ದಂಡೆಯಲ್ಲಿರುವ ಅಶ್ವಥಕಟ್ಟೆಯಲ್ಲಿರುವ ನಾಗರ ಕಲ್ಲಿಗೆ ಇಲ್ಲಿಗೆ ಬರುವ ಭಕ್ತರು ಹಾಲು, ಮೊಸರು, ತುಪ್ಪ, ಬೆಣ್ಣೆ, ಉಪ್ಪು ತಂದು ಹಾಕುತ್ತಿದ್ದು ಇದರಿಂದ ಇಲ್ಲಿಯ ಅಶ್ವಥಕಟ್ಟೆ ನಾರುತ್ತಿದೆ. ಇದರಿಂದ ಇಲ್ಲಿಗೆ ಬರುವ ಭಕ್ತರು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡಬೇಕಾಗಿದೆ. ರಾಮನಾಥಪುರದ ಕಾವೇರಿ ನದಿ ಆಶ್ವಥ್‌ ಕಟ್ಟೆ ಗೋಗರ್ಭ ಕುಮಾರಧಾರ, ಹತ್ತಿರ ಮುಂತಾದ ಕಡೆಗಳಲ್ಲಿ ಊಟದ ಎಲೆ ಮತ್ತು ಇನ್ನಿತರ ತ್ಯಾಜ್ಯ ವಸ್ತುಗಳನ್ನು ನದಿಯ ದಂಡೆಯಲ್ಲಿ ಹಾಕುತ್ತಿದ್ದಾರೆ. ಗ್ರಾಮೀಣ ಪ್ರದೇಶದಿಂದ ದೇವರು ತಂದವರು ಭಕ್ತರು ಬಾಳೆಕಂದು ಮಾವಿನ ಸೊಪ್ಪು, ಬಟ್ಟೆ ಮುಂತಾದ ತ್ಯಾಜ್ಯಗಳನ್ನು ನದಿಯಲ್ಲಿ ಬಿಸಾಕಿರುವುದನ್ನು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷ ಸಿದ್ದರಾಜು ದೂರಿದರು. ಈ ಸಂದರ್ಭದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷರಾದ ಎಂ.ಎನ್. ಕುಮಾರಸ್ವಾಮಿ, ಸಂಘಟನಾ ಕಾರ್ಯದರ್ಶಿ ಪಿ.ಎನ್.ಟಿ. ಶಿವಪ್ಪ, ಸದಸ್ಯರಾದ ರಂಗಸ್ವಾಮಿ, ಯೋಗೇಶ್ ಮುಂತಾದವರು ಸ್ವಚ್ಛ ಮಾಡಿದರು.