ಅಟಲ್ ಜೀಯವರು ವಾಗ್ಮಿಗಳಾಗಿದ್ದರು, ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಸಮರ್ಥ ನಾಯಕರಾಗಿದ್ದು, ಅಂದಿನ ಜೋಡಿಗಳಾದ ಅಟಲ್ ಜೀ ಮತ್ತು ಆಡ್ವಾನಿ ಜೀ ರವರು ಪ್ರಸ್ತುತ ಬಿಜೆಪಿಯನ್ನು ಸದೃಢವಾಗಿ ಬೆಳೆಯಲು ಭದ್ರಬುನಾದಿಯನ್ನು ಹಾಕಿಕೊಟ್ಟವರು.
ಚಿಂತಾಮಣಿ: ನಗರದ ಬಿಜೆಪಿ ಕಚೇರಿಯಲ್ಲಿ ಅಜಾತಶತ್ರು, ಮಾಜಿ ಪ್ರಧಾನಿ, ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನವನ್ನು ಅವರ ಭಾವಚಿತ್ರವಿರಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ಹಿರಿಯ ಬಿಜೆಪಿಗರಾದ ಪ್ರಕಾಶ್ ಗುಪ್ತಾ ಮಾತನಾಡಿ, ಅಟಲ್ ಜೀಯವರು ವಾಗ್ಮಿಗಳಾಗಿದ್ದರು, ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಸಮರ್ಥ ನಾಯಕರಾಗಿದ್ದು, ಅಂದಿನ ಜೋಡಿಗಳಾದ ಅಟಲ್ ಜೀ ಮತ್ತು ಆಡ್ವಾನಿ ಜೀ ರವರು ಪ್ರಸ್ತುತ ಬಿಜೆಪಿಯನ್ನು ಸದೃಢವಾಗಿ ಬೆಳೆಯಲು ಭದ್ರಬುನಾದಿಯನ್ನು ಹಾಕಿಕೊಟ್ಟವರು ಎಂದು ಸ್ಮರಿಸಿದರು. ಈ ವೇಳೆ ಹಿರಿಯ ಮುಖಂಡರಾದ ಪ್ರಕಾಶ್ ಗುಪ್ತಾ, ಜಾನಕಿರಾಮ್, ಶ್ರೀಧರ್ ಮೂರ್ತಿ ಸೇರಿ ಹಿರಿಯ ಬಿಜೆಪಿಗರನ್ನು ಗುರುತಿಸಿ ಸನ್ಮಾನಿಸಲಾಯಿತು. ವಾಜಪೇಯಿ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಕಾರ್ಯಕರ್ತರು ಸಿಹಿಹಂಚಿ ಸಂಭ್ರಮಿಸಿದರು. ಅಧ್ಯಕ್ಷ ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಗೋಕುಲ್ ಶ್ರೀನಿವಾಸ್, ಗಾಜಲಶಿವ, ನಿಕಟಪೂರ್ವ ಅಧ್ಯಕ್ಷ ಮಹೇಶ್ ಬೈ, ಆಂಜಪ್ಪ, ದೇವರಾಜ್, ಮಹಿಳಾ ಮೋರ್ಚಾ ಅಧ್ಯಕ್ಷೆ ಶೃತಿ, ಶ್ವೇತಾ, ವೇದಾವತಿ, ನಂದಕುಮಾರಿ, ಮಮತ, ದಿವ್ಯಾ, ಸುಮಿತ್ರಾಮ್ಮ, ಮಂಗಳಗೌರಿ, ಎಚ್.ವಿ.ಅಮೃತ ಮತ್ತಿತರರು ಉಪಸ್ಥಿತರಿದ್ದರು.