ಕನ್ನಡಪ್ರಭ ವಾರ್ತೆ ಸಾಲಿಗ್ರಾಮರೈತರ ಪರವಾಗಿ ಕಾಳಜಿ ಇಟ್ಟುಕೊಳ್ಳದಿದ್ದರೆ ಖಾಸಗಿಯಾಗಲಿ ಇಲ್ಲ ಸರ್ಕಾರದ ಸಂಸ್ಥೆಗಳೇ ಆಗಲಿ ಉಳಿಗಾಲವಿಲ್ಲ ಎಂದು ಹೊಸೂರು ಡೇರಿ ಮಾಜಿ ಅಧ್ಯಕ್ಷ ಬಿ. ರಮೇಶ್ ಹೇಳಿದರು. ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದ ಮೀನ್ ಮಧು ಅವರ ಜಮೀನಿನಲ್ಲಿ ನಡೆದ ಅಟಲ್ ಭತ್ತದ ಬೆಳೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಿಜ್ಞಾನಿಗಳಿಗಿಂತ ರೈತ ಯಾವುದರಲ್ಲೂ ಹಿಂದೆ ಇಲ್ಲ ಹೊಸ ಹೊಸ ತಳಿಗಳು ರೈತನ ಕೈಹಿಡಿದರೆ ಕಂಪನಿಗಳು ತಾನೆ ತಾನಾಗಿ ಬೆಳೆಯುತ್ತವೆ ಅದೇ ರೀತಿ ಲಿವಿಂಗ್ ಸೀಡ್ ಕಂಪನಿಯು ಚುಂಚನಕಟ್ಟೆ ಭಾಗದಲ್ಲಿ ನೀಡಿರುವ ಆರೋಹ ಮತ್ತು ಅಟಾಲ್ ಸ್ಥಳೀಯ ಭತ್ತವು ಉತ್ಕೃಷ್ಟವಾಗಿ ಬೆಳೆದಿದ್ದು ಕಂಪನಿಯವರಿಗೆ ಕೃತಜ್ಞತೆ ಸಲ್ಲಿಸಲಾಯಿತು.ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಮಾತನಾಡಿ, ಅಟಲ್ ಭತ್ತದ ಬೆಳೆಯು ಬ್ಲಾಸ್ಟ್ ಮತ್ತು ಬೆಂಕಿ ರೋಗ ಸೇರಿದಂತೆ ಮುಂತಾದ ರೋಗಗಳಿಂದ ಮುಕ್ತವಾದ ಬೆಳೆಯಾಗಿದ್ದು, ಹಳೆಯ ತಳಿಗಳ ಇಳುವರಿಗಿಂತ 15 ರಿಂದ 20 ಶೇಕಡ ಇಳುವರಿ ಹೆಚ್ಚಾಗಿದ್ದು, ಅಟಲ್ ಭತ್ತಕ್ಕೆ ಉತ್ತಮ ಪ್ರತಿಕ್ರಿಯ ರೈತರಿಂದ ಬರುತ್ತಿದೆ ಎಂದು ಮಾಹಿತಿ ನೀಡಿದರು.ಪ್ರಗತಿಪರ ರೈತರಾದ ಮೀನ್ ಮಧು ಮತ್ತು ಎಚ್.ಕೆ. ಶಿವಣ್ಣ ಅವರಿಗೆ ಸನ್ಮಾನಿಸಿ ಸ್ಪ್ರೇಯರ್ ಗಳನ್ನು ಬಹುಮಾನವಾಗಿ ವಿತರಿಸಲಾಯಿತು.ಹೊಸೂರು ಡೇರಿ ಅಧ್ಯಕ್ಷ ಎಚ್.ವಿ. ಸ್ವಾಮಿ, ಕೃಷಿಕ ಸಮಾಜದ ನಿರ್ದೇಶಕ ಡಿ.ಸಿ. ರಾಮೇಗೌಡ, ಸಂಘದ ಮಾಜಿ ಅಧ್ಯಕ್ಷ ಯಶ್ವಂತ್ ಗೋಪಾಲ್, ಹರೀಶ್, ಕಂಪನಿಯ ವೆಂಕಟೇಶ್, ವಿತರಕ ಶಿವಕುಮಾರ್, ಉದ್ಯಮಿ ಸುದರ್ಶನ್ ಇದ್ದರು.
ರೈತರ ಪರವಾಗಿ ಕಾಳಜಿ ಇಟ್ಟುಕೊಳ್ಳದಿದ್ದರೆ ಉಳಿಗಾಲವಿಲ್ಲ
ಹೊಸ ಹೊಸ ತಳಿಗಳು ರೈತನ ಕೈಹಿಡಿದರೆ ಕಂಪನಿಗಳು ತಾನೆ ತಾನಾಗಿ ಬೆಳೆಯುತ್ತವೆ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.