ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೧೦೧ನೇ ವರ್ಷದ ಜನ್ಮದಿನವನ್ನು ಅಟಲ್ ಜನ್ಮ ಶತಾಬ್ಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ವಾಜಪೇಯಿ ಅವರು ೧೯೨೫ರಲ್ಲಿ ಜನ್ಮ ತಾಳಿದ್ದು, ಅವರು ಶಿಕ್ಷಣ ಪಡೆದೂ ಜನಸಂಘದ ಮೂಲಕ ರಾಜಕೀಯಕ್ಕೆ ಪಾದರ್ಪಣೆ ಮಾಡುತ್ತಾರೆ. ಜನಸಂಘದ ಮೂಲಕ ಪಕ್ಷವನ್ನು ಕಟ್ಟಿ ರಾಜಕೀಯದಲ್ಲಿ ಅವರೆ ಕ್ರಾಂತಿಯನ್ನು ಮೂಡಿಸಿದವರು. ಪ್ರಧಾನಿಯಾಗಿ ಹಲವಾರು ಯೋಜನೆಯನ್ನು ಜಾರಿಗೆ ತಂದರು. ಪಕ್ಷಕ್ಕಿಂತ ದೇಶ ಮುಖ್ಯ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಹೇಳಿಕೊಟ್ಟವರು. ಯಾವುದೇ ಸ್ವಾರ್ಥವಿಲ್ಲದೇ ಪಕ್ಷತೀತವಾಗಿ ಇದ್ದವರು. ಅವರ ಆದರ್ಶವನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಭಾರತದ ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರ್ ವಾಜಪೇಯಿ ಅವರ ೧೦೧ನೇ ವರ್ಷದ ಜನ್ಮ ದಿನಾಚರಣೆಯನ್ನು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಆಚರಿಸಿದರು.ಇದೇ ಕಾರ್ಯಕ್ರಮದಲ್ಲಿ ಪಕ್ಷಕ್ಕಾಗಿ ಹಲವಾರು ವರ್ಷಗಳ ಕಾಲ ದುಡಿದ ಬಿಜೆಪಿಯ ಹಿರಿಯರಾದ ರಮೇಶ್ ಮತ್ತು ಪ್ರೇಮ್‌ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಪಕ್ಷದ ಕೆಲ ಹಿರಿಯರು ಮಾತನಾಡಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೧೦೧ನೇ ವರ್ಷದ ಜನ್ಮದಿನವನ್ನು ಅಟಲ್ ಜನ್ಮ ಶತಾಬ್ಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ವಾಜಪೇಯಿ ಅವರು ೧೯೨೫ರಲ್ಲಿ ಜನ್ಮ ತಾಳಿದ್ದು, ಅವರು ಶಿಕ್ಷಣ ಪಡೆದೂ ಜನಸಂಘದ ಮೂಲಕ ರಾಜಕೀಯಕ್ಕೆ ಪಾದರ್ಪಣೆ ಮಾಡುತ್ತಾರೆ. ಜನಸಂಘದ ಮೂಲಕ ಪಕ್ಷವನ್ನು ಕಟ್ಟಿ ರಾಜಕೀಯದಲ್ಲಿ ಅವರೆ ಕ್ರಾಂತಿಯನ್ನು ಮೂಡಿಸಿದವರು. ಪ್ರಧಾನಿಯಾಗಿ ಹಲವಾರು ಯೋಜನೆಯನ್ನು ಜಾರಿಗೆ ತಂದರು. ಪಕ್ಷಕ್ಕಿಂತ ದೇಶ ಮುಖ್ಯ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಹೇಳಿಕೊಟ್ಟವರು. ಯಾವುದೇ ಸ್ವಾರ್ಥವಿಲ್ಲದೇ ಪಕ್ಷತೀತವಾಗಿ ಇದ್ದವರು. ಅಜಾತ ಶತ್ರು. ಹಲವಾರು ಕವನ ಕೂಡ ಬರೆದಿದ್ದಾರೆ. ಅವರ ಆದರ್ಶವನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿಕಸನ ಭಾರತ ಅಂದು ಬಂದಿರುವುದನ್ನು ಇಂದು ಮೋದಿ ಅವರು ನಡೆಸಿಕೊಂಡು ಬರುತ್ತಿದ್ದಾರೆ. ಅವರ ಅಧಿಕಾರವಧಿಯಲ್ಲಿ ಮಾಡಿದ ಸಾಧನೆ ಬಗ್ಗೆ ಕಾರ್ಯಕರ್ತರಿಗೆ ಜಾಗೃತಿ ಮೂಡಿಸಬೇಕು ಎಂದರು. ಉತ್ತಮ ಆಡಳಿತ ದಿನ ಎಂದು ಕರೆಯಲ್ಪಡುವ ಈ ದಿನವು ಅವರ ನಾಯಕತ್ವ ಮತ್ತು ಅವರು ದೇಶದ ಮೇಲೆ ಬೀರಿದ ಧನಾತ್ಮಕ ಪ್ರಭಾವವನ್ನು ಆಚರಿಸುತ್ತದೆ. ವಾಜಪೇಯಿ ಅವರು ಮೂರು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು ಮತ್ತು ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ವಾಜಪೇಯಿ ಜೊತೆ ನಡೆದ ಹಾಗೂ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ ಬಿಜೆಪಿ ಪಕ್ಷದ ಹಿರಿಯರು ಆಲೂರು ರಮೇಶ್ ಮತ್ತು ಪ್ರೇಮಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಿ. ಎಚ್. ನಾರಾಯಣಗೌಡ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹರ್ಷಿತ್, ಉಪಾಧ್ಯಕ್ಷ ಶೋಭನ್ ಬಾಬು, ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್ ಕುಮಾರ್, ಯುವ ಮೋರ್ಚಾ ಮಾಜಿ ಅಧ್ಯಕ್ಷ ಚನ್ನಕೇಶವ, ಎಚ್.ಎನ್. ನಾಗೇಶ್, ವೇಧವತಿ, ಸುಮಾ, ದಯಾನಂದ್, ಮಹೇಶ್ ಇತರರು ಇದ್ದರು.