ಸಾರಾಂಶ
ವ್ಯವಹಾರದ ಜೊತೆ ಸಾಮಾಜಿಕ ಕಾರ್ಯಗಳಲ್ಲಿಯೂ ಸಂಘ ಸಂಸ್ಥೆಗಳು ಹಾಗೂ ಕಾರ್ಖಾನೆಗಳು ಮುಂದಾಗಬೇಕು ಆಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಗ್ರಾಸಿಂ ಮುಖ್ಯಸ್ಥ ಸೌಮ್ಯ ಮೊಹಂತಿ ಹೇಳಿದರು.
ರಾಣಿಬೆನ್ನೂರು: ವ್ಯವಹಾರದ ಜೊತೆ ಸಾಮಾಜಿಕ ಕಾರ್ಯಗಳಲ್ಲಿಯೂ ಸಂಘ ಸಂಸ್ಥೆಗಳು ಹಾಗೂ ಕಾರ್ಖಾನೆಗಳು ಮುಂದಾಗಬೇಕು ಆಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಗ್ರಾಸಿಂ ಮುಖ್ಯಸ್ಥ ಸೌಮ್ಯ ಮೊಹಂತಿ ಹೇಳಿದರು.ತಾಲೂಕಿನ ಕುಮಾರಪಟ್ಟಣದ ಗ್ರಾಸಿಂ ಸಭಾಂಗಣದಲ್ಲಿ ಗ್ರಾಸಿಂ ಜನಸೇವಾ ಟ್ರಸ್ಟ್ ವತಿಯಿಂದ ಕರ್ನಾಟಕ ಮಾರವಾರಿ ಯುಥ್ ಫೆಡರೇಶನ್ ಸಹಯೋಗದಲ್ಲಿ ಆದಿತ್ಯ ಬಿರ್ಲಾ ಜನ್ಮದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಉಚಿತ ಕೃತಕ ಕೈ ಮತ್ತು ಕಾಲು ಜೋಡಣೆ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಪಘಾತಗಳಲ್ಲಿ ಕೈ ಮತ್ತು ಕಾಲುಗಳನ್ನು ಕಳೆದುಕೊಂಡವರಿಗಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಮ್ಮ ಸುತ್ತ ಮುತ್ತ ಯಾವುದೇ ತರಹದ ಅಸುರಕ್ಷತೆಗಳು ಕಂಡು ಬಂದಲ್ಲಿ ಅದನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ ಎಂದರು.ಗ್ರಾಸಿಂ ಜನಸೇವಾ ಟ್ರಸ್ಟ್ ದೇಶಾದ್ಯಂತ ಜನಪರ ಕಾಳಜಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ನಮ್ಮ ಕಂಪನಿಯು ಸುತ್ತಮತ್ತಲಿನ ಹಳ್ಳಿಗಳ ಮಕ್ಕಳಿಗೆ ವಿದ್ಯಾಭ್ಯಾಸ, ಶಾಲೆಗಳ ದುರಸ್ತಿ, ಉಚಿತ ಆರೋಗ್ಯ ಚಿಕಿತ್ಸೆ, ಹಳ್ಳಿಗಳಲ್ಲಿ ಶೌಚಾಲಯ ನಿರ್ಮಾಣ, ಸುಲಭ ಸಂಚಾರಕ್ಕೆ ರಸ್ತೆ, ರೈತರಿಗೆ ಹೊಸ ತಳಿ ಬೀಜಗಳ ಮತ್ತು ತೋಟಗಾರಿಕೆ ಸಸಿಗಳ ವಿತರಣೆ ಮುಂತಾದ ಅನೇಕ ಪ್ರಗತಿಪರ ಕಾರ್ಯಕ್ರಮಗಳನ್ನು ಗ್ರಾಸಿಂ ಜನಸೇವಾ ಟ್ರಸ್ಟ್ ಹಮ್ಮಿಕೊಂಡಿದೆ ಎಂದರು.ಗ್ರಾಸಿಂ ಜನಸೇವಾ ಟ್ರಸ್ಟ್ ಸಿಎಸ್‌ಆರ್ ವಿಭಾಗದ ಮಂಜಪ್ಪ ಮೇಗಳಗೇರಿ ಮತನಾಡಿದರು. ಹಾವೇರಿಯ ಜಿಲ್ಲಾ ಕುಷ್ಟರೋಗ ಹಾಗೂ ವಿಶೇಷಚೇತನರ ಜಿಲ್ಲಾ ಉಸ್ತುವಾರಿ ಅಧಿಕಾರಿ ಡಾ. ಚನ್ನಬಸಯ್ಯ ವಿರಕ್ತಮಠ, ಕಾರ್ಖಾನೆ ಉಪಾಧ್ಯಕ್ಷರ ಸಂಧೀಪ ಭಟ್, ವಿಜೇಂದ್ರಬಾಬು, ಸುಭಾಸ್ ಕುಮಾರಶರ್ಮ, ಸಂತೋಷ ಶೆಟ್ಟಿ, ಡಾ. ಬಲವಿಂದರ ಸಿಂಗ್, ಸಿಎಸ್‌ಆರ್ ವಿಭಾಗದ ಮಂಜುನಾಥ ಎನ್, ಜಿ.ಆರ್.ಡಿ ಮತ್ತು ಹೆಚ್.ಪಿ.ಎಫ್. ಘಟಕದ ಕಾರ್ಮಿಕ ಮುಖಂಡರು ಮತ್ತು ಗ್ರಾಮ ಸ್ವಯಂ ಸೇವಕರು ಹಾಗೂ ಕರ್ನಾಟಕ ಮಾರವಾರಿ ಯುಥ್ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.