ಗಂಜಿ ಬಸವೇಶ್ವರ ದೇವಸ್ಥಾನದಲ್ಲಿ ಜನಮನ ಸೆಳೆಯುವ ಮಳ್ಳು ಅಗಸಿಯ ಕಾಮಣ್ಣ

| Published : Mar 26 2024, 01:19 AM IST

ಗಂಜಿ ಬಸವೇಶ್ವರ ದೇವಸ್ಥಾನದಲ್ಲಿ ಜನಮನ ಸೆಳೆಯುವ ಮಳ್ಳು ಅಗಸಿಯ ಕಾಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಮಳ್ಳು ಅಗಸಿಯ ಕಾಮಣ್ಣ ತನ್ನದೇ ಆದ ಇತಿಹಾಸವನ್ನು ಹೊಂದಿ ರಂಗುರಂಗಿನ ಕಾಮೋತ್ಸವಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಗದಗ

ನಗರದ ಗಂಜಿ ಬಸವೇಶ್ವರ ದೇವಸ್ಥಾನದಲ್ಲಿ ಕಾಮ ರತಿಯ ಉತ್ಸವ ಸಮಿತಿ ವತಿಯಿಂದ ಹೋಳಿ ಹಬ್ಬದ ಅಂಗವಾಗಿ ಐತಿಹಾಸಿಕ ಮಳ್ಳು ಅಗಸಿಯ ಕಾಮ-ರತಿಯ ಪ್ರತಿಷ್ಠಾಪನೆ ಮಾ.೨೫ರಂದು ಸೋಮವಾರ ನಡೆಯಿಲಿದ್ದು ಸಂಘವು ಸಕಲ ಸಿದ್ದತೆ ಕೈ ಗೊಂಡಿದೆ.

ಕಾಮ-ರತಿಯ ಉತ್ಸವ ಸಂಘ ಶತಮಾನೋತ್ಸವವನ್ನು ಆಚರಿಸಿಕೊಂಡಿದ್ದು, ರಂಗ ಪಂಚಮಿಗೆ ಗದಗ ಹೆಸರುವಾಸಿಯಾಗಿದ್ದು, ಅದರಲ್ಲಿ ಮಳ್ಳು ಅಗಸಿಯ ಕಾಮಣ್ಣ ತನ್ನದೇ ಆದ ಇತಿಹಾಸವನ್ನು ಹೊಂದಿ ರಂಗುರಂಗಿನ ಕಾಮೋತ್ಸವಕ್ಕೆ ಕಾರಣವಾಗಿದೆ. ಹೆಚ್ಚಾಗಿ ರೈತ ವರ್ಗವನ್ನು ಹೊಂದಿರುವ ಒಕ್ಕಲಗೇರಿ, ಉಸುಗಿನಕಟ್ಟಿ ಹಾಗೂ ದ್ಯಾಮವ್ವನ ಕಟ್ಟಿ ಪ್ರದೇಶದಲ್ಲಿ ಮಳ್ಳು ಅಗಸಿಯ ಕಾಮಣ್ಣ ಸಾಂಸ್ಕೃತಿಕ ಗದುಗಿನ ಲೋಕದಲ್ಲಿ ರೈತರ ಗೌರವವನ್ನು ಹೆಚ್ಚಿಸುವಲ್ಲಿ ತನ್ನದೇಯಾದ ಪಾತ್ರ ವಹಿಸಿದೆ.

ಈ ಕಾಮಣ್ಣ ರೂಪದಲ್ಲಿಯೇ ಅಪರೂಪ, ಪರಂಪರೆಯಲ್ಲಿ ವೈಶಿಷ್ಟತೆ, ಇತಿಹಾಸದಲ್ಲಿ ಶ್ರೇಷ್ಠ ಎನ್ನುವಂತೆ ಉಸುಗಿನ ಕಟ್ಟೆಯಲ್ಲಿ ಪ್ರತಿಷ್ಠಾಪನೆಗೊಳ್ಳುವ ಕಾಮಣ್ಣನ ಮಖರಾಶಿಯನ್ನು ನೋಡಿದಾಗ ಅಪರೂಪದ ಗಾಂಭೀರ್ಯದ ನಗುವಿನ ರೈತರ ಮುಖದಂತೆ ಪ್ರತಿಷ್ಠಾಪನೆಗೊಳಿಸಲಾಗುತ್ತದೆ. ಆ ಹಿನ್ನೆಲೆಯಲ್ಲಿ ಕಾಮ-ರತಿ ಮೂರ್ತಿಗಳಿಗೆ ರೈತ ವರ್ಗದವರ ದೋತ್ರ ಹಾಗೂ ದಟಿ ಸೀರೆ ಉಡುಗೆಯ ತೊಡಗಿಗಳನ್ನು ಹಾಕಿ ರೈತ ಗಾಂಭೀರ್ಯ ನಗುವಿನಂತೆ ಅಲಂಕರಿಸಿರುತ್ತಾರೆ. ಈ ಕಾಮಣ್ಣನ ಉತ್ಸವವು ಮೂರು ತಲೆಮಾರಿನಿಂದ ನಡೆದುಕೊಂಡು ಬರುತ್ತಿದ್ದು ಅನೇಕ ಏಳು ಬೀಳುಗಳನ್ನು ಕಂಡರೂ ಸ್ಥಗಿತಗೊಳಿಸದೆ ಸಂಪ್ರದಾಯ ಬದ್ಧವಾಗಿ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದೆ.ವಿಜೃಂಭಣೆಯ ಆಚರಣೆ

ಪ್ರತಿ ವಷರ್ದಂತೆ ಈ ವಷರ್ವೂ ಕಾಮೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಸಾರ್ವಜನಿಕರು ಆಗಮಿಸಿ ಹೋಳಿ ಹುಣ್ಣಿಮೆಯ ರಂಗು ರಂಗಿನ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಬೇಕು.

ಸಿದ್ದಲಿಂಗೇಶ್.ಬಸಪ್ಪ.ಸಂಗನಾಳ