ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಮಹಿಳೆ ಹಾಗೂ ಆಕೆಯ ಸಹೋದರನ ಮೇಲೆ ಠಾಣೆಯ ಆವರಣದಲ್ಲಿಯೇ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಪಾವಗಡ ಪೊಲೀಸ್ ಠಾಣೆ ಮುಂಭಾಗದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಪಾವಗಡ
ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಮಹಿಳೆ ಹಾಗೂ ಆಕೆಯ ಸಹೋದರನ ಮೇಲೆ ಠಾಣೆಯ ಆವರಣದಲ್ಲಿಯೇ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಪಾವಗಡ ಪೊಲೀಸ್ ಠಾಣೆ ಮುಂಭಾಗದಲ್ಲಿ ನಡೆದಿದೆ. 22ರಂದು ತಾಲೂಕಿನ ಐವಾರ್ಲಹಳ್ಳಿ ಗ್ರಾಮದ ರೂಪಶ್ರೀ ಅವರ ಮನೆಯ ಕಿಟಕಿ ಗಾಜು, ಟಿ.ವಿ. ಶೋಕೇಸ್ ಗಾಜು ಹಾಗೂ ಮನೆಯ ಮೇಲಿನ ಸೋಲಾರ್ ಪ್ಯಾನೆಲ್ಗಳನ್ನು ಅದೇ ಗ್ರಾಮದ ಮಂಜುನಾಥ್ ಎಂಬುವವರು ಧ್ವಂಸಗೊಳಿಸಿದ್ದರು ಎಂದು ಆರೋಪಿಸಲಾಗಿದ್ದು, ಈ ಸಂಬಂಧ ರೂಪಶ್ರೀ ಅವರು ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಲು ಬಂದ ವೇಳೆ ಮಂಜುನಾಥ್ ಹಾಗೂ ಅವರ ಪತ್ನಿ ಕಾರದ ಪುಡಿ ಎರಚಿ ಚಾಕುವಿನಿಂದ ರೂಪಶ್ರೀ ಮತ್ತು ಅವರ ತಮ್ಮ ನವೀನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ದೂರು ಸ್ವೀಕರಿಸಿದ ಪೊಲೀಸರು ಆರೋಪಿ ಮಂಜುನಾಥ್ನನ್ನು ಸೋಮವಾರ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.