ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಜಿಲ್ಲಾ ಬಿಜೆಪಿ ವತಿಯಿಂದ ನಗರದ ಪಕ್ಷದ ಕಚೇರಿಯಲ್ಲಿ ಸದಸ್ಯತ್ವ ಅಭಿಯಾನ ಪರಿಶೀಲನಾ ಕಾರ್ಯಗಾರ ಸಭೆ ನಡೆಯಿತು.ರಾಜ್ಯ ಪ್ರಕೋಷ್ಟಗಳ ಸಹ ಸಂಚಾಲಕ ಫಣೀಶ್ ಮಾತನಾಡಿ, ಪ್ರತಿ ಬೂತ್ ಗಳಲ್ಲಿಯೂ ಕನಿಷ್ಠ 300 ಸದಸ್ಯರನ್ನು ನೋಂದಾಯಿಸಬೇಕು, ಸಕ್ರಿಯ ಸದಸ್ಯರಾಗಬೇಕಾದಲ್ಲಿ ಪ್ರತೀ ಒಬ್ಬ ಸದಸ್ಯ 300 ಸದಸ್ಯರನ್ನು ಸದಸ್ಯತ್ವ ಮಾಡಿಸಿದಲ್ಲಿ ಅವರು ಸಕ್ರಿಯ ಸದಸ್ಯತ್ವಕ್ಕೆ ಅರ್ಹರಾಗುತ್ತಾರೆ, ನಮ್ಮ ಬಿಜೆಪಿ ಪದಾಧಿಕಾರಿಗಳು ಅವರವರ ಬೂತ್ ಗಳಲ್ಲಿ ಅತೀ ಹೆಚ್ಚು ಯುವಕರು, ನಾಗರೀಕರು ಮತ್ತು ಮಹಿಳೆಯರನ್ನು ಸದಸ್ಯತ್ವ ಪಡೆಯಲು ಪ್ರೋತ್ಸಾಹಿಸಬೇಕು, ಜೊತೆಗೆ ಸಕ್ರಿಯ ಸದಸ್ಯರಾದವರಿಗೆ ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಸ್ಥಾನಮಾನಗಳನ್ನು ಒದಗಿಸಲು ಸಹಕಾರಿಯಾಗುತ್ತದೆ ಮತ್ತು ಅವರಿಗೆ ಬಿಜೆಪಿ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿಕೊಡುವುದರ ಮೂಲಕ ಸದಸ್ಯತ್ವ ಮಾಡಿಸಬೇಕು, ಇನ್ನುಳಿದ 15 ದಿನಗಳಲ್ಲಿ ಸದಸ್ಯತ್ವ ಸಂಖ್ಯೆ ಹೆಚ್ಚಾಗಬೇಕೆಂದು ಹೇಳಿದರು.ಎಸ್. ಮಹದೇವಯ್ಯ ಮಾತನಾಡಿ, ಯಾವ ಸದಸ್ಯರಿಗೆ ತಮ್ಮ ಮೊಬೈಲ್ ಆಪರೇಟಿಂಗ್ ತಿಳಿಯುವುದಿಲ್ಲ ಅವರಿಗೆ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳ ಸಹಾಯ ಪಡೆದುಕೊಂಡು ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳಬೇಕು, ಈ ಕೆಲಸವನ್ನು ಬೂತ್ ಮಟ್ಟದ ಪದಾಧಿಕಾರಿಗಳು ಮಾಡಬೇಕೆಂದು ತಿಳಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಮಾತನಾಡಿ, ಸದಸ್ಯತ್ವ ಅಭಿಯಾನ ಪರಿಶೀಲನಾ ಕಾರ್ಯಗಾರ ಸಭೆಯು ನಮ್ಮ ಜಿಲ್ಲೆಯ ಪ್ರತೀ ಮಂಡಲಗಳ ಬೂತ್ ಗಳ ವರದಿ ಯಾನುಸಾರವಾಗಿ ನಡೆಯುತ್ತಿದ್ದು, ಆಯಾ ಬೂತ್ ಗಳ ಪದಾಧಿಕಾರಿಗಳು ಸದಸ್ಯರ ನೋಂದಣಿ ಬಗ್ಗೆ ಅಂಕಿ ಅಂಶಗಳ ನಿಖರ ಮಾಹಿತಿಯನ್ನು ಕೊಡಬೇಕೆಂದು ಸಭೆಯಲ್ಲಿ ನೆರೆದಿದ್ದ ಪದಾಧಿಕಾರಿಗಳಿಗೆ ತಿಳಿಸಿದರು,ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಮಾತನಾಡಿ, ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಒಂದು ಸದಸ್ಯತ್ವ ಅಭಿಯಾನವನ್ನು ಯುವಕರು, ಯುವತಿಯರು, ನಾಗರೀಕ ಬಂಧುಗಳು,ಮಹಿಳೆಯರು ತಮ್ಮ ತಮ್ಮ ಮೊಬೈಲ್ ಗಳ ಮುಖೇನ ಸದಸ್ಯತ್ವ ನೋಂದಾಯಿಸಿಕೊಳ್ಳಬಹುದೆಂಬ ಡಿಜಿಟಲ್ ಕಾರ್ಯಗಾರ ವನ್ನು ಸಹ ಈ ಮೂಲಕ ತಿಳಿಸಿರುವುದು ಹೆಮ್ಮೆಯ ಸಂಗತಿ ಹಲವಾರು ಉದ್ದಿಮೆಗಳು ಡಿಜಿಟಲೀಕರಣದ ಮೂಲಕ ನಡೆಯುತ್ತಿದ್ದು, ಇದರಿಂದ ದೇಶದ ಜನತೆಗೆ ಹಲವಾರು ರೀತಿಯ ಪ್ರಯೋಜನಗಳಾಗಿದ್ದು ಪ್ರಸ್ತುತ ಸದಸ್ಯತ್ವ ಅಭಿಯಾನವು ಕೂಡ ಈ ಮೂಲಕ ನಡೆಯುತ್ತಿರುವುದು ದೇಶ ಪ್ರಗತಿಯತ್ತ ಸಾಗುತ್ತಿದೆ ಎಂಬುದನ್ನು ನೋಡಬಹುದಾಗಿದೆ ಎಂದರು.ಸದಸ್ಯತ್ವ ಅಭಿಯಾನದ ಸಂಚಾಲಕಿ ಮಂಗಳ ಸೋಮಶೇಖರ್, ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಮಹೇಶ್ ಮಡವಾಡಿ, ಕಿರಣ್ ಜಯರಾಮೇಗೌಡರು, ಬಾಲಕೃಷ್ಣ, ಎಲ್ಲ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯತ್ವ ಅಭಿಯಾನದ ಪರಿಶೀಲನಾ ಸಭೆಯ ಸಂಚಾಲಕರು, ಸಹ ಸಂಚಾಲಕರು ಹಾಗೂ ಜಿಲ್ಲಾ ಪದಾಧಿಕಾರಿಗಳು ಇದ್ದರು.