ಗ್ರಾಮದ ಹೇಮಾವತಿ ಎಂಬುವರ ವಾಸದ ಮನೆಗೆ ಸುಮಾರು 15 ದಿನಗಳ ಹಿಂದೆ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಇಡೀ ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು ಈ ದುರಂತದಲ್ಲಿ ಮನೆಯಲ್ಲಿದ್ದ ಧಾನ್ಯ, ಉಡುಪು ಹಾಗೂ ಇತರ ಎಲ್ಲಾ ವಸ್ತುಗಳು ನಾಶಗೊಂಡು ಕುಟುಂಬವು ಜೀವನ ನಿರ್ವಹಣೆಗೆ ತೀವ್ರ ತೊಂದರೆ ಅನುಭವಿಸುತ್ತಿತ್ತು. ವಿಷಯ ತಿಳಿದ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಇಂದು ಗ್ರಾಮಕ್ಕೆ ನೇರವಾಗಿ ಭೇಟಿ ನೀಡಿ, ಕುಟುಂಬದ ಆಸರೆಗಾಗಿ ಪ್ರಾಥಮಿಕ ಪರಿಹಾರವಾಗಿ ಬೆಡ್ಶೀಟ್ಗಳು, ಒಂದು ಟಾರ್ಪಲ್ ಹಾಗೂ ಅಡುಗೆ ಪಾತ್ರೆಗಳ ಸೆಟ್ಗಳನ್ನು ಹಸ್ತಾಂತರಿಸಿದರು.
ಕನ್ನಡಪ್ರಭ ವಾರ್ತೆ ಆಲೂರು
ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮರಸು ಕಾಲೋನಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಮನೆ ಮತ್ತು ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಂತ್ರಸ್ತ ಕುಟುಂಬಕ್ಕೆ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಹಾಸನ ಜಿಲ್ಲಾ ಹಾಗೂ ಆಲೂರು ತಾಲೂಕು ಘಟಕದ ವತಿಯಿಂದ ಇಂದು ನಿತ್ಯೋಪಯೋಗಿ ಸಾಮಗ್ರಿಗಳನ್ನು ವಿತರಿಸಿ ಸಾಂತ್ವನ ಹೇಳಲಾಯಿತು.ಗ್ರಾಮದ ಹೇಮಾವತಿ ಎಂಬುವರ ವಾಸದ ಮನೆಗೆ ಸುಮಾರು 15 ದಿನಗಳ ಹಿಂದೆ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಇಡೀ ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು ಈ ದುರಂತದಲ್ಲಿ ಮನೆಯಲ್ಲಿದ್ದ ಧಾನ್ಯ, ಉಡುಪು ಹಾಗೂ ಇತರ ಎಲ್ಲಾ ವಸ್ತುಗಳು ನಾಶಗೊಂಡು ಕುಟುಂಬವು ಜೀವನ ನಿರ್ವಹಣೆಗೆ ತೀವ್ರ ತೊಂದರೆ ಅನುಭವಿಸುತ್ತಿತ್ತು. ವಿಷಯ ತಿಳಿದ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಇಂದು ಗ್ರಾಮಕ್ಕೆ ನೇರವಾಗಿ ಭೇಟಿ ನೀಡಿ, ಕುಟುಂಬದ ಆಸರೆಗಾಗಿ ಪ್ರಾಥಮಿಕ ಪರಿಹಾರವಾಗಿ ಬೆಡ್ಶೀಟ್ಗಳು, ಒಂದು ಟಾರ್ಪಲ್ ಹಾಗೂ ಅಡುಗೆ ಪಾತ್ರೆಗಳ ಸೆಟ್ಗಳನ್ನು ಹಸ್ತಾಂತರಿಸಿದರು.