ಬಿಜೆಪಿ ವತಿಯಿಂದ ನಗರದ ಎಸ್,ಆರ್.ಬಿ.ಎಂ.ಎಸ್ ರೋಟರಿ ಬಾಲಭವನದಲ್ಲಿ ಮಾಜಿ ಪ್ರಧಾನಮಂತ್ರಿ ಆಟಲ್ ವಾಜಿಪೇಯಿರವರ ಜನ್ಮ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಅಟಲ್ ವಿರಾಸತ್ ಕಾರ್ಯಕ್ರಮವನ್ನು ಸಂಸದ ಗೋವಿಂದ ಕಾರಜೋಳ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಅಧಿಕಾರಕ್ಕಾಗಿ ಅಡ್ಡದಾರಿಯನ್ನು ಹಿಡಿಯದೆ ನ್ಯಾಯಯುತವಾದ ದಾರಿಯಲ್ಲಿ ಅಧಿಕಾರವನ್ನು ಹಿಡಿಯುವುದರ ಮೂಲಕ ದೇಶದ ಅಭಿವೃದ್ಧಿಯಲ್ಲಿ ತಮ್ಮದೆಯಾದ ಮಹತ್ತರ ಕೊಡುಗೆ ನೀಡಿದ ಅಟಲ್ ಬಿಹಾರಿ ವಾಜಪೇಯಿರವರು ಮೌಲ್ಯಾಧಾರಿತವಾದ ರಾಜಕಾರಣಿ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.ಬಿಜೆಪಿ ವತಿಯಿಂದ ನಗರದ ಎಸ್,ಆರ್.ಬಿ.ಎಂ.ಎಸ್ ರೋಟರಿ ಬಾಲಭವನದಲ್ಲಿ ಗುರುವಾರ ಭಾರತರತ್ನ ಮಾಜಿ ಪ್ರಧಾನಮಂತ್ರಿ ಆಟಲ್ ವಾಜಿಪೇಯಿರವರ ಜನ್ಮ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಅಟಲ್ ವಿರಾಸತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜ ಹಾಗೂ ದೇಶದ ಬಗ್ಗೆ ಅಪಾರ ಕಳಕಳಿಯನ್ನು ಹೊಂದಿದ್ದರು. ಏನೇ ಆದರೂ ಸಹಾ ದೇಶ ಮೊದಲು ಎನ್ನುತ್ತಿದ್ದರು. ಬಡತನದಿಂದ ಬಂದವರಾಗಿದ್ದು ಬಡವರ ಬಗ್ಗೆ ಆಪಾರವಾದ ಕಾಳಿಜಿ ಹೊಂದುವುದರ ಮೂಲಕ ತಮ್ಮ ಅಧಿಕಾರದ ಅವಧಿಯಲ್ಲಿ ಅವರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿ ಮಾಡಿದರು. ಶಿಕ್ಷಣ, ರಸ್ತೆಗಳ ಅಭಿವೃದ್ಧಿ ಮಾಡುವುದರ ಮೂಲಕ ರಸ್ತೆ ನಿರ್ಮಾಣದಲ್ಲಿ ಕ್ರಾಂತಿಯನ್ನು ಮಾಡಿದರು ಎಂದರು.
