ಸಾರಾಂಶ
ಹಳೇಬೀಡಿನ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ದೊಡ್ಡ ಬೀದಿಯ ಮಹೇಶ್ವರಿ ಶಿವಕುಮಾರ್ ಸುಮಾರು ಆರು ತಿಂಗಳಿಂದ ಅನಾರೋಗ್ಯದಿಂದ ಮಲಗಿದ್ದರು. ಅವರಿಗೆ ವಾಟರ್ ಬೆಡ್ ನೀಡಿ ಮಾತನಾಡುತ್ತಾ ಬೇಲೂರು ತಾಲೂಕಿನಲ್ಲಿ ವಾಟರ್‌ಬೆಡ್- ೩೯, ವೀಲ್‌ಚೇರ್- ೫೯, ಯು-ಶೇಪ್‌ವಾಕರ್‌ಗಳು-೧೩, ಒನ್ನು ಸೈಡ್ ವಾಕರ್-೪೪, ಇನ್ನು ಹಲವಾರು-೧೮೫ ಸಾಮಗ್ರಿಗಳನ್ನ ನಮ್ಮ ತಾಲೂಕಿನಲ್ಲಿ ನೀಡಿದ್ದು, ಕರ್ನಾಟಕ ರಾಜ್ಯದಲ್ಲಿ ಸುಮಾರು ಈ ವರ್ಷ ಕೋಟಿ ೬೬ ಲಕ್ಷದ ಮೌಲ್ಯದಲ್ಲಿ ೮೧೮೮ ಜನರಿಗೆ ಸಲಕರಣೆ ನೀಡಿದ ಏಕೈಕ ಸಂಘ ಎಂದರೆ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಳೇಬೀಡು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಜನ ಮಂಗಳ ಕಾರ್ಯಕ್ರಮವು ಒಂದು ಭಾಗವಾಗಿದೆ. ಇದರಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ವಾಕರ್, ವಾಟರ್‌ಬೆಡ್, ವ್ಹೀಲ್‌ಚೇರ್ ಮುಂತಾದ ಉಪಕರಣಗಳನ್ನು ನೀಡಲಾಗುವುದು ಎಂದು ಬೇಲೂರಿನ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ಮಂಜುಳಾ ತಿಳಿಸಿದರು. ಹಳೇಬೀಡಿನ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ದೊಡ್ಡ ಬೀದಿಯ ಮಹೇಶ್ವರಿ ಶಿವಕುಮಾರ್ ಸುಮಾರು ಆರು ತಿಂಗಳಿಂದ ಅನಾರೋಗ್ಯದಿಂದ ಮಲಗಿದ್ದರು. ಅವರಿಗೆ ವಾಟರ್ ಬೆಡ್ ನೀಡಿ ಮಾತನಾಡುತ್ತಾ ಬೇಲೂರು ತಾಲೂಕಿನಲ್ಲಿ ವಾಟರ್‌ಬೆಡ್- ೩೯, ವೀಲ್‌ಚೇರ್- ೫೯, ಯು-ಶೇಪ್‌ವಾಕರ್‌ಗಳು-೧೩, ಒನ್ನು ಸೈಡ್ ವಾಕರ್-೪೪, ಇನ್ನು ಹಲವಾರು-೧೮೫ ಸಾಮಗ್ರಿಗಳನ್ನ ನಮ್ಮ ತಾಲೂಕಿನಲ್ಲಿ ನೀಡಿದ್ದು, ಕರ್ನಾಟಕ ರಾಜ್ಯದಲ್ಲಿ ಸುಮಾರು ಈ ವರ್ಷ ಕೋಟಿ ೬೬ ಲಕ್ಷದ ಮೌಲ್ಯದಲ್ಲಿ ೮೧೮೮ ಜನರಿಗೆ ಸಲಕರಣೆ ನೀಡಿದ ಏಕೈಕ ಸಂಘ ಎಂದರೆ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಹಳೇಬೀಡು ರಘುನಾಥ್ ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಮಹಿಳೆಯರು, ರೈತರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಮುದಾಯ ಸರ್ವಾಂಗೀಣ ಅಭಿವೃದ್ಧಿಯ ಮತ್ತು ಸಬಲೀಕರಣಕ್ಕೆ ಈ ಯೋಜನೆ ಕಲ್ಪವೃಕ್ಷವಾಗಿದೆ ಹಾಗೂ ಪೂಜ್ಯಶ್ರೀ ಕಾವಂದರು ಈ ಕಲ್ಪವೃಕ್ಷವನ್ನು ಬೆಳೆಸಿ ರಾಜ್ಯದ ೫೧ ಲಕ್ಷಕ್ಕೂ ಬಡ ಕುಟುಂಬಕ್ಕೆ ನೆರವಾಗಿದ್ದಾರೆ. ಈ ಸಂಸ್ಥೆಯ ಸಹಯೋಗದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಸಾದ ರೂಪದಲ್ಲಿ ಹಣ, ಅಂಗವಿಕಲರಿಗೆ ಅನುಕೂಲವಾದ ಉಪಕರಣ, ವಾತ್ಸಲ್ಯ ಕಾರ್ಯಕ್ರಮ, ಜ್ಞಾನ ವಿಕಾಸ, ಮಹಿಳಾ ಉದ್ಯಮಿಗಳ ಕಾರ್ಯಾಗಾರ, ಶೌರ್ಯ ವಿಪತ್ತು, ಇನ್ನು ಹಲವಾರು ಕಾರ್ಯಕ್ರಮವನ್ನು ರೂಪಿಸಿಕೊಂಡು ಸರ್ಕಾರದ ಅವಿಭಾಜ್ಯ ಅಂಗವಾಗಿದೆ ಎಂದು ತಿಳಿಸಿದರು. ಹೋಬಳಿ ಮೇಲ್ವಿಚಾರಕಿ ರಂಜಿತ ಹರೀಶ್, ಸೇವಾಪ್ರತಿನಿಧಿಗಳು ಹಾಜರಿದ್ದರು.