ಸಾರಾಂಶ
ಸಖರಾಯಪಟ್ಟಣದಲ್ಲಿ ವಾಜಪೇಯಿ ಜನ್ಮ ಶತಮಾನೋತ್ಸವ ಹಿನ್ನಲೆ ನಾಯಕ್ ಕೃಷ್ಣ ಸ್ವಾಮಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ, ಕಡೂರುಅಟಲ್ ಬಿಹಾರಿ ವಾಜಪೇಯಿಯವರು ಬಿಜೆಪಿ ಮೊದಲ ಅಧ್ಯಕ್ಷರಾಗಿ ಹಾಗೂ ಮೊದಲ ಪ್ರಧಾನಿಯಾಗಿ ಪಕ್ಷದ ನೇತೃತ್ವದ ಸರ್ಕಾರವನ್ನು ಮುನ್ನಡೆಸಿ ದೇಶಕ್ಕೆ ಮಾದರಿ ಆಡಳಿತ ನೀಡಿದ್ದರು ಎಂದು ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಭರಣ್ಯ ಹೇಳಿದರು.
ತಾಲೂಕಿನ ಸಖರಾಯಪಟ್ಟಣದಲ್ಲಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವದ ಹಿನ್ನಲೆಯಲ್ಲಿ ಪಟ್ಟಣದ ಬಿಜೆಪಿ ಹಿರಿಯ ಮುಖಂಡ ಹಾಗೂ ಬಿಜೆಪಿ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಯಕ್ ಕೃಷ್ಣ ಸ್ವಾಮಿಯವರನ್ನು ಅವರ ನಿವಾಸದಲ್ಲಿ ಸನ್ಮಾನಿಸಿ ಮಾತನಾಡಿದರು. ಅಟಲ್ ಬಿಹಾರಿ ವಾಜಪೇಯಿಯವರು ಮೊದಲ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿ ಗ್ರಾಪಂನಿಂದ ಪಾರ್ಲಿಮೆಂಟಿನವರೆಗೆ ಸದಸ್ಯರಾಗಿ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು. ಅವರ ಅವಧಿಯಲ್ಲಿ ಬಿಜೆಪಿ ಮನೆ ಮಾತಾಯಿತು. ಹಾಗಾಗಿ ದೇಶದಾದ್ಯಂತ ಶ್ರಮಿಸಿದ ಹಿರಿಯರನ್ನು ಗೌರವಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.ಆ ಸಮಯದಲ್ಲಿ ಕೆಲಸ ಮಾಡಿದ ನಮ್ಮ ಜಿಲ್ಲೆಯವರಾದ ನಾಯಕ್ ಕೃಷ್ನಸ್ವಾಮಿ ಆಗಿನ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿ ಕೆಲಸ ನಿರ್ವಹಿಸಿದ್ದರು. ಅವರ ಸವಿ ನೆನಪಿಗೆ ಬಿಜೆಪಿ ಮಂಡಲದಿಂದ ಸನ್ಮಾನಿಸಲಾಗುತ್ತಿದೆ. ಇಂದು ಬಿಜೆಪಿ ಸಾವಿರಾರು ಶಾಸಕರು ಮತ್ತು 265 ಸಂಸದರನ್ನು ಹೊಂದಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ ಎಂದರು. ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್. ಸಿ. ಕಲ್ಮರುಡಪ್ಪ ಮಾತನಾಡಿ, ಭಾರತೀಯ ಜನತಾ ಪಾರ್ಟಿ ಇಂದು ಸಹಸ್ರಾರು ಕಾರ್ಯಕರ್ತರನ್ನು ಹೊಂದಿದ್ದು ಆಗಿನ ಕಾಲದ ಬಿಜೆಪಿಯನ್ನು ಎತ್ತಿ ಹಿಡಿಯುವಲ್ಲಿ ಹಲವಾರು ಜನ ಶ್ರಮಿಸಿ ದ್ದಾರೆ.ಅಂತಹವರ ಶ್ರಮ ಶ್ಲಾಘನೀಯ. ಈ ನಿಟ್ಟಿನಲ್ಲಿ ಹಿರಿಯವರಾದ ನಾಯಕ್ ಕೃಷ್ಣಸ್ವಾಮಿಯನ್ನು ಗೌರವಿಸಲಾಗುತ್ತಿದೆ ಎಂದರು.ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಗುಣಸಾಗರ ವಿಜಯಕುಮಾರ್ ಮಾತನಾಡಿ, ಬಿಜೆಪಿ ಅಟಲ್‍ಜಿ ಕಾಲದಲ್ಲಿ ಉತ್ತುಂಗಕ್ಕೆ ಬಂದು ಇಂದಿನವರೆಗೂ ದೇಶದಾದ್ಯಂತ ಆಡಳಿತ ನಿರ್ವಹಿಸುತ್ತಿದೆ. ಅದನ್ನು ಸ್ಮರಿಸಲು ಈ ಕಾರ್ಯಕ್ರಮ ಮಾಡುತ್ತಿದ್ದು , ಈ ಭಾಗದಲ್ಲಿ ಕಳಸಾಪುರದಿಂದ ಸತ್ಯನಾರಾಯಣ, ದೇವನೂರಿನಿಂದ ಮುರುಳೀಧರ, ಬೆಳವಾಡಿಯಿಂದ ಗಣೇಶಭಟ್ಟ, ಈಶ್ವರಳ್ಳಿಯಿಂದ ಬೋರೇಗೌಡರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಈಶ್ವರಳ್ಳಿ ಮಹೇಶ್ , ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ರಾಜೀವ್, ಬಿಳೇಕಲ್ಲಳ್ಳಿ ಪ್ರಕಾಶ್, ಪ್ರಮುಖರಾದ ಸಾದರಳ್ಳಿ ಬಸವರಾಜು, ಪಾದಮನೆ ದಿನೇಶ್, ಮೋಕ್ಷನಾಥ್ ಪುಷ್ಪರಾಜ್ ಹಾಗೂ ಇತರರು ಇದ್ದರು.
14ಕೆಕೆಡಿಯು1.ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಮಾನೋತ್ಸವದ ಹಿನ್ನಲೆಯಲ್ಲಿ ಪಟ್ಟಣದ ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ನಾಯಕ್ ಕೃಷ್ಣ ಸ್ವಾಮಿಯವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.