ಸಾರಾಂಶ
ಇತ್ತೀಚಿಗೆ ಅರೇಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಅಸ್ಸಾಂ ಹಾಗೂ ಇತರೆ ಹೊರ ರಾಜ್ಯಗಳ ವಲಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಸಮಾಜಘಾತುಕ ಚಟುವಟಿಕೆಗಳು ಉಲ್ಬಣಗೊಳ್ಳುತ್ತಿವೆ. ತಾಲೂಕಿನ ಅರೆಹಳ್ಳಿ ಹಾಗೂ ಸುತ್ತಮುತ್ತಲಿನಲ್ಲಿ ಕಾಫಿ ತೋಟದ ಕೂಲಿ ಕೆಲಸ ಹಾಗೂ ಕಟ್ಟಡಗಳ ನಿರ್ಮಾಣ ಕೆಲಸ ಕಾರ್ಯಕ್ಕಾಗಿ ಅಸ್ಸಾಂ ಹಾಗೂ ಇತರೆ ಹೊರ ರಾಜ್ಯಗಳಿಂದ ವಲಸೆ ಬರುವ ಕಾರ್ಮಿಕರ ಸಂಖ್ಯೆ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿ ಕಳವು ಪ್ರಕರಣಗಳು ಸಹ ಹೆಚ್ಚುತ್ತಿದೆ. ತಾಲೂಕಿನ ಅರೇಹಳ್ಳಿ ಹೋಬಳಿ ಕೇಂದ್ರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿ ಕೇಂದ್ರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಇತ್ತೀಚಿಗೆ ಅರೇಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಅಸ್ಸಾಂ ಹಾಗೂ ಇತರೆ ಹೊರ ರಾಜ್ಯಗಳ ವಲಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಸಮಾಜಘಾತುಕ ಚಟುವಟಿಕೆಗಳು ಉಲ್ಬಣಗೊಳ್ಳುತ್ತಿವೆ. ತಾಲೂಕಿನ ಅರೆಹಳ್ಳಿ ಹಾಗೂ ಸುತ್ತಮುತ್ತಲಿನಲ್ಲಿ ಕಾಫಿ ತೋಟದ ಕೂಲಿ ಕೆಲಸ ಹಾಗೂ ಕಟ್ಟಡಗಳ ನಿರ್ಮಾಣ ಕೆಲಸ ಕಾರ್ಯಕ್ಕಾಗಿ ಅಸ್ಸಾಂ ಹಾಗೂ ಇತರೆ ಹೊರ ರಾಜ್ಯಗಳಿಂದ ವಲಸೆ ಬರುವ ಕಾರ್ಮಿಕರ ಸಂಖ್ಯೆ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿ ಕಳವು ಪ್ರಕರಣಗಳು ಸಹ ಹೆಚ್ಚುತ್ತಿದೆ. ಮಂಗಳವಾರ ಹಾಡುಹಗಲೇ ಪಟ್ಟಣದ ಸಂತೋಷನಗರದಲ್ಲಿ ಸುಮಾರು ಮೂರು ವರ್ಷಗಳಿಂದ ಬಾಡಿಗೆ ಮನೆ ಪಡೆದು ಟಿಂಬರ್ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ತಾಹೀರ್ ಆಲಿ ಎಂಬಾತ, ಅರೇಹಳ್ಳಿ ಮುಖ್ಯ ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರ ಅಕ್ರಮವಾಗಿ ಸಾವಿರಾರು ಮೌಲ್ಯದ ಸುಮಾರು ೧.೫೦ ಕೆಜಿ ಗಾಂಜಾ ಸೊಪ್ಪನ್ನು ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದ. ಸಿಪಿಐ ಜಗದೀಶ್ ,ಪಿಎಸ್ಐ ಯೋಗಾಬರಂ, ಇವರಿಗೆ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಿ ಗಾಂಜಾ ಸಮೇತ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಈ ಸಂದರ್ಭದಲ್ಲಿ ಸಿಬ್ಬಂದಿಯಾದ ಸಂಶುದ್ದೀನ್ ,ಸುಪ್ರೀತ್,ಪೃಥ್ವಿ, ಮಂಜುನಾಥ್, ಸೇರಿದಂತೆ ಇತರರು ಇದ್ದರು.
;Resize=(128,128))
;Resize=(128,128))