ಆದಾಯದ ಮೂಲಗಳಿಂದ ಸಂಘ ಅಭಿವೃದ್ಧಿ

| Published : Sep 20 2025, 01:00 AM IST

ಸಾರಾಂಶ

ವ್ಯವಸಾಯೋತ್ಪನ್ನ ಸಹಕಾರ ಸಂಘವು ೧೯೬೦ನೇ ಇಸವಿಯಲ್ಲಿ ಸ್ಥಾಪನೆಗೊಂಡಿದೆ. ತುಮಕೂರು ಜಿಲ್ಲೆಯ ಇತರೆ ತಾಲೂಕಿನ ಸಹಕಾರ ಸಂಘಕ್ಕೆ ಹೋಲಿಕೆ ಮಾಡಿದ್ದಲ್ಲಿ ಇಲ್ಲಿನ ಸಂಘ ಲಾಭದಾಯಕವಾಗಿದೆ. ಎಂದು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಜಿ.ಎಂ. ಶಿವಾನಂದ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ವ್ಯವಸಾಯೋತ್ಪನ್ನ ಸಹಕಾರ ಸಂಘವು ೧೯೬೦ನೇ ಇಸವಿಯಲ್ಲಿ ಸ್ಥಾಪನೆಗೊಂಡಿದೆ. ತುಮಕೂರು ಜಿಲ್ಲೆಯ ಇತರೆ ತಾಲೂಕಿನ ಸಹಕಾರ ಸಂಘಕ್ಕೆ ಹೋಲಿಕೆ ಮಾಡಿದ್ದಲ್ಲಿ ಇಲ್ಲಿನ ಸಂಘ ಲಾಭದಾಯಕವಾಗಿದೆ. ಎಂದು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಜಿ.ಎಂ. ಶಿವಾನಂದ ತಿಳಿಸಿದರು.ಪಟ್ಟಣದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಕಟ್ಟಡದ ಆವರಣದಲ್ಲಿ ಆಯೋಜಿಸಲಾಗಿದ್ದ ೨೦೨೪-೨೫ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಾಲೂಕಿನಲ್ಲಿ ಕೆಲವು ಸಂಘಗಳು ಆದಾಯದ ಮೂಲ ಇಲ್ಲದೇ ನಷ್ಟದ ಪರಿಸ್ಥಿತಿಗೆ ಸಿಲುಕಿವೆ. ನಮ್ಮ ತಾಲೂಕಿನಲ್ಲಿ ಆದಾಯದ ಮೂಲಗಳನ್ನು ಸೃಷ್ಠಿಸಿ ಸಂಘ ಅಭಿವೃದ್ಧಿ ಹೊಂದಿದೆ. ಇದಕ್ಕೆ ಕಾರಣ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಹಾಗೂ ನಮ್ಮ ಎಲ್ಲಾ ನಿರ್ದೇಶಕರು, ಸದಸ್ಯರ ಸಹಕಾರ, ಅತ್ಯಅಮೂಲ್ಯ ಸಲಹೆಯಿಂದ ಆರ್ಥಿಕವಾಗಿ ಸದೃಢವಾಗಿದೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ಷೇರುದಾರರ ಮಕ್ಕಳಾದ ರೇಣುಕಾ ಮತ್ತು ಕೀರ್ತನಾರಾದ್ಯಗೆ ಪ್ರತಿಭಾ ಪುರಸ್ಕಾರದಲ್ಲಿ ಗೌರವಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಾನ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ರಾಘವೇಂದ್ರ, ಮಾಜಿ ಅಧ್ಯಕ್ಷರಾದ ಕೆ.ವಿ ಮಂಜುನಾಥ್, ಈಶಪ್ರಸಾದ್, ನಿರ್ದೇಶಕ ಕುಂಬಿ ನರಸಿಂಹಯ್ಯ, ಶಶಿಕಲಾ, ಉಮಾದೇವಿ, ಮುಖಂಡರಾದ ಆನಂದ್, ಗಟ್ಲಹಳ್ಳಿಕುಮಾರ್, ಕಾಂತರಾಜು, ಪ.ಪಂ ಸದಸ್ಯ ಪುಟ್ಟನರಸಪ್ಪ, ಸೇರಿದಂತೆ ಸಂಘದ ಎ ತರಗತಿಯ ಸದಸ್ಯರು, ಕಾರ್ಯದರ್ಶಿ ಕೃಷ್ಣಮೂರ್ತಿ, ಗುರು, ನಾಗರಾಜು, ಚೇತನ್ ಸೇರಿದಂತೆ ಇತರರು ಇದ್ದರು.(ಚಿತ್ರ ಇದೆ)