ಸಂಘ ಸಂಸ್ಥೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು: ಜೆಸಿಐ ವಲಯಾಧ್ಯಕ್ಷೆ ಆಶಾಜೈನ್‌

| Published : Jan 17 2024, 01:46 AM IST

ಸಾರಾಂಶ

ಪ್ರತಿಯೊಬ್ಬರ ಮೇಲೆ ಸಮಾಜದ ಋಣವಿದೆ. ಸಮಾಜದ ಋಣ ತೀರಿಸುವುದು ಪ್ರತಿಯೊಬ್ಬರ ಕರ್ತವ್ಯ. ಸಂಘ ಸಂಸ್ಥೆಗಳು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜೆಸಿಐ ವಲಯಾಧ್ಯಕ್ಷೆ ಆಶಾಜೈನ್‌ ಹೇಳಿದರು.

- ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ಜೆಸಿಐ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕನ್ನಡಪ್ರಭ ವಾರ್ತೆ, ಶೃಂಗೇರಿ

ಪ್ರತಿಯೊಬ್ಬರ ಮೇಲೆ ಸಮಾಜದ ಋಣವಿದೆ. ಸಮಾಜದ ಋಣ ತೀರಿಸುವುದು ಪ್ರತಿಯೊಬ್ಬರ ಕರ್ತವ್ಯ. ಸಂಘ ಸಂಸ್ಥೆಗಳು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜೆಸಿಐ ವಲಯಾಧ್ಯಕ್ಷೆ ಆಶಾಜೈನ್‌ ಹೇಳಿದರು.

ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ಜೆಸಿಐ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ ದರು. ಈ ನಿಟ್ಟಿನಲ್ಲಿ ಜೆಸಿಐ ವಿವಿಧ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಸಮಾಜದ ಪ್ರಗತಿಗೆ ಶ್ರಮಿಸುತ್ತಿದೆ. ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ತರಬೇತಿ ಕಾರ್ಯಾಗಾರ, ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ತನ್ನದೇ ಕೊಡುಗೆ ನೀಡುತ್ತಿದೆ ಎಂದರು.

ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಮಾತನಾಡಿ ಸಮಾಜದ ಅಂಕುಡೊಂಕು ತಿದ್ದುವ ಬದ್ಧತೆ ಪತ್ರಕರ್ತರಿಗೆ ಇರಬೇಕು. ಆಗ ಮಾತ್ರ ಉತ್ತಮ ಪತ್ರಕರ್ತರಾಗಲು ಸಾದ್ಯ. ಸತ್ಯ ಮತ್ತು ಪ್ರಾಮಾಣಿಕತೆ ಒಬ್ಬ ನಿರ್ಭೀತ ಪತ್ರಕರ್ತನ ಆಯುಧಗಳು. ಪ್ರಸ್ತುತ ಮಕ್ಕಳಲ್ಲಿ ಗಟ್ಟಿತನದ ವ್ಯಕ್ತಿತ್ವ ಇರುವುದಿಲ್ಲ. ಸುಳ್ಳು, ಪೊಳ್ಳು ಭರವಸೆಗಳ ನಡುವೆ ಬದುಕುತ್ತಿರುವ ಯುವ ಜನಾಂಗಕ್ಕೆ ಆತ್ಮಸ್ಥೈರ್ಯದ ಅಗತ್ಯವಿದೆ. ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಿಸುವ ಮಾನಸಿಕ ದೃಡತೆ ಜೊತೆ ಹೆಜ್ಜೆ ಇರಿಸಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾದ್ಯ.

ನಮ್ಮಲ್ಲಿ ಪ್ರಶ್ನಿಸುವ ಮನೋಭಾವ ಮಾಯವಾಗಿದೆ. ಸರ್ಕಾರ ಮತ್ತು ಸಮಾಜ ಕಟ್ಟುವ ನಾವು ಯಾವುದೇ ಸಮಸ್ಯೆಗಳ ಕುರಿತು ಪ್ರಶ್ನೆ ಮಾಡುವುದೇ ಇಲ್ಲ. ಭ್ರಷ್ಟಾಚಾರ ತಾಂಡವಾಡುತ್ತಿದ್ದರೂ ತಣ್ಣಗೆ ಕುಳಿತಿದ್ದೇವೆ. ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಬೇಕು ಎಂದರು.

ಜೆಸಿಐ ನೂತನ ಅಧ್ಯಕ್ಷ ಎಚ್‌.ಜೆ.ರಾಘವೇಂದ್ರ ಮಾತನಾಡಿ ಸಂಸ್ಥೆಯ ಅಧ್ಯಕ್ಷರಾಗುವುದು ಸುಲಭದ ಕೆಲಸವಲ್ಲ. ಸಿಕ್ಕ ಅವಕಾಶವನ್ನು ಸಮರ್ಕಕವಾಗಿ ಬಳಸಿಕೊಂಡು ಉತ್ತ ವಾಗಿ ಕೆಲಸ ಮಾಡಿದಾಗ ಮಾತ್ರ ಸಂಸ್ಥೆ ಶ್ರೆಯೋಭಿವೃದ್ಧಿ ಸಾದ್ಯ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ರಾಜಶೇಖರ್‌ ಹೆಬ್ಬಾರ್‌, ಸೃಜನ್‌, ರಮೇಶ್‌ ಶೂನ್ಯ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು.16 ಶ್ರೀ ಚಿತ್ರ 2-

ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ನಡೆದ ಜೆಸಿಐ ನೂತನ ಪದಾಧಿಕಾರಿಗಳು ಪದಗ್ರಹಣ ಸಮಾರಂಭವನ್ನು ಜೆಸಿಐ ವಲಯ 14 ರ ಅಧ್ಯಕ್ಷೆ ಆಶಾಜೈನ್‌ ಉದ್ಘಾಟಿಸಿದರು. ರಾಘವೇಂದ್ರ,ರಾಜಶೇಖರ್‌,ವಿಜಯಲಕ್ಷಮಿ ಶಿಬರೂರು ಮತ್ತಿತರರು ಇದ್ದರು.