ಅವರು ಬೆಳಿಸಿದ ಬಿಜೆಪಿ ಇಂದು ದೇಶದಲ್ಲಿ ಹಲವಾರು ರಾಜ್ಯಗಳಲ್ಲಿ ತನ್ನ ಅಧಿಕಾರ ಹಿಡಿದಿದೆ ಇದಕ್ಕೆ ವಾಜಿಪೇಯಿ ಅವರ ಪರಿಶ್ರಮ ಕಾರಣವಾಗಿದೆ. ಅಟಲ್ ಬಿಹಾರಿ ವಾಜಪೇಯಿ ಭಾರತದ ಪ್ರಮುಖ ರಾಜಕಾರಣಿ, ಮಹಾನ್ ವಾಗ್ನಿ, ಕವಿ ಮತ್ತು ದೇಶಭಕ್ತ ನಾಯಕರಾಗಿದ್ದರು. ಅವರು ಮೂರು ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಸಮನ್ವಯ, ಸಂವಾದ ಮತ್ತು ರಾಷ್ಟ್ರಹಿತವನ್ನು ರಾಜಕೀಯದ ಕೇಂದ್ರದಲ್ಲಿ ಇರಿಸಿದರು. 1998 ರಿಂದ 2004ರವರೆಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಭಾರತವು ಆರ್ಥಿಕ, ವಿಜ್ಞಾನ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಹೆಜ್ಜೆ ಇಟ್ಟಿತು. ಪೋಟ್ರಾನ್ಅಣುಪರೀಕ್ಷೆ, ಸುವರ್ಣ ಚತುಷ್ಪಥ ಯೋಜನೆ, ಮತ್ತು ಪಾಕಿಸ್ತಾನ ಜೊತೆ ಶಾಂತಿ ಪ್ರಯತ್ನಗಳು ಅವರ ಆಡಳಿತದ ಪ್ರಮುಖ ಸಾಧನೆಗಳಾಗಿವೆ ಎಂದು ತಿಳಿಸಿದರು.
ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ವಾಜಪೇಯಿ ರವರು ಕಠಿಣ ತತ್ವಗಳ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಾಪಾಡಿದ ನಾಯಕರು, ರಾಜಕಾರಣದಲ್ಲಿ ವಿರೋಧವಿದ್ದರೂ ದ್ವೇಷ ಇರಬಾರದು ಎಂಬ ನಂಬಿಕೆ ಹೊಂದಿದವರಾಗಿದ್ದರು ಎಂದರು.ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್, ಚಿತ್ರದುರ್ಗದ ರಾಘವೇಂದ್ರ ಹಾಗೂ ಪುಟ್ಟಸ್ವಾಮಿ ತಮ್ಮ ಹಾಗೂ ವಾಜಿಪೇಯಿಯವರ ಜೊತೆಗಿನ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ವಹಿಸಿದ್ದರು. ಸಮಾರಂಭದಲ್ಲಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಖನಿಜ ನಿಗಮದ ಮಾಜಿ ಅಧ್ಯಕ್ಷ ಲಿಂಗಮೂರ್ತಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಶ್ರೀಮತಿ ಶ್ಯಾಮಾಲ ಶಿವಪ್ರಕಾಶ್, ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗರಾಜ್, ಬಾಳೇಕಾಯಿ ರಾಮದಾಸ್, ಮಾಜಿ ಅಧ್ಯಕ್ಷ ಎ.ಮುರಳಿ, ಖಂಜಾಚಿ ಮಾಧುರಿ ಗೀರೀಶ್, ಡಿಸಿಸಿ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಲಕ್ಷ್ಮೀಕಾಂತ್, ಪಾಪೇಶ್ ನಾಯಕ್, ರತ್ನಮ್ಮ ಸೇರಿದಂತೆ ವಿವಿಧ ಮಂಡಲ ಮೋರ್ಚಾದ ಅಧ್ಯಕ್ಷರು ಭಾಗವಹಿಸಿದ್ದರು. ಇದಕ್ಕೂ ಮುನ್ನಾ ನಗರದಲ್ಲಿ ಸಮಾರಂಭದ ಗಣ್ಯರು ವಾಜಿಪೇಯಿಯವರ ಸ್ಮರಣೆಯ ಅಂಗವಾಗಿ ಸಸಿಗಳನ್ನು ನಡೆಲಾಯಿತು. ಮುರಾರ್ಜಿ ಪ್ರಾರ್ಥಿಸಿದರೆ, ಸಂಪತ್‍ಕುಮಾರ್ ಸ್ವಾಗತಿಸಿದರು ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.