ಮಾನವೀಯ ನೆರವಿಗೆ ಸಂಸ್ಥೆ ಬದ್ಧ: ಸಭಾಪತಿ ಕೆ.ಎನ್. ಕಾಂತರಾಜುಈ ಸಂದರ್ಭದಲ್ಲಿ ಘಟನೆಯ ಬಗ್ಗೆ ಮಾತನಾಡಿದ ಆಲೂರು ತಾಲೂಕು ರೆಡ್ಕ್ರಾಸ್ ಸಭಾಪತಿ ಕೆ.ಎನ್. ಕಾಂತರಾಜು, "ಆಕಸ್ಮಿಕವಾಗಿ ಸಂಭವಿಸಿದ ಈ ಶಾರ್ಟ್ ಸರ್ಕ್ಯೂಟ್ ಅನಾಹುತದಿಂದ ಹೇಮಾವತಿ ಅವರ ಕುಟುಂಬವು ವಾಸದ ಮನೆ ಹಾಗೂ ನಿತ್ಯಬಳಕೆಯ ಎಲ್ಲಾ ಸಾಮಗ್ರಿಗಳನ್ನು ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ಕುಟುಂಬದ ಜೀವನ ನಿರ್ವಹಣೆ ಅತ್ಯಂತ ಸವಾಲಿನದ್ದಾಗಿದೆ. ಇದನ್ನು ಅರಿತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಮಾನವೀಯತೆಯ ಆಧಾರದ ಮೇಲೆ ತಕ್ಷಣವೇ ಸ್ಪಂದಿಸಿ ಪ್ರಾಥಮಿಕ ಅಗತ್ಯ ವಸ್ತುಗಳನ್ನು ನೀಡಿದೆ. ಆಪತ್ತಿನಲ್ಲಿರುವವರಿಗೆ ನೆರವಾಗುವುದೇ ರೆಡ್ ಕ್ರಾಸ್ನ ಮುಖ್ಯ ಉದ್ದೇಶವಾಗಿದ್ದು, ಸಂತ್ರಸ್ತ ಕುಟುಂಬಕ್ಕೆ ಮುಂದೆಯೂ ಅಗತ್ಯವಿರುವ ನೆರವು ಹಾಗೂ ಮಾರ್ಗದರ್ಶನ ನೀಡಲು ನಮ್ಮ ಸಂಸ್ಥೆ ಬದ್ಧವಾಗಿದೆ " ಎಂದು ಹೇಳಿದರು.ಧೈರ್ಯಗೆಡದೆ ಪರಿಸ್ಥಿತಿ ಎದುರಿಸಿ: ಕಾರ್ಯದರ್ಶಿ ವೀರಭದ್ರಸ್ವಾಮಿ
ಬಿಕ್ಕಟ್ಟು ಎದುರಿಸುತ್ತಿರುವ ಕುಟುಂಬಕ್ಕೆ ಧೈರ್ಯ ತುಂಬಿ ಮಾತನಾಡಿದ ರೆಡ್ಕ್ರಾಸ್ ಆಲೂರು ಘಟಕದ ಕಾರ್ಯದರ್ಶಿ ವೀರಭದ್ರಸ್ವಾಮಿ, "ಇಂತಹ ಆಕಸ್ಮಿಕ ದುರಂತಗಳು ಯಾರ ಜೀವನದಲ್ಲೂ ಸಂಭವಿಸಬಾರದು. ರಕ್ಷಣೆ ನೀಡಬೇಕಾದ ಮನೆಯೇ ಕಣ್ಣೆದುರೇ ವಿದ್ಯುತ್ ಅವಘಡದಲ್ಲಿ ಸುಟ್ಟು ಹೋಗಿರುವುದು ತೀವ್ರ ನೋವಿನ ಸಂಗತಿ. ಆದರೆ ಈ ಕಷ್ಟದ ಸಮಯದಲ್ಲಿ ಕುಟುಂಬದವರು ಧೈರ್ಯಗೆಡಬಾರದು. ಸ್ಥಳೀಯ ಜನಪ್ರತಿನಿಧಿಗಳು, ತಾಲೂಕು ಆಡಳಿತ ಹಾಗೂ ಸರ್ಕಾರದಿಂದ ಸಿಗಬೇಕಾದ ಪರಿಹಾರ ಮತ್ತು ಸೌಲಭ್ಯಗಳನ್ನು ತಲುಪಿಸಲು ನಮ್ಮ ಘಟಕದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು " ಎಂದು ಆಶ್ವಾಸನೆ ನೀಡಿದರು.ಈ ಸಂದರ್ಭದಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಆಲೂರು ತಾಲೂಕು ಘಟಕದ ಉಪಾಧ್ಯಕ್ಷ ಶಶಿಧರ್ ಬೆಕ್ಕಡಿ, ಪದಾಧಿಕಾರಿಗಳಾದ ಮುಬಾರಕ